ಲೋನ್ ಪಡೆಯುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಎಸ್‌ಬಿಐ ! ಹಬ್ಬದ ಋತುವಿನಲ್ಲಿ ಸಾವಿರಾರು ರೂ.ಗಳ ಲಾಭ

ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ   ಹಬ್ಬದ ಋತುವಿನಲ್ಲಿ ವಿಶೇಷ ಆಫರ್ ನೀಡುತ್ತಿದೆ. ಎಸ್‌ಬಿಐಯ ಈ ನಿರ್ಧಾರದಿಂದ ಕಾರು ಸಾಲ ಪಡೆಯುವ ಗ್ರಾಹಕರು ಹಲವಾರು ಸಾವಿರ ರೂಪಾಯಿಗಳನ್ನು ಉಳಿಸುವುದು ಸಾಧ್ಯವಾಗುತ್ತದೆ.  

Written by - Ranjitha R K | Last Updated : Sep 27, 2023, 09:01 AM IST
  • ಗ್ರಾಹಕರಿಗೆ ಕಾಲಕಾಲಕ್ಕೆ ಹಲವು ಸೌಲಭ್ಯ
  • ಗ್ರಾಹಕರಿಗೆ ಹಬ್ಬದ ಋತುವಿನಲ್ಲಿ ವಿಶೇಷ ಆಫರ್
  • ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಎಸ್‌ಬಿಐ
ಲೋನ್ ಪಡೆಯುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಎಸ್‌ಬಿಐ ! ಹಬ್ಬದ ಋತುವಿನಲ್ಲಿ ಸಾವಿರಾರು ರೂ.ಗಳ ಲಾಭ  title=

ಬೆಂಗಳೂರು : ಎಸ್‌ಬಿಐ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ಕಾರು ಖರೀದಿಸಬೇಕು ಎನ್ನುವವರಿಗೆ ಬ್ಯಾಂಕ್ ವಿಶೇಷ ಉಡುಗೊರೆ ನೀಡಿದೆ. ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ   ಹಬ್ಬದ ಋತುವಿನಲ್ಲಿ ವಿಶೇಷ ಆಫರ್ ನೀಡುತ್ತಿದೆ. ಇದರ ಪ್ರಕಾರ ಕಾರ್ ಲೋನ್ ಪಡೆಯುವವರು ಇನ್ನು ಮುಂದೆ ಯಾವುದೇ ರೀತಿಯ ಪ್ರೊಸೆಸಿಂಗ್  ಶುಲ್ಕವನ್ನು ಪಾವತಿಸಬೇಕಾಗಿಲ್ಲ. 

ಎಸ್‌ಬಿಐಯ ಈ ನಿರ್ಧಾರದಿಂದ ಕಾರು ಸಾಲ ಪಡೆಯುವ ಗ್ರಾಹಕರು ಹಲವಾರು ಸಾವಿರ ರೂಪಾಯಿಗಳನ್ನು ಉಳಿಸುವುದು ಸಾಧ್ಯವಾಗುತ್ತದೆ.  ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಎಸ್‌ಬಿಐ ಮಾಹಿತಿ ನೀಡಿದೆ. 

ಇದನ್ನೂ ಓದಿ : October 1 ರಿಂದ ನಿಮ್ಮ ಜೀವನದಲ್ಲಾಗುತ್ತಿವೆ ಈ ಬದಲಾವಣೆಗಳು, ಇಂದೇ ತಿಳಿದುಕೊಂಡು ಸಂಭಾವ್ಯ ಹಾನಿಯಿಂದ ಪಾರಾಗಿ!

ಬ್ಯಾಂಕ್ ಮಾಡಿರುವ ಟ್ವೀಟ್ ನಲ್ಲಿ ಏನಿದೆ ? :
ಈ ಬಾರಿ ನಿಮ್ಮ ಹಬ್ಬದ ಖುಷಿಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಬ್ಯಾಂಕ್ ತನ್ನ ಟ್ವೀಟ್ ನಲ್ಲಿ ಹೇಳಿದೆ. ಅಲ್ಲದೆ ಎಸ್‌ಬಿಐ ಜೊತೆಗೆ ನಿಮ್ಮ ಕನಸಿನ ಕಾರನ್ನು ಖರೀದಿಸಬಹುದು ಎಂದು ಹೇಳಿಕೊಂಡಿದೆ. 

 

ಇದನ್ನೂ ಓದಿ : 2,000 ರೂಪಾಯಿ ನೋಟಿನ ಬಗ್ಗೆ ಆರ್ ಬಿಐ ಹೊಸ ಅಪ್ಡೇಟ್ ! ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ಆಫರ್ ಜನವರಿ 31 ರವರೆಗೆ ಈ ಆಫರ್ : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರಕಾರ, ಹಬ್ಬದ ಕೊಡುಗೆಯ ಅಡಿಯಲ್ಲಿ ಕಾರ್ ಲೋನ್ ಗ್ರಾಹಕರಿಂದ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುವುದಿಲ್ಲ. SBI ವೆಬ್‌ಸೈಟ್ ಪ್ರಕಾರ, ಈ ಕೊಡುಗೆಯು ಜನವರಿ 31, 2024 ರವರೆಗೆ ಮಾನ್ಯವಾಗಿರುತ್ತದೆ. 

ಬ್ಯಾಂಕ್ ಈಗ ಯಾವ ದರದಲ್ಲಿ ಸಾಲ ನೀಡುತ್ತಿದೆ?
ಒಂದು ವರ್ಷದ MCLR ಅನ್ನು SBI ಆಟೋ ಲೋನ್ ಮೇಲೆ ನೀಡುತ್ತದೆ. ಸದ್ಯ ಇದು ಶೇ.8.55ರಷ್ಟಿದೆ. ಬ್ಯಾಂಕ್ ಯಾವುದೇ ಗ್ರಾಹಕರಿಗೆ ಕಾರು ಸಾಲವನ್ನು ನೀಡಿದರೆ, ಅದು ಕನಿಷ್ಠ ಶೇಕಡಾ 8.55 ಬಡ್ಡಿ ದರವನ್ನು ವಿಧಿಸುತ್ತದೆ. ಪ್ರಸ್ತುತ ಎಸ್‌ಬಿಐ ಕಾರು ಸಾಲವು ಶೇಕಡಾ 8.80 ರಿಂದ 9.70 ರಷ್ಟಿದೆ. SBI ಸಾಲಗಳ ಮೇಲಿನ ಬಡ್ಡಿದರಗಳನ್ನು ಗ್ರಾಹಕರ CIBIL ಸ್ಕೋರ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. 

ಇದನ್ನೂ ಓದಿ : ಸೆ. 30 ರ ನಂತರ ನಿಂತು ಹೋಗಲಿದೆ LICಯ ಈ Policy!ನಿಮ್ಮ ಬಳಿ ಇರುವುದು 5 ದಿನದ ಸಮಯಾವಕಾಶ ಮಾತ್ರ

ಕಾರ್ ಲೋನ್‌ಗೆ ಯಾವ ದಾಖಲೆಗಳು ಬೇಕಾಗುತ್ತವೆ? :
>> ಕಳೆದ 6 ತಿಂಗಳ ಬ್ಯಾಂಕ್ ಖಾತೆ ವಿವರಗಳು
>> 2 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು
>> ನಿವಾಸ ಪ್ರಮಾಣಪತ್ರ 
>>  ಸ್ಯಾಲರಿ ಸ್ಲಿಪ್‌ನೊಂದಿಗೆ  ಫಾರ್ಮ್ 16
>> ಕಳೆದ 2 ವರ್ಷಗಳ ಐಟಿಆರ್ ರಿಟರ್ನ್
>> ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಪತ್ರ,  ಡ್ರೈವಿಂಗ್ ಲೈಸೆನ್ಸ್

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

 

Trending News