Best Saving Tips: ಈ ಖಾತೆಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಸಿಗಲಿದೆ 50 ಸಾವಿರ ರೂಪಾಯಿ

ಯಾವುದೇ ರೀತಿಯ ಹೂಡಿಕೆಯನ್ನು ಮಾಡುವ ಮೊದಲು, ಭವಿಷ್ಯದಲ್ಲಿ ಅದರಿಂದ ಪಡೆಯುವ ಆದಾಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು.   

Written by - Ranjitha R K | Last Updated : Jul 5, 2022, 03:31 PM IST
  • ಉಳಿತಾಯಕ್ಕೆ ಎಷ್ಟು ಲಾಭ ಎನ್ನುವುದು ಕೂಡಾ ಮುಖ್ಯ
  • ಗರಿಷ್ಟ ಲಾಭ ಸಿಗುವ ಯೋಜನೆ ಆಯ್ಕೆ ಮಾಡಬೇಕು
  • ಪ್ರತಿ ತಿಂಗಳು 3,500 ರೂಪಾಯಿಗಳ SIP
Best Saving Tips: ಈ ಖಾತೆಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಸಿಗಲಿದೆ 50 ಸಾವಿರ ರೂಪಾಯಿ  title=
Best Saving Tips (file photo)

Best Saving Tips: ಪ್ರತಿಯೊಬ್ಬರೂ ತಮ್ಮ ಉಳಿತಾಯದ ಮೂಲಕ ಉತ್ತಮ ಆದಾಯವನ್ನು ಪಡೆಯಲು ಬಯಸುತ್ತಾರೆ. ಆದರೆ ಇದಕ್ಕಾಗಿ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಉಳಿತಾಯದ ಮೇಲಿನ ಉತ್ತಮ ಲಾಭ ಸಿಕ್ಕಾಗ ಆರ್ಥಿಕ ಭದ್ರತೆಯ ಭಾವ ಮೂಡುತ್ತದೆ. ಯಾವುದೇ ರೀತಿಯ ಹೂಡಿಕೆಯನ್ನು ಮಾಡುವ ಮೊದಲು, ಭವಿಷ್ಯದಲ್ಲಿ ಅದರಿಂದ ಪಡೆಯುವ ಆದಾಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು.  ಮಾಡಿರುವ ಹೂಡಿಕೆಯಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗರಿಷ್ಠ ಲಾಭ ನೀಡುವ ಯೋಜನೆಯಾಗಿರಬೇಕು. 

1.2 ಕೋಟಿ  ಹಣ ಇರಬೇಕಾಗುತ್ತದೆ : 
ವೇಗವಾಗಿ ಏರುತ್ತಿರುವ ಹಣದುಬ್ಬರದ ನಡುವೆ ಪ್ರತಿ ತಿಂಗಳು ವೆಚ್ಚಕ್ಕಾಗಿ 50 ಸಾವಿರ ರೂಪಾಯಿಗಳ ಅಗತ್ಯವಿದೆ ಎಂದಾದರೆ ಶೀಘ್ರದಲ್ಲೇ ಹೂಡಿಕೆಯನ್ನು ಪ್ರಾರಂಭಿಸಿ. ಈಗಾಗಲೇ ಹೂಡಿಕೆ ಮಾಡಲು ಪ್ರಾರಂಭಿಸಿದ್ದರೆ ಒಳ್ಳೆಯ ಬೆಳವಣಿಗೆ. ಪ್ರಸ್ತುತ, ಬ್ಯಾಂಕ್‌ಗಳ ಸರಾಸರಿ ವಾರ್ಷಿಕ ಬಡ್ಡಿ ದರವು ಸುಮಾರು 5 ಪ್ರತಿಶತದಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ತಿಂಗಳು 50 ಸಾವಿರ ಬಡ್ಡಿ ಸಿಗಬೇಕಾದರೆ ಕನಿಷ್ಠ 1.2 ಕೋಟಿ ನಿಧಿ ಇರಬೇಕು. ಈ ನಿಧಿಯಲ್ಲಿ ನೀವು ಪ್ರತಿ ತಿಂಗಳು 50 ಸಾವಿರ ಬಡ್ಡಿಯನ್ನು ಪಡೆಯಬಹುದು. 

ಇದನ್ನೂ ಓದಿ : Arecanut Today Price: ರಾಜ್ಯ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ

ಪ್ರತಿ ತಿಂಗಳು 3,500 ರೂಪಾಯಿಗಳ SIP ಮಾಡಬೇಕು :
ಈಗ 30 ವರ್ಷ ವಯಸ್ಸಾಗಿದ್ದರೆ, ನಿಮ್ಮ ಹೆಸರಿನಲ್ಲಿ ತಿಂಗಳಿಗೆ 3500 ರೂಪಾಯಿಗಳ SIP ಅನ್ನು ಪ್ರಾರಂಭಿಸಿ. ಪ್ರಸ್ತುತ ಸುತ್ತಿನ SIPಗಳಲ್ಲಿ,  ಕನಿಷ್ಟ 12% ವಾರ್ಷಿಕ ಆದಾಯವನ್ನು ಪಡೆಯುವ ನಿರೀಕ್ಷೆಯಿದೆ. 30 ವರ್ಷಗಳ ಕಾಲ ಪ್ರತಿ ತಿಂಗಳು 3500 ರೂ. SIP ಮಾಡುವ ಮೂಲಕ,  ಈ ಅವಧಿಯಲ್ಲಿ 12.60 ಲಕ್ಷಗಳನ್ನು ಹೂಡಿಕೆ ಮಾಡುತ್ತೀರಿ. ಈ ಹೂಡಿಕೆಯಲ್ಲಿ ವಾರ್ಷಿಕವಾಗಿ 12 ಪ್ರತಿಶತದಷ್ಟು ಲಾಭವನ್ನು ಪಡೆದರೆ, ನಂತರ 30 ವರ್ಷಗಳು ಪೂರ್ಣಗೊಂಡಾಗ, 1.23 ಕೋಟಿಗಳ ನಿಧಿ ಉಳಿತಾಯವಾಗುತ್ತದೆ. 

ಈ ಫಂಡ್‌ಗಳ ಮೇಲೆ 18 ರಿಂದ 20 ಪ್ರತಿಶತದಷ್ಟು ರಿಟರ್ನ್ : 
1.23 ಕೋಟಿಗಳ ನಿಧಿಯಲ್ಲಿ ವಾರ್ಷಿಕ 5 ಪ್ರತಿಶತ ದರದಲ್ಲಿ ಬಡ್ಡಿಯನ್ನು ಲೆಕ್ಕ ಹಾಕಿದರೆ, ಅದು ವಾರ್ಷಿಕವಾಗಿ 6.15 ಲಕ್ಷ ರೂ. ಆಗುತ್ತದೆ. ಈ ಮೂಲಕ ಪ್ರತಿ ತಿಂಗಳು 50 ಸಾವಿರ ರೂಪಾಯಿ ಆದಾಯವನ್ನು ಸುಲಭವಾಗಿ ಪಡೆಯುವುದು ಸಾಧ್ಯವಾಗುತ್ತದೆ. SBI ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ಕಳೆದ ಕೆಲವು ವರ್ಷಗಳಲ್ಲಿ 20 ಪ್ರತಿಶತದಷ್ಟು ಆದಾಯವನ್ನು ನೀಡಿದೆ.  ಇದರ ಹೊರತಾಗಿ, ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಸ್ಕೀಮ್ 18.14 ಶೇಕಡಾ ಆದಾಯವನ್ನು ನೀಡಿದೆ.

ಇದನ್ನೂ ಓದಿ : SBI ಗ್ರಾಹಕರಿಗಾಗಿ ಜಾರಿ ಮಾಡಿದೆ ನೂತನ ಸೇವೆ, ಶನಿವಾರ ಮತ್ತು ಭಾನುವಾರವೂ ಲಭ್ಯವಿರಲಿದೆ ಸೌಲಭ್ಯ

 

(  ಸೂಚನೆ   : ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು  ತಜ್ಞರನ್ನು ಸಂಪರ್ಕಿಸಿ. ಯಾವುದೇ ರೀತಿಯ ಹೂಡಿಕೆಗೆ Zee News ನಿಮಗೆ ಸಲಹೆ ನೀಡುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News