Google ಮೂಲಕ ಕುಳಿತಲ್ಲೇ ಸಂಪಾದಿಸಿ 50 ಸಾವಿರ ರೂಪಾಯಿ, ಮಾಡಬೇಕಾಗಿರುವುದು ಇಷ್ಟೇ

ನೀವು ಇಲ್ಲಿ ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅದರ ಬದಲಿಗೆ, ಹಣವನ್ನು ಸಂಪಾದಿಸಬಹುದು. ಗೂಗಲ್ (Google) ವಿವಿಧ ವಿಷಯಗಳ ಬಗ್ಗೆ ಸಮೀಕ್ಷೆಗಳನ್ನು ನಡೆಸುತ್ತಿರುತ್ತದೆ. 

Written by - Ranjitha R K | Last Updated : Jul 29, 2021, 05:14 PM IST
  • ಸ್ಮಾರ್ಟ್ಫೋನ್ ಮೂಲಕ ಸಾವಿರಾರು ರೂಪಾಯಿ ಗಳಿಕೆಗೆ ಅವಕಾಶ
  • Google Opinion Rewards ಮೂಲಕ ಹಣ ಗಳಿಸಬಹುದು
  • ಐಪೋಲ್ ಮೂಲಕ ತಿಂಗಳಿಗೆ 50 ಸಾವಿರ ರೂಪಾಯಿಗಳನ್ನು ಗಳಿಸಬಹುದು
Google ಮೂಲಕ ಕುಳಿತಲ್ಲೇ ಸಂಪಾದಿಸಿ 50 ಸಾವಿರ ರೂಪಾಯಿ, ಮಾಡಬೇಕಾಗಿರುವುದು ಇಷ್ಟೇ title=
ಸ್ಮಾರ್ಟ್ಫೋನ್ ಮೂಲಕ ಸಾವಿರಾರು ರೂಪಾಯಿ ಗಳಿಕೆಗೆ ಅವಕಾಶ (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸ್ಮಾರ್ಟ್‌ಫೋನ್ (Smartphone) ಬಳಸುತ್ತಾರೆ. ಎಲ್ಲಾ ಕೆಲಸಗಳನ್ನು ಫೋನ್‌ ಮೂಲಕವೇ ಮಾಡಲಾಗುತ್ತದೆ. ಅದು ಪೇಮೆಂಟ್ ಆಗಿರಬಹುದು ಅಥವಾ ವಸ್ತುಗಳನ್ನು ಆರ್ಡರ್ ಮಾಡುವುದಿರಬಹುದು. ಆದರೆ,  ಸ್ಮಾರ್ಟ್ಫೋನ್ ಮೂಲಕ ಸಂಪಾದನೆಯೂ ಸಾಧ್ಯ ಎನ್ನುವುದು ನಿಮಗೆ ತಿಳಿದಿರಲಿಕ್ಕಿಲ್ಲ. ಹೌದು, ನಿಮ್ಮ ಫೋನ್‌ ಮೂಲಕ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು. ಇದಕ್ಕಾಗಿ Google ಸಹಾಯ ಪಡೆಯಬೇಕು. 

Google Opinion Rewards  ಮೂಲಕ ಹಣ ಗಳಿಸಬಹುದು :  
ನೀವು ಇಲ್ಲಿ ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅದರ ಬದಲಿಗೆ, ಹಣವನ್ನು ಸಂಪಾದಿಸಬಹುದು. ಗೂಗಲ್ (Google) ವಿವಿಧ ವಿಷಯಗಳ ಬಗ್ಗೆ ಸಮೀಕ್ಷೆಗಳನ್ನು ನಡೆಸುತ್ತಿರುತ್ತದೆ. ಎಲ್ಲದಕ್ಕಿಂತ ಮೊದಲು ಈ ಸಮೀಕ್ಷೆಗೆ ಸೇರಬೇಕು. ಸರ್ವೆಗೆ ಸೇರಬೇಕಾದರೆ ಗೂಗಲ್ ನಿಂದ ಈ ಫಿಚರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಸಮೀಕ್ಷೆಗೆ ಸೇರುವ ಮೂಲಕ, ಪ್ರತಿ ದಿನ 50 ರಿಂದ 500 ರೂಪಾಯಿಗಳನ್ನು ಗಳಿಸಬಹುದು. ಸಮೀಕ್ಷೆಯಲ್ಲಿ ಸ್ವೀಕರಿಸಿದ ಹಣವನ್ನು ರಿವಾರ್ಡ್ ಪಾಯಿಂಟ್‌ಗಳಾಗಿ (Reward point) ಪರಿವರ್ತಿಸಬಹುದು ಅಥವಾ ಆನ್‌ಲೈನ್ ಶಾಪಿಂಗ್‌ಗೆ ಬಳಸಬಹುದು.

ಇದನ್ನೂ ಓದಿ : SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ

ಐಪೋಲ್ ಮೂಲಕ 50 ಸಾವಿರ ರೂಪಾಯಿಗಳ ಸಂಪಾದನೆಗೆ ಅವಕಾಶ : 
ನೀವು ಐಪೋಲ್ ಮೂಲಕವೂ ಹಣ ಗಳಿಸಬಹುದು. ಇದು ಇಂಕ್ ಕಾರ್ಪೊರೇಶನ್ ಸ್ಮಾರ್ಟ್ಫೋನ್ (Smartphone) ವೈಶಿಷ್ಟ್ಯವಾಗಿದೆ. ಇಲ್ಲಿ ಹೆಚ್ಚುವರಿ ಗಳಿಕೆಗೆ ಅವಕಾಶವಿರುತ್ತದೆ. ಇಲ್ಲಿಯೂ ನೀವು ಸಮೀಕ್ಷೆಗೆ ಸೇರಬೇಕು. ಆದರೆ ಇದು Google Opinionಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ಹಣವನ್ನು ಸಂಪಾದಿಸಬಹುದು. ಒಂದು ಸಮೀಕ್ಷೆ ಮುಗಿದ ನಂತರ ಒಬ್ಬರು 100 ರಿಂದ ಸಾವಿರ ರೂಪಾಯಿಗಳನ್ನು ಗಳಿಸಬಹುದು. ನೀವು ಒಂದು ತಿಂಗಳಲ್ಲಿ 50 ಸಮೀಕ್ಷೆಗಳನ್ನು (Survay) ಮಾಡಿದರೆ, 5 ಸಾವಿರದಿಂದ 50 ಸಾವಿರದವರೆಗೆ ಗಳಿಸಬಹುದು.

ಇದನ್ನೂ ಓದಿ : PM Kisan: ಈ ರೈತರು ಪಿಎಂ ಕಿಸಾನ್ ಯೋಜನೆ ಹಣ ವಾಪಸ್ ನೀಡಬೇಕಾಗುತ್ತೆ! ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News