ಫ್ರಾನ್ಸ್, ಬ್ರಿಟನ್ ಹಿಂದಿಕ್ಕಿ ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿ ಸ್ಥಾನ ಪಡೆಯಲಿದೆ ಭಾರತ

ಭಾರತವು ಮುಂದಿನ ವರ್ಷ ಫ್ರಾನ್ಸ್ ಮತ್ತು ನಂತರ 2023 ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ (world's sixth biggest economy) ತನ್ನ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಸೆಬ್ರ್ ಹೇಳಿದರು.

Edited by - Zee Kannada News Desk | Last Updated : Dec 26, 2021, 09:19 AM IST
  • ವಿಶ್ವದ ಆರ್ಥಿಕ ಉತ್ಪಾದನೆಯು ಮುಂದಿನ ವರ್ಷ ಮೊದಲ ಬಾರಿಗೆ 100 ಟ್ರಿಲಿಯನ್ ಡಾಲರ್ ಮೀರಲಿದೆ
  • ಚೀನಾವು ಯುನೈಟೆಡ್ ಸ್ಟೇಟ್ಸ್ ಅನ್ನು ಹಿಂದಿಕ್ಕಿ ನಂ.1 ಆರ್ಥಿಕತೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ
  • ಫ್ರಾನ್ಸ್, ಬ್ರಿಟನ್ ಹಿಂದಿಕ್ಕಿ ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿ ಸ್ಥಾನ ಪಡೆಯಲಿದೆ ಭಾರತ
ಫ್ರಾನ್ಸ್, ಬ್ರಿಟನ್ ಹಿಂದಿಕ್ಕಿ ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿ ಸ್ಥಾನ ಪಡೆಯಲಿದೆ ಭಾರತ  title=
ಆರ್ಥಿಕತೆ

ನವದೆಹಲಿ: ವಿಶ್ವದ ಆರ್ಥಿಕ ಉತ್ಪಾದನೆಯು (world's economic output) ಮುಂದಿನ ವರ್ಷ ಮೊದಲ ಬಾರಿಗೆ 100 ಟ್ರಿಲಿಯನ್ ಡಾಲರ್ (ಸುಮಾರು ₹7,539 ಲಕ್ಷ ಕೋಟಿ) ಮೀರಲಿದೆ ಮತ್ತು ಚೀನಾವು ಯುನೈಟೆಡ್ ಸ್ಟೇಟ್ಸ್ ಅನ್ನು ಹಿಂದಿಕ್ಕಿ ನಂ.1 ಆರ್ಥಿಕತೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಯೊಂದು ಭಾನುವಾರ ತೋರಿಸಿದೆ.

ಕಳೆದ ವರ್ಷದ ವರ್ಲ್ಡ್ ಎಕನಾಮಿಕ್ ಲೀಗ್ ಟೇಬಲ್ ವರದಿಯಲ್ಲಿ ( World Economic League Table report), ಕಳೆದ ವರ್ಷದ ವಿಶ್ವ ಆರ್ಥಿಕತೆಯ ವರದಿಯಲ್ಲಿ ಅಂದಾಜಿಸಿರುವುದಕ್ಕಿಂತ ಎರಡು ವರ್ಷ ತಡವಾಗಿ ಚೀನಾ ಆರ್ಥಿಕತೆಯಲ್ಲಿ ಮೊದಲ ಸ್ಥಾನಕ್ಕೇರಲಿದೆ. 2030 ರಲ್ಲಿ ಚೀನಾವು ಡಾಲರ್ ಲೆಕ್ಕದಲ್ಲಿ ವಿಶ್ವದ ಅಗ್ರ ಆರ್ಥಿಕತೆಯಾಗಲಿದೆ ಎಂದು ಬ್ರಿಟಿಷ್ ಸಲಹಾ ಸಂಸ್ಥೆ ಸೆಬ್ರ್ ಭವಿಷ್ಯ ನುಡಿದಿದೆ.

ಭಾರತವು ಮುಂದಿನ ವರ್ಷ ಫ್ರಾನ್ಸ್ ಮತ್ತು ನಂತರ 2023 ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು (world's sixth biggest economy) ಮರಳಿ ಪಡೆಯಲಿದೆ ಎಂದು ಸೆಬ್ರ್ ಹೇಳಿದರು.

"2020 ರ ಪ್ರಮುಖ ವಿಷಯವೆಂದರೆ ವಿಶ್ವ ಆರ್ಥಿಕತೆಗಳು ಹಣದುಬ್ಬರವನ್ನು ಹೇಗೆ ನಿಭಾಯಿಸುತ್ತವೆ ಎಂಬುದು. ಅಮೆರಿಕದಲ್ಲಿ ಪ್ರಸ್ತುತ ಹಣದುಬ್ಬರವು ಶೇಕಡ 6.8ರಷ್ಟು ತಲುಪಿದೆ. ಕೆಲವು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಆರ್ಥಿಕತೆಗೆ ಎದುರಾಗಿರುವ ಅಲ್ಪಾವಧಿಯ ಹೊಡೆತವನ್ನು ನಿಯಂತ್ರಿಸಬಹುದಾಗಿದೆ. ಇಲ್ಲವಾದರೆ, ಇಡೀ ಜಗತ್ತು 2023 ಅಥವಾ 2024ರಲ್ಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗ ಬೇಕಾಗುತ್ತದೆ" ಎಂದು Cebr ಉಪಾಧ್ಯಕ್ಷ ಡೌಗ್ಲಾಸ್ ಮೆಕ್‌ವಿಲಿಯಮ್ಸ್ ಹೇಳಿದರು.

2033 ರಲ್ಲಿ ಜರ್ಮನಿಯು ಆರ್ಥಿಕ ಉತ್ಪಾದನೆಯಲ್ಲಿ ಜಪಾನ್ ಅನ್ನು ಹಿಂದಿಕ್ಕುವ ಹಾದಿಯಲ್ಲಿದೆ ಎಂದು ವರದಿ ತೋರಿಸಿದೆ. ರಷ್ಯಾ 2036 ರ ವೇಳೆಗೆ ಟಾಪ್ 10 ಆರ್ಥಿಕತೆಯಾಗಬಹುದು ಮತ್ತು ಇಂಡೋನೇಷ್ಯಾ 2034 ರಲ್ಲಿ ಒಂಬತ್ತನೇ ಸ್ಥಾನದ ಹಾದಿಯಲ್ಲಿದೆ.

ಇದನ್ನೂ ಓದಿ: Coriander Leaves benefits:ಕೊತ್ತಂಬರಿ ಸೊಪ್ಪಿನಲ್ಲಿವೆ ಹತ್ತಾರು ಆರೋಗ್ಯ ಪ್ರಯೋಜನಗಳು, ಚಳಿಗಾಲದಲ್ಲಿ ತಿನ್ನಲೇಬೇಕು ಯಾಕೆ ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News