ಈ ದಾಖಲೆ ಇಲ್ಲದಿದ್ದರೆ ಇನ್ನು ಮುಂದೆ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಸಾಧ್ಯವೇ ಇಲ್ಲ

Pradhan Mantri Kisan Samman Nidhi: ರೈತರ ಅನುಕೂಲಕ್ಕಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ   ಯೋಜನೆ ಕೂಡಾ ಒಂದು. ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. 

Written by - Ranjitha R K | Last Updated : Jun 27, 2022, 11:22 AM IST
  • ರೈತರ ಅನುಕೂಲಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ.
  • ಈ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತಿದೆ
  • ಏನಿದು ಪಿಎಂ ಕಿಸಾನ್ ಯೋಜನೆ?
ಈ ದಾಖಲೆ ಇಲ್ಲದಿದ್ದರೆ ಇನ್ನು ಮುಂದೆ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಸಾಧ್ಯವೇ ಇಲ್ಲ  title=
PM Kisan Scheme (file photo)

ಬೆಂಗಳೂರು : Pradhan Mantri Kisan Samman Nidhi : ರೈತರ ಅನುಕೂಲಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ. ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಈ ಯೋಜನೆಯಡಿ ರೈತರ ಖಾತೆಗೆ ಸರ್ಕಾರದಿಂದ ಹಣ ವರ್ಗಾಯಿಸಲಾಗುತ್ತದೆ. ಮತ್ತೊಂದೆಡೆ, ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ನೋಂದಣಿಯನ್ನು ಮಾಡಬೇಕಾದರೆ, ಈ ಅಪ್ಡೇಟ್ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಈ ದಾಖಲೆಗಳನ್ನು ನೀಡಬೇಕು : 
ಈಗಾಗಲೇ ಹಲವು ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಲಾಭ ಪಡೆಯುತ್ತಿದ್ದಾರೆ. ಆದರೆ, ಇನ್ನೂ ಕೆಲವು ರೈತರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿಲ್ಲ. ಇನ್ನು ರೈತರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕಾದರೆ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಇವುಗಳಲ್ಲಿ ಈ ಒಂದು ದಾಖಲೆ ಬಹಳ ಮುಖ್ಯವಾಗಿದ್ದು, ಆ ದಾಖಲೆ ರೈತರ ಬಳಿ ಇಲ್ಲದಿದ್ದರೆ ನೋಂದಣಿಯ ವೇಳೆ ಸಮಸ್ಯೆ ಉಂಟಾಗಬಹುದು.

ಇದನ್ನೂ ಓದಿ : Vegetable Price: ಗ್ರಾಹಕರೇ ಗಮನಿಸಿ... ಇಂದು ಕರ್ನಾಟಕದಲ್ಲಿ ತರಕಾರಿ ಬೆಲೆ ಹೀಗಿದೆ

ರೈತರ ಬಳಿ ಇರಲೇ ಬೇಕು ಪಡಿತರ ಚೀಟಿ   :
ಪಿಎಂ ಕಿಸಾನ್ ಯೋಜನೆಯಡಿ ಹೊಸ ನೋಂದಣಿ ಮಾಡಬೇಕಾದರೆ ರೈತರ ಬಳಿ ಪಡಿತರ ಚೀಟಿ ಇರಬೇಕು. ಪಡಿತರ ಚೀಟಿ ಇಲ್ಲದೆ, ಪಿಎಂ ಕಿಸಾನ್ ಯೋಜನೆಯಡಿ  ನೋಂದಣಿ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಪ್ರತಿ ವರ್ಷ 6000 ರೂಪಾಯಿಗಳ ಲಾಭ ಪಡೆಯಬೇಕಾದರೆ ಪಡಿತರ ಚೀಟಿಯನ್ನು ಹೊಂದಿರುವುದು ಅನಿವಾರ್ಯ. 

ಎಲ್ಲಿ ನೋಂದಾಯಿಸಬೇಕು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಾಯಿಸಲು, ರೈತರು ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಸ್ಥಳೀಯ ಕೃಷಿ ಸಹಾಯಕ / ಕಂದಾಯ ಅಧಿಕಾರಿ / ನೋಡಲ್ ಅಧಿಕಾರಿ  ಅವರನ್ನು ಸಂಪರ್ಕಿಸಬೇಕು. ರೈತರು ಪೋರ್ಟಲ್‌ನಲ್ಲಿ ಫಾರ್ಮರ್ಸ್ ಕಾರ್ನರ್ ಮೂಲಕ ಕೂಡಾ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ : Gold Price Today : ಬಂಗಾರ ಖರೀದಿಗೂ ಮುನ್ನ ತಿಳಿಯಿರಿ ಎಷ್ಟಿದೆ ಇಂದು ಚಿನ್ನ ಬೆಳ್ಳಿ ದರ

ಏನಿದು ಪಿಎಂ ಕಿಸಾನ್ ಯೋಜನೆ? :
ಈ ಯೋಜನೆಯಡಿ, ದೇಶಾದ್ಯಂತ ಎಲ್ಲಾ ರೈತ ಕುಟುಂಬಗಳಿಗೆ  2000 ರೂ. ಯಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.   ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಈ ಯೋಜನೆಯ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News