Aadhaar Card ವಿಳಾಸ ಬದಲಿಸಲು ಯಾವ ದಾಖಲೆಯೂ ಬೇಕಿಲ್ಲ..! ಪ್ರಕ್ರಿಯೆ ಹೇಗೆ ತಿಳಿಯಿರಿ

UIDAI ಪ್ರಕಾರ, ಅಡ್ರೆಸ್ ವೆರಿಫೈಯರ್ ಸಹಾಯದಿಂದ ಅಡ್ರೆಸ್ ವೇರಿಫಿಕೇಶನ್ ಲೆಟರ್ ಅನ್ನು Online ನಲ್ಲಿ ಕಳುಹಿಸುವ ಮೂಲಕ ನಿಮ್ಮ ಆಧಾರ್ ನಲ್ಲಿ ಪ್ರಸ್ತುತ ವಿಳಾಸವನ್ನು ಅಪ್ ಡೇಟ್ ಮಾಡಬಹುದಾಗಿದೆ.   

Written by - Ranjitha R K | Last Updated : Mar 5, 2021, 04:31 PM IST
  • ಆಧಾರ್ ಕಾರ್ಡ್ ನ ವಿಳಾಸ ಬದಲಿಸಲು ಯಾವ ದಾಖಲೆಯೂ ಬೇಡ
  • ಆನ್ ಲೈನ್ ಮೂಲಕವೇ ಅಡ್ರೆಸ್ ಅಪ್ ಡೇಟ್ ಮಾಡಿಕೊಳ್ಳಬಹುದು
  • ಸಣ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ವಿಳಾಸ ಬದಲಿಸುವ ಕಾರ್ಯ ಸುಲಭ
Aadhaar Card ವಿಳಾಸ ಬದಲಿಸಲು ಯಾವ ದಾಖಲೆಯೂ ಬೇಕಿಲ್ಲ..! ಪ್ರಕ್ರಿಯೆ ಹೇಗೆ ತಿಳಿಯಿರಿ title=
ಆನ್ ಲೈನ್ ಮೂಲಕವೇ ಅಡ್ರೆಸ್ ಅಪ್ ಡೇಟ್ ಮಾಡಿಕೊಳ್ಳಬಹುದು (file photo)

ನವದೆಹಲಿ : ನೀವು  ಮನೆಯನ್ನು ಬದಲಾಯಿಸಿದ್ದು, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸದಿದ್ದರೆ ಇನ್ನು ಚಿಂತಿಸುವ ಅಗತ್ಯವಿಲ್ಲ. ಬಹಳ ಸುಲಭವಾದ ಪ್ರಕ್ರಿಯೆಯ ಮೂಲಕ ಆಧಾರ್ ನಲ್ಲಿ ವಿಳಾಸವನ್ನು ಅಪ್ ಡೇಟ್ ಮಾಡಬಹುದು. ಇದಕ್ಕಾಗಿ ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವೂ ಇಲ್ಲ. ಯಾವುದೇ ದಾಖಲೆಗಳಿಲ್ಲದೆಯೂ ವಿಳಾಸವನ್ನು ಅಪ್ ಡೇಟ್ ಮಾಡಬಹುದಾಗಿದೆ. UIDAI ಪ್ರಕಾರ, ಅಡ್ರೆಸ್ ವೆರಿಫೈಯರ್ ಸಹಾಯದಿಂದ ಅಡ್ರೆಸ್ ವೇರಿಫಿಕೇಶನ್ ಲೆಟರ್ ಅನ್ನು Online ನಲ್ಲಿ ಕಳುಹಿಸುವ ಮೂಲಕ ನಿಮ್ಮ ಆಧಾರ್ ನಲ್ಲಿ ಪ್ರಸ್ತುತ ವಿಳಾಸವನ್ನು ಅಪ್ ಡೇಟ್ ಮಾಡಬಹುದಾಗಿದೆ. 

 

Address Verifier ಯಾರಾಗುತ್ತಾರೆ : 
ಕುಟುಂಬ ಸದಸ್ಯರು, ಸ್ನೇಹಿತ, ಮನೆ ಮಾಲೀಕರು,  ಇವರಲ್ಲಿ ಯಾರಾದರೂ ನಿಮ್ಮ Address Verifier ಆಗಬಹುದು. ಕೆಲವು ಷರತ್ತುಗಳನ್ನು ಪೂರೈಸಿದರೆ  ಆನ್ ಲೈನ್ ನಲ್ಲಿಯೇ ವಿಳಾಸವನ್ನು ನವೀಕರಿಸಬಹುದು.
ಅವುಗಳೆಂದರೆ : 
1. ನಿವಾಸಿಗಳು  ಮತ್ತು ವಿಳಾಸ ಪರಿಶೀಲಕರು ಇಬ್ಬರ  mobile ಸಂಖ್ಯೆ ಕೂಡಾ ಅವರವರ  ಆಧಾರ್‌ಗೆ ಲಿಂಕ್ ಆಗಿರಬೇಕು
2. ನಿವಾಸಿ ಮತ್ತು ವಿಳಾಸ ಪರಿಶೀಲಕವನ್ನು OTP ಮೂಲಕ  ಅಥೆಂಟಿಫಿಕೆಶನ್  ನೀಡಬೇಕು
3. ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿ ಬಳಸಲು Address Verifierನ ಅನುಮತಿಯಿರಬೇಕು.  

ಇದನ್ನೂ ಓದಿ : ಮಾರ್ಚ್ 31ರ ಳಗೆ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಿಸಿಕೊಳ್ಳಿ.. ತಪ್ಪಿದರೆ..!

ಆಧಾರ್  ನಲ್ಲಿ ವಿಳಾಸವನ್ನು ಅಪ್ ಡೇಟ್ ಮಾಡುವುದು ಹೇಗೆ ?  :
1. ಮೊದಲು UIDAI ವೆಬ್‌ಸೈಟ್ https://uidai.gov.in/ ಗೆ ಹೋಗಿ,  ' My Aadhaar' ಮೆನುವಿನಲ್ಲಿರುವ 'Address Validation Letter' ಕ್ಲಿಕ್ ಮಾಡಿ.
2. ಈಗ Request for Address Validation Letter'  ಪುಟ ತೆರೆದುಕೊಳ್ಳುತ್ತದೆ 
3. ಇಲ್ಲಿ ನೀವು ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಅಥವಾ 16-ಅಂಕಿಯ Virtual ID ನಮೂದಿಸಿ
4. ಕ್ಯಾಪ್ಚಾವನ್ನು ಭರ್ತಿ ಮಾಡಿದ ನಂತರ, 'Send OTP' ಕ್ಲಿಕ್ ಮಾಡಿ.
5. ನೋಂದಾಯಿತ ಮೊಬೈಲ್‌ನಲ್ಲಿ OTP ಸಿಕ್ಕಿದ ಕೂಡಲೇ ಅದನ್ನು ಹಾಕಿ Login'  ಮಾಡಿ 
6. ಈಗ ವಿಳಾಸ ಪರಿಶೀಲಕದ ವಿವರಗಳನ್ನು ಭರ್ತಿ ಮಾಡಿ, ಅದರ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ
7. ವಿಳಾಸ ಪರಿಶೀಲಕರಿಗೆ  ಒಂದು SMS ಬರುತ್ತದೆ. ಆ  SMSನಲ್ಲಿರುವ  ಲಿಂಕ್ ಕ್ಲಿಕ್ ಮಾಡುವ ಮೂಲಕ ಒಪ್ಪಿಗೆ ನೀಡಬೇಕಾಗುತ್ತದೆ
8. ಇದರ ನಂತರ,  ಒಟಿಪಿ ಯೊಂದಿಗೆ ಮತ್ತೊಂದು ಎಸ್‌ಎಂಎಸ್ ಬರುತ್ತದೆ. ಆ ಮೆಸೇಜನ್ನು ಭರ್ತಿ ಮಾಡಿ. ಕ್ಯಾಪ್ಚಾವನ್ನು ಸೇರಿಸಿ ವೆರೀಫೈ ಮಾಡಬೇಕು 
9. ಇದು ವೆರೀಫೈ  ನಂತರ Service Request Number (SRN) SMS ಮೂಲಕ ಸಿಗುತ್ತದೆ.
10. 'SRN' ಮೂಲಕ ಲಾಗಿನ್ ಮಾಡಿ ಮತ್ತು ವಿಳಾಸವನ್ನು preview ಮಾಡಿ, ಅದನ್ನು ಎಡಿಟ್ ಮಾಡಿ ಸಬ್ಮಿಟ್ ಕೊಡಿ. 'Update Request Number' (URN) ಅನ್ನು ನೋ ಎಂದು ಮಾಡಿ. 

ಈ ಸಣ್ಣ ಪ್ರಕ್ರಿಯೆಯ ನಂತರ, ಯಾವುದೇ ದಾಖಲೆಗಳಿಲ್ಲದೆ ಆಧಾರ್‌ನಲ್ಲಿ ನಿಮ್ಮ ವಿಳಾಸ ಅಪ್ ಡೇಟ್ ಆಗಿರುತ್ತದೆ. 

ಇದನ್ನೂ ಓದಿ : Post Office ಖಾತೆದಾರರಿಗೆ ಆಘಾತ! ಏಪ್ರಿಲ್ 1 ರಿಂದ ಅನ್ವಯವಾಗಲಿರುವ ಈ ನಿಯಮದ ಬಗ್ಗೆ ತಪ್ಪದೇ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News