ಡಿಎ ಹೆಚ್ಚಳದ ಬಳಿಕ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಪ್ರಕಟಿಸಿದ ಸರ್ಕಾರ

Deepavali bonus to govt employees:ರೈಲ್ವೆ ಇಲಾಖೆ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಿದೆ. 

Written by - Ranjitha R K | Last Updated : Oct 24, 2023, 01:39 PM IST
  • ರೈಲ್ವೆ ಮಂಡಳಿಯು ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ
  • 11 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ
  • ನೌಕರರಿಗೆ ದೀಪಾವಳಿ ಬೋನಸ್ ಕೂಡಾ ಲಭ್ಯ
ಡಿಎ ಹೆಚ್ಚಳದ ಬಳಿಕ  ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಪ್ರಕಟಿಸಿದ ಸರ್ಕಾರ  title=

ಬೆಂಗಳೂರು : Deepavali bonus to govt employees : ರೈಲ್ವೆ ಇಲಾಖೆ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಿದೆ. ರೈಲ್ವೆ ಮಂಡಳಿಯು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇ.46ಕ್ಕೆ ಹೆಚ್ಚಿಸಿದೆ. ಜುಲೈ 2023 ರಿಂದ ನೌಕರರು  ಹೆಚ್ಚಿದ ತುಟ್ಟಿಭತ್ಯೆ ಹೆಚ್ಚಳ ಜಾರಿಗೆ ಬರಲಿದೆ. ರೈಲ್ ಟ್ರ್ಯಾಕ್ ನಿರ್ವಾಹಕರು, ಲೋಕೋ ಪೈಲಟ್, ಗಾರ್ಡ್ ಸ್ಟೇಷನ್ ಮಾಸ್ಟರ್, ಸೂಪರ್ ವೈಸರ್, ಟೆಕ್ನಿಷಿಯನ್ ಹೆಲ್ಪರ್ ಪಾಯಿಂಟ್ಸ್‌ಮನ್ ಸೇರಿದಂತೆ ರೈಲ್ವೆಯ ವಿವಿಧ ಇಲಾಖೆಗಳ ಎಲ್ಲಾ 11,07,346 ಗೆಜೆಟೆಡ್ ಅಲ್ಲದ ಉದ್ಯೋಗಿಗಳು ಬೋನಸ್ ಪ್ರಯೋಜನವನ್ನು ಪಡೆಯುತ್ತಾರೆ.

ಡಿಎ ಹೆಚ್ಚಳದ ಜೊತೆಗೆ ಬೋನಸ್ :  
ರೈಲ್ವೆ ಮಂಡಳಿಯು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಮೂಲ ವೇತನದ ಶೇ.42ರಿಂದ ಶೇ.46ಕ್ಕೆ ಹೆಚ್ಚಿಸಿದೆ. ಜುಲೈ 2023 ರಿಂದ ನೌಕರರು ತುಟ್ಟಿಭತ್ಯೆ ಜೊತೆಗೆ ಹೆಚ್ಚಿದ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ದೀಪಾವಳಿಗೆ ಮುಂಚಿತವಾಗಿ ಮಾಡಿರುವ ಈ ಘೋಷಣೆಯನ್ನು ರೈಲ್ವೆ ನೌಕರರ ಸಂಘಗಳು ಸ್ವಾಗತಿಸಿವೆ. ರೈಲ್ವೇಯ ಎಲ್ಲಾ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಆಧಾರಿತ ಬೋನಸ್ ನೀಡಲು ಬುಧವಾರದಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಇದನ್ನೂ ಓದಿ : ಈ ತಿಂಗಳು ಸರ್ಕಾರಿ ನೌಕರರ ಕೈ ಸೇರುವುದು 30, 864 ರೂ. ಬಾಕಿ ಮೊತ್ತ !

11 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪ್ರಯೋಜನ : 
ರೈಲ್ವೆ ಟ್ರ್ಯಾಕ್ ನಿರ್ವಹಣೆ, ಲೋಕೋ ಪೈಲಟ್, ಗಾರ್ಡ್, ಸ್ಟೇಷನ್ ಮಾಸ್ಟರ್, ಮೇಲ್ವಿಚಾರಕ, ತಂತ್ರಜ್ಞ, ಸಹಾಯಕ, ಪಾಯಿಂಟ್‌ಮ್ಯಾನ್ ಸೇರಿದಂತೆ ರೈಲ್ವೆಯ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಎಲ್ಲಾ 11,07,346 ಗೆಜೆಟೆಡ್ ಅಲ್ಲದ ನೌಕರರು ಬೋನಸ್ ಪ್ರಯೋಜನವನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರ ಸುಮಾರು 15,000 ಕೋಟಿ ರೂ.ಗಳ ಬೋನಸ್ ಮಂಜೂರು ಮಾಡಿದ 5 ದಿನಗಳ ನಂತರ ರೈಲ್ವೆ ಮಂಡಳಿಯ ಈ ಘೋಷಣೆ ಹೊರಬಿದ್ದಿದೆ. 

ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಮಾತನಾಡಿ,  ದೀಪಾವಳಿಯ ಮೊದಲು ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವ ನಿರ್ಧಾರವನ್ನು  ಸ್ವಾಗತಿಸಿದ್ದಾರೆ. 

ಇದನ್ನೂ ಓದಿ : ದಸರಾ ವೇಳೆಯೇ ಭಾರೀ ಕುಸಿತ ಕಂಡ ಚಿನ್ನದ ಬೆಲೆ ! ಇನ್ನು ಇಳಿಯುತ್ತಲೇ ಹೋಗುವುದಂತೆ ಬಂಗಾರದ ಬೆಲೆ

ಇದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಮೊತ್ತವನ್ನು ಪ್ರಕಟಿಸಿತ್ತು. ಈ ಬೋನಸ್ ಹಣವನ್ನು ದೀಪಾವಳಿಗೂ ಮುನ್ನ ರೈಲ್ವೆ ನೌಕರರಿಗೆ ನೀಡಲಾಗುವುದು. ಇದಲ್ಲದೇ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿ ಶೇ.42ರಿಂದ ಶೇ.46ಕ್ಕೆ ಹೆಚ್ಚಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News