Loksabha Election 2024 : ಪ್ರಸ್ತುತ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ.ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಎರಡನೇ ಹಂತದ ಮತದಾನ ಇಂದಿನಿಂದ ಅಂದರೆ ಏಪ್ರಿಲ್ 26ರಿಂದ ಆರಂಭವಾಗಿದೆ. ಮತ ಚಲಾವಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕಂಪನಿಗಳು ಸಾಕಷ್ಟು ಉಚಿತ ಕೊಡುಗೆಗಳನ್ನು ನೀಡುತ್ತಿವೆ.ಮತ ಚಲಾಯಿಸಿದ ನಂತರ, ವೋಟ್ ಮಾಡಿರುವ ಗುರುತನ್ನು ತೋರಿಸಿದರೆ ಉಚಿತ ಆಹಾರ,ಉಚಿತ ಬಿಯರ್,ಉಚಿತ ಟ್ಯಾಕ್ಸಿ ಮತ್ತು ಉಚಿತ ದೋಸೆ ಹೀಗೆ ಅನೇಕ ರೀತಿಯ ಆಫರ್ ಗಳನ್ನೂ ನೀಡಲಾಗುತ್ತಿದೆ.
ಎಲ್ಲೆಲ್ಲಿ ಇದೆ ಈ ಆಫರ್ :
ರಾಜ್ಯದಲ್ಲಿ ಮತದಾರರನ್ನು ಮತ ಚಲಾಯಿಸಲು ಪ್ರೋತ್ಸಾಹಿಸುವ ಸಲುವಾಗಿ ಇದೆಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ.ಆದ್ದರಿಂದ ನಿಮ್ಮ ಮತವನ್ನು ಚಲಾಯಿಸುವ ಮೊದಲು, ಎಲ್ಲಿ ಯಾವುದು ಉಚಿತವಾಗಿ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ಇದನ್ನೂ ಓದಿ : ಮದ್ಯದ ದೊರೆ ವಿಜಯ್ ಮಲ್ಯ ಮಗಳು ಯಾರು ಗೊತ್ತಾ! ಅಂದದಲ್ಲಿ ಬಾಲಿವುಡ್ ನಟಿಯರಿಗೆ ಸೆಡ್ಡು ಹೊಡೆಯೋವಷ್ಟು ಬ್ಯೂಟಿ ಈಕೆ
ಮತ ಚಲಾಯಿಸಿರುವ ಗುರುತು ತೋರಿಸಬೇಕು :
ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ಜನ ಮತದಾನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮತದಾನ ಮಾಡಲು ಜನರನ್ನು ಪ್ರೇರೇಪಿಸುವ ಸಲುವಾಗಿ ಅನೇಕ ಹೋಟೆಲ್ಗಳು,ಪಬ್ಗಳು ಮತ್ತು ಟ್ಯಾಕ್ಸಿ ಅಗ್ರಿಗೇಟರ್ಗಳು ಅನೇಕ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿವೆ.ಇದರಲ್ಲಿ ಉಚಿತ ಆಹಾರ,ಉಚಿತ ಬಿಯರ್ ಮತ್ತು ಉಚಿತ ಟ್ಯಾಕ್ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಲಾಗಿದೆ. ಈ ಉಚಿತ ಸೌಲಭ್ಯ ಪಡೆಯಲು ಮತ ಚಲಾಯಿಸಿರುವ ಗುರುತು ತೋರಿಸಬೇಕಾಗುತ್ತದೆ.
ಉಚಿತ ದೋಸೆ :
ನೃಪತುಂಗ ರಸ್ತೆಯಲ್ಲಿರುವ ನಿಸರ್ಗ್ ಗ್ರ್ಯಾಂಡ್ ಹೋಟೆಲ್ನಲ್ಲಿಯೂ ಹಲವು ಉಚಿತಗಳನ್ನೂ ಘೋಷಿಸಲಾಗಿದೆ. ಇಲ್ಲಿ ಇಂದು ಉಚಿತ ಬೆಣ್ಣೆ ದೋಸೆ, ಘೀ ರೈಸ್, ಮತ್ತು ಕೆಲವು ಪಾನೀಯಗಳನ್ನು ನೀಡುವುದಾಗಿ ಹೇಳಲಾಗಿದೆ. ಇಲ್ಲಿ ಮತ ಹಾಕಿರುವ ಎಲ್ಲಾ ಮತದಾರರಿಗೆ ತಿನ್ನಲು ದೋಸೆ ಉಚಿತವಾಗಿ ಸಿಗುತ್ತದೆ.
ಇದನ್ನೂ ಓದಿ : ಲಂಡನ್, ಅಬುದಾಬಿಯಲ್ಲಿ ಅಲ್ಲ, ಇಲ್ಲಿ ನೆರವೇರಲಿದೆ ಅನಂತ್ ಅಂಬಾನಿ ವಿವಾಹ ! ನಡೆಯುತ್ತಿದೆ ಅದ್ದೂರಿ ತಯಾರಿ
ಇಲ್ಲಿ ಸಿಗುತ್ತದೆ ಉಚಿತ ಬಿಯರ್ :
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ರೆಸ್ಟೊ ಪಬ್ ಕೂಡಾ ವಿಶೇಷ ಕೊಡುಗೆಯೊಂದಿಗೆ ಬಂದಿದೆ.ಇಲ್ಲಿ Deck of Brews ಏಪ್ರಿಲ್ 27 ಮತ್ತು 28 ರಂದು ಬರುವ ಮತದಾರರಿಗೆ ಉಚಿತ ಬಿಯರ್ ನೀಡಲಿದೆ.ಇದರ ಜೊತೆ ರಿಯಾಯಿತಿಯನ್ನು ಸಹ ನೀಡುತ್ತಿದೆ.ಮತ ಚಲಾಯಿಸಿದವರಿಗೆ ಬಹುಮಾನ ನೀಡಲು ನಿರ್ಧರಿಸಿರುವುದಾಗಿ ಅದರ ಮಾಲೀಕ ಪ್ರಫುಲ್ಲ ರೈ ತಿಳಿಸಿದ್ದಾರೆ.
ಆಹಾರದ ಮೇಲೆ 20% ರಿಯಾಯಿತಿ ನೀಡುತ್ತಿರುವ SOCIAL :
ಪಬ್ಗಳ ಮತ್ತೊಂದು ಸರಣಿ, SOCIAL,ಮತದಾನವನ್ನು ಉತ್ತೇಜಿಸಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಮತದಾರರು ತಮ್ಮ ಆಹಾರ ಬಿಲ್ನಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯ ಲಾಭವನ್ನು ಪಡೆಯಬಹುದು ಎಂದು ಹೇಳಿದೆ.ಮತದಾನ ಮಾಡಿರುವ ಗುರುತು ತೋರಿಸಿದವರಿಗೆ ಮಾತ್ರ ಈ ಆಫರ್ ಸಿಗಲಿದೆ.
ರಾಪಿಡೊ ಕ್ಯಾಬ್ ಮತ್ತು ಟ್ಯಾಕ್ಸಿ ಸೌಲಭ್ಯ :
ಇದಲ್ಲದೆ, ಟ್ಯಾಕ್ಸಿ ಅಗ್ರಿಗೇಟರ್ ರಾಪಿಡೊ ಬೆಂಗಳೂರು,ಮೈಸೂರು ಮತ್ತು ಮಂಗಳೂರಿನಲ್ಲಿ ವಿಶೇಷ ಉಪಕ್ರಮವನ್ನು ಪ್ರಾರಂಭಿಸಿದೆ.ಆನ್ಲೈನ್ ಕ್ಯಾಬ್ ಸೇವೆಗಳನ್ನು ಒದಗಿಸುವ ಕಂಪನಿಯಾದ Rapido,ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಆಟೋ ಮತ್ತು ಕ್ಯಾಬ್ ರೈಡ್ ಘೋಷಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.