ಶೀಘ್ರದಲ್ಲೇ ಬಂದ್ ಆಗಲಿದೆ ಈ ಪ್ರಸಿದ್ದ ಬ್ಯಾಂಕ್..! ಕಾರಣ ಇಲ್ಲಿದೆ ..!

ಭಾರತದಲ್ಲಿ ಸಿಟಿಬ್ಯಾಂಕ್  ಕ್ರೆಡಿಟ್ ಕಾರ್ಡ್, ಸೇವಿಂಗ್ಸ್ ಬ್ಯಾಂಕ್, ಪರ್ಸನಲ್ ಲೋನ್  ಮುಂತಾದ ವ್ಯವಹಾರಗಳನ್ನು ನಡೆಸುತ್ತಿದೆ.  ತನ್ನ ವ್ಯವಹಾರ ನೀತಿಯ ಅಂಗವಾಗಿ ಸಿಟಿಬ್ಯಾಂಕ್ ಭಾರತದಿಂದ ನಿರ್ಗಮಿಸುತ್ತಿದೆ. 

Written by - Ranjitha R K | Last Updated : Apr 16, 2021, 11:16 AM IST
  • ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಸಿಟಿಬ್ಯಾಂಕ್ ಭಾರತದಲ್ಲಿ ಶೀಘ್ರ ತನ್ನ ರೀಟೆಲ್ ವ್ಯವಹಾರ ಕೊನೆಗೊಳಿಸಲಿದೆ.
  • ಅಮೆರಿಕ ಮೂಲದ ಸಿಟಿಬ್ಯಾಂಕ್ ಗುರುವಾರ ಈ ಘೋಷಣೆ ಮಾಡಿದೆ.
  • ಇದರಿಂದ ಖಾತೆದಾರರ, ಠೇವಣಿದಾರರ ಮತ್ತು ಬ್ಯಾಂಕ್ ನೌಕರರ ಭವಿಷ್ಯ ಏನು ಎಂಬುದಕ್ಕೆ ಇಲ್ಲಿದೆ ಉತ್ತರ.
ಶೀಘ್ರದಲ್ಲೇ ಬಂದ್ ಆಗಲಿದೆ ಈ ಪ್ರಸಿದ್ದ ಬ್ಯಾಂಕ್..! ಕಾರಣ ಇಲ್ಲಿದೆ ..! title=
ಸಿಟಿಬ್ಯಾಂಕ್ ಭಾರತದಲ್ಲಿ ಶೀಘ್ರ ತನ್ನ ರೀಟೆಲ್ ವ್ಯವಹಾರ ಕೊನೆಗೊಳಿಸಲಿದೆ (file photo)

ನವದೆಹಲಿ : ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಸಿಟಿಬ್ಯಾಂಕ್ (Citibank) ಭಾರತದಲ್ಲಿ ಶೀಘ್ರ ತನ್ನ ರೀಟೆಲ್ ವ್ಯವಹಾರ ಕೊನೆಗೊಳಿಸಲಿದೆ.  ಅಮೆರಿಕ ಮೂಲದ ಸಿಟಿಬ್ಯಾಂಕ್ ಗುರುವಾರ  ಈ ಘೋಷಣೆ ಮಾಡಿದೆ. ಇದರಿಂದ ಖಾತೆದಾರರ, ಠೇವಣಿದಾರರ ಮತ್ತು ಬ್ಯಾಂಕ್ ನೌಕರರ ಭವಿಷ್ಯ ಏನು ಎಂಬುದಕ್ಕೆ ಇಲ್ಲಿದೆ ಉತ್ತರ. 

ಸಿರಿವಂತ ದೇಶಗಳಲ್ಲಿ ಮಾತ್ರ ಇನ್ನು ಸಿಟಿಬ್ಯಾಂಕ್..!
ಭಾರತದಲ್ಲಿ ಸಿಟಿಬ್ಯಾಂಕ್ (Citibank) ಕ್ರೆಡಿಟ್ ಕಾರ್ಡ್, ಸೇವಿಂಗ್ಸ್ ಬ್ಯಾಂಕ್, ಪರ್ಸನಲ್ ಲೋನ್ (Personal loan) ಮುಂತಾದ ವ್ಯವಹಾರಗಳನ್ನು ನಡೆಸುತ್ತಿದೆ.  ತನ್ನ ವ್ಯವಹಾರ ನೀತಿಯ ಅಂಗವಾಗಿ ಸಿಟಿಬ್ಯಾಂಕ್ ಭಾರತದಿಂದ ನಿರ್ಗಮಿಸುತ್ತಿದೆ. ಕೇವಲ ಸಂಪನ್ನ ರಾಷ್ಟ್ರಗಳನ್ನಷ್ಟೇ ಕೇಂದ್ರೀಕರಿಸಿ ಸಿಟಿಬ್ಯಾಂಕ್ ತನ್ನ ವ್ಯವಹಾರ ಮುಂದುವರಿಸಲಿದೆ. 13 ದೇಶಗಳಿಂದ ಸಿಟಿಬ್ಯಾಂಕ್ ಹೊರ ನಡೆಯಲಿದ್ದು, ಅದರಲ್ಲಿ ಭಾರತ (India) ಕೂಡಾ ಸೇರಿದೆ. 

ಇದನ್ನೂ ಓದಿ : PPF: ಪ್ರತಿ ತಿಂಗಳು 7500 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿಯ ವೇಳೆಗೆ ಮಿಲಿಯನೇರ್ ಆಗಿ

ಸಿಟಿಬ್ಯಾಂಕ್ ನಲ್ಲಿದ್ದಾರೆ 4000 ಉದ್ಯೋಗಿಗಳು:
ಸಿಟಿಬ್ಯಾಂಕಿನ ಕನ್ಸೂಮರ್ ಬ್ಯಾಂಕಿಂಗ್ ಬಿಸಿನೆಸ್ ವಿಭಾಗವು  ಕ್ರೆಡಿಟ್ ಕಾರ್ಡ್(Credit card), ರಿಟೇಲ್ ಬ್ಯಾಂಕಿಂಗ್, ಹೋಮ್ ಲೋನ್ (Home loan) ಮತ್ತು ವೆಲ್ತ್ ಮ್ಯಾನೇಜ್ಮೆಂಟ್ ಶಾಮೀಲಾಗಿದೆ. ದೇಶದಲ್ಲಿ ಸಿಟಿಬ್ಯಾಂಕಿನ 35 ಶಾಖೆಗಳಿವೆ. ಅದರಲ್ಲಿ ಸುಮಾರು 4000 ಉದ್ಯೋಗಿಗಳಿದ್ದಾರೆ.  ಸ್ಪರ್ಧೆ ಕಡಿಮೆ ಇರುವ ವಿಭಾಗದಲ್ಲಿ ವ್ಯವಹಾರ ಮುಂದುವರಿಸುವ ಬ್ಯಾಂಕ್ ಕಾರ್ಯತಂತ್ರದ ಹಿನ್ನೆಲೆಯಲ್ಲಿ ಭಾರತದಲ್ಲಿ ಕಾಲ್ತೆಗೆಯುವ ನಿರ್ಧಾರವನ್ನು ಸಿಟಿಬ್ಯಾಂಕ್ ಕೈಗೊಂಡಿದೆ. ಆದರೆ, ಅದಕ್ಕಿನ್ನೂ ಸರ್ಕಾರದ ರೆಗ್ಯೂಲೇಟರಿ ಅನುಮತಿ ಪಡೆಯಬೇಕಾಗಿದೆ. 

‘ಸದ್ಯಕ್ಕೇನೂ ಬದಲಾವಣೆ ಇಲ್ಲ’:
ಸಿಟಿ ಬ್ಯಾಂಕ್ ಭಾರತದ ಸಿಇಒ ಅಶು ಖುಲ್ಲರ್ ಪ್ರಕಾರ, ಸಿಟಿಬ್ಯಾಂಕಿನ ಭಾರತದ ವ್ಯವಹಾರದಲ್ಲಿ ಸದ್ಯಕ್ಕೇನೂ ಬದಲಾವಣೆ ಇಲ್ಲ. ಭಾರತದಿಂದ ಕಾಲ್ತೆಗೆಯು ನಿರ್ಧಾರದಿಂದ ಬ್ಯಾಂಕ್ ವ್ಯವಹಾರದ ಮೇಲೆ ಸದ್ಯಕ್ಕೇನು ಪರಿಣಾಮ ಉಂಟಾಗುವುದಿಲ್ಲ. ನಮ್ಮ ವ್ಯವಹಾರ ಇನ್ನಷ್ಟು ಬಲಿಷ್ಠವಾಗಲಿದೆ.  ಮುಂಬೈ (Mumbai), ಪುಣೆ, ಬೆಂಗಳೂರು (Bengaluru), ಚೆನ್ನೈ ಮತ್ತು ಗುರುಗ್ರಾಮ ಕೇಂದ್ರಗಳ ಮೂಲಕ ಸಿಟಿಬ್ಯಾಂಕ್ ಗ್ಲೋಬಲ್ ವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ಹೇಳಿದ್ದಾರೆ. 

ಸಿಟಿ ಬ್ಯಾಂಕ್  ಆಸ್ಟ್ರೇಲಿಯಾ, ಇಂಡೋನೇಷ್ಯಾ, ಬಹರೇನ್, ಚೀನಾ (China), ದಕ್ಷಿಣ ಕೊರಿಯಾ, ಮಲೇಷ್ಯಾ, ಫಿಲಿಫೈನ್ಸ್, ಪೊಲ್ಯಾಂಡ್, ರಷ್ಯಾ, ತೈವಾನ್ ಹಾಗೂ ಥೈಲೆಂಡಿನಲ್ಲಿ ತನ್ನ ರೀಟೈಲ್ ವ್ಯವಹಾರ ಕೊನೆಗೊಳಿಸಲಿದೆ. ಅದರ ಹೋಲ್ ಸೇಲ್ ವ್ಯವಹಾರ ಹಾಗೇ ಮುಂದುವರಿಯಲಿದೆ. 

ಇದನ್ನೂ ಓದಿ : ಪಾಲಿಸಿದಾರರಿಗೆ ಎಲ್ಐಸಿ ತರಾತುರಿಯ ಆಲರ್ಟ್ ಜಾರಿ ಮಾಡಿದ್ದೇಕೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News