UIDAI Update: ಕಳೆದುಹೋದ UID ಅಥವಾ EID ಸಂಖ್ಯೆಯನ್ನು ಈ ರೀತಿ ಮರಳಿ ಪಡೆಯಬಹುದು

UIDAI Update:  ಇತ್ತೀಚೆಗೆ, UIDAI, ತನ್ನ ಟ್ವೀಟ್ ಮೂಲಕ, ಕಳೆದುಹೋದ EID ಸಂಖ್ಯೆಯನ್ನು ಮರಳಿ ಪಡೆಯುವ ವಿಧಾನಗಳ ಬಗ್ಗೆ ತಿಳಿಸಿತು. 

Written by - Yashaswini V | Last Updated : Dec 30, 2021, 11:43 AM IST
  • EID ಅಥವಾ UID 28 ಅಂಕೆಗಳ ವಿಶಿಷ್ಟ ID ಸಂಖ್ಯೆಯಾಗಿ
  • ನೀವು ಆಧಾರ್ ಕಾರ್ಡ್‌ಗಾಗಿ ನೋಂದಾಯಿಸಿದ ನಂತರ ನೀವು ಈ ಸಂಖ್ಯೆಗಳನ್ನು ಕೈಯಲ್ಲಿ ಇಟ್ಟುಕೊಳ್ಳಬೇಕು
  • ಇದರ ಮೂಲಕ ನೀವು ನಂತರ ನಿಮ್ಮ ಆಧಾರ್ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲಿಸಬಹುದು
UIDAI Update: ಕಳೆದುಹೋದ UID ಅಥವಾ EID ಸಂಖ್ಯೆಯನ್ನು ಈ ರೀತಿ ಮರಳಿ ಪಡೆಯಬಹುದು title=
UIDAI Update

UIDAI Update: EID ಅಥವಾ UID, ಆಧಾರ್ ವಿಶಿಷ್ಟ ಗುರುತಿನ ಸಂಖ್ಯೆಯು (Aadhaar Unique Identification Number) 28 ಅಂಕೆಗಳ ವಿಶಿಷ್ಟ ID ಸಂಖ್ಯೆಯಾಗಿದೆ. ನೀವು ಆಧಾರ್‌ಗಾಗಿ ನೋಂದಾಯಿಸುವಾಗ ಈ ಸಂಖ್ಯೆಯನ್ನು ನಿಮಗೆ ನೀಡಲಾಗುತ್ತದೆ. ನೀವು ಆಧಾರ್ ಕಾರ್ಡ್‌ಗಾಗಿ ನೋಂದಾಯಿಸಿದ ನಂತರ ನೀವು ಈ ಸಂಖ್ಯೆಗಳನ್ನು ಕೈಯಲ್ಲಿ ಇಟ್ಟುಕೊಳ್ಳಬೇಕು. ಇದರ ಮೂಲಕ ನೀವು ನಂತರ ನಿಮ್ಮ ಆಧಾರ್ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲಿಸಬಹುದು. ಆದರೆ ನೀವು ಈ EID ಸಂಖ್ಯೆಯನ್ನು ಕಳೆದುಕೊಂಡಿದ್ದರೂ ಸಹ, ನೀವು ಅದನ್ನು ಮರಳಿ ಪಡೆಯಬಹುದು.

ಯುಐಡಿಎಐ (UIDAI) ಇತ್ತೀಚೆಗೆ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿ, ನಿಮ್ಮ EID ಸಂಖ್ಯೆ ಕಳೆದುಹೋದರೆ, ನೀವು ಅದನ್ನು ಮರಳಿ ಪಡೆಯಬಹುದು ಎಂದು ಮಾಹಿತಿ ನೀಡಿದೆ. ಇದಕ್ಕಾಗಿ ನೀವು mAadhaar ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ನೀವು ಒಟಿಪಿ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮೊಬೈಲ್ ಅಪ್‌ಡೇಟ್‌ಗಳಿಗಾಗಿ ನಿಮಗೆ 50 ರೂ.ವರೆಗೆ ಶುಲ್ಕ ವಿಧಿಸಬಹುದು.

ಇದನ್ನೂ ಓದಿ- UIDAI Update : ಶೀಘ್ರದಲ್ಲೇ ನಿಮ್ಮ Voter ID ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು - ಯಾಕೆ ಇಲ್ಲಿದೆ ನೋಡಿ

ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ :
ಇದರ ಇನ್ನೊಂದು ವಿಶೇಷತೆ ಎಂದರೆ ನಿಮ್ಮ EID ಅನ್ನು ಮರಳಿ ಪಡೆಯಲು  (How to get lost EID Number) ನೀವು ಯಾವುದೇ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ನಿಮಗೆ ಬೇಕಾಗಿರುವುದು ನಿಮ್ಮ ಆಧಾರ್‌ನೊಂದಿಗೆ ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆ ಬಗ್ಗೆ ಮಾಹಿತಿ ನೀಡಿದರೆ ಅಷ್ಟೇ ಸಾಕು.

ಇದನ್ನೂ ಓದಿ-  Aadhaar-Ration Link:ಈಗ ಮನೆಯಲ್ಲಿಯೇ ಕುಳಿತು ಸುಲಭವಾಗಿ ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಿ

ಕಳೆದುಹೋದ ಯುಐಡಿ ಅಥವಾ ಇಐಡಿ ನಂಬರ್‌ಗಳನ್ನು ಮತ್ತೆ ಪಡೆಯಲು ಈ ಹಂತ ಅನುಸರಿಸಿ:
1. ಮೊದಲನೆಯದಾಗಿ UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
2. ಇಲ್ಲಿ ನೀವು 'My Aadhaar' ಆಯ್ಕೆಯನ್ನು ನೋಡುತ್ತೀರಿ, ಅದರ ಒಳಗೆ ನೀವು ಕಳೆದುಹೋದ ಅಥವಾ ಮರೆತುಹೋದ EID / UID ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3. ಇಲ್ಲಿ ನೀವು UID ಅಥವಾ EID ಸಂಖ್ಯೆಯನ್ನು ಆಯ್ಕೆ ಮಾಡಬೇಕು.
4. ಈಗ ನೀವು ಪೂರ್ಣ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಇಲ್ಲಿ ನಮೂದಿಸಬೇಕು.
5. ಈಗ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು 'SEND OTP' ಆಯ್ಕೆಯನ್ನು ಕ್ಲಿಕ್ ಮಾಡಿ.
6. ನೀವು OTP ಅನ್ನು ನಮೂದಿಸಿದ ತಕ್ಷಣ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಎಲ್ಲಾ ವಿವರಗಳನ್ನು ನೀವು ಪಡೆಯುತ್ತೀರಿ.
ಇದಲ್ಲದೆ, ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ನೀವು ಆಧಾರ್‌ನ ಅಧಿಕೃತ ಸಹಾಯವಾಣಿ ಸಂಖ್ಯೆ 1947 ಗೆ ಸಹ ಕರೆ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News