UAE T20 League: ಜಾಗತಿಕ ಪ್ರಸಾರದ ಹಕ್ಕು ZEE ನೆಟ್‌ವರ್ಕ್‌ ಪಾಲು, ಟೂರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ  

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, GMR ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಫ್ರಾಂಚೈಸಿಯನ್ನು ಹೊಂದಿರಲಿವೆ.

Written by - Zee Kannada News Desk | Last Updated : May 24, 2022, 04:20 PM IST
  • UAE T20 Leagueನ ಜಾಗತಿಕ ಮಾಧ್ಯಮ ಪ್ರಸಾರದ ಹಕ್ಕು ಪಡೆಯುವಲ್ಲಿ ಯಶಸ್ವಿಯಾದ ZEE ನೆಟ್‌ವರ್ಕ್
  • ಯುಎಇಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳು ನಡೆಯಲಿವೆ
  • ಯುಎಇ ಟಿ20 ಲೀಗ್ ಪಂದ್ಯಗಳು ZEE ನೆಟ್‌ವರ್ಕ್‍ನ 10 ಚಾನೆಲ್‌ಗಳು & ZEE5 ಒಟಿಟಿಯಲ್ಲಿ ಪ್ರಸಾರವಾಗಲಿವೆ
UAE T20 League: ಜಾಗತಿಕ ಪ್ರಸಾರದ ಹಕ್ಕು ZEE ನೆಟ್‌ವರ್ಕ್‌ ಪಾಲು, ಟೂರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ   title=
UAE T20 League

ಯುಎಇ: ಮುಂಬರುವ ಯುಎಇಯ ಟಿ20 ಲೀಗ್‌ನ ಜಾಗತಿಕ ಮಾಧ್ಯಮ ಪ್ರಸಾರದ ಹಕ್ಕನ್ನು ZEE ನೆಟ್‌ವರ್ಕ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಜಾಗತಿಕ ಮನರಂಜನಾ ಕ್ಷೇತ್ರದ ಶಕ್ತಿ ಕೇಂದ್ರ ಮತ್ತು ಪ್ರಮುಖ ಪ್ರಸಾರಕರಲ್ಲಿ ಒಂದಾಗಿರುವ ZEEಯೊಂದಿಗೆ ದೀರ್ಘಾವಧಿಯ ಜಾಗತಿಕ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಯುಎಇಯ ಟಿ20 ಲೀಗ್‍ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಹತ್ವದ ಒಪ್ಪಂದದೊಂದಿಗೆ ಯುಎಇ ಟಿ20 ಲೀಗ್‍ನ ಪಂದ್ಯಗಳು ಭಾರತವೂ ಸೇರಿ ಪ್ರಪಂಚದಾದ್ಯಂತ ZEEನ ಚಾನಲ್‌ಗಳು ಮತ್ತು ಅದರ ಒಟಿಟಿ ಫ್ಲಾಟ್‌ಫಾರ್ಮ್ ಆದ ZEE5ನಲ್ಲಿ ಪ್ರಸಾರವಾಗಲಿವೆ.

6 ತಂಡಗಳು & 34 ಪಂದ್ಯಗಳು

UAEಯ T20 ಲೀಗ್ ವೃತ್ತಿಪರ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳು ನಡೆಯಲಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, GMR ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಫ್ರಾಂಚೈಸಿಯನ್ನು ಹೊಂದಿರಲಿವೆ.

190ಕ್ಕೂ ಹೆಚ್ಚು ದೇಶಗಳಲ್ಲಿ ZEE ಪ್ರಾಬಲ್ಯ

190ಕ್ಕೂ ಹೆಚ್ಚು ದೇಶಗಳಲ್ಲಿ ZEE ಪ್ರಬಲ ಜಾಗತಿಕ ನೆಟ್‌ವರ್ಕ್ ಹೊಂದಿದ್ದು, ಅತಿಹೆಚ್ಚು ವೀಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಭಾರತವೂ ಸೇರಿ ಪ್ರಪಂಚದ ಮೂಲೆ ಮೂಲೆಗೂ ತಲುಪುವ ಮೂಲಕ ZEE ಪ್ರಾಬಲ್ಯ ಸಾಧಿಸಿದೆ. ತನ್ನ ವಿಸ್ತಾರವಾದ ನೆಟ್‌ವರ್ಕ್‌ನೊಂದಿಗೆ ಜನರನ್ನು ತಲುಪಲು ಮತ್ತು ಜಾಹೀರಾತುದಾರರನ್ನು ಸೆಳೆಯಲು ಸಹಕಾರಿಯಾಗಿದೆ. ತನ್ನ ವ್ಯವಹಾರಗಳ ನಡುವಿನ ಅಪಾರ ಸಿನರ್ಜಿಗಳು, ಜಾಹೀರಾತುದಾರರು ಮತ್ತು ವಿತರಣಾ ಪಾಲುದಾರರಿಗೆ ಸಮಗ್ರ ವಿಧಾನದೊಂದಿಗೆ ZEE ಬಹು-ಪ್ಲಾಟ್‌ಫಾರ್ಮ್ ತಂತ್ರದ ಮೂಲಕ ಜನರೊಂದಿಗೆ 100 ಮಿಲಿಯನ್‌ಗಿಂತಲೂ ಹೆಚ್ಚು ಮನೆಗಳಿಗೆ ಕೊಂಡೊಯ್ಯುತ್ತದೆ.

 ಇದನ್ನೂ ಓದಿ: IPL 2022: ಲೀಗ್‍ನಿಂದ ಚಾಂಪಿಯನ್ಸ್ ಔಟ್, ಈ ಸಲ ಹೊಸಬರಿಗೆ ಕಪ್..!

ಯುಎಇ ಟಿ20 ಲೀಗ್ ಪಂದ್ಯಗಳು ZEE ನೆಟ್‌ವರ್ಕ್‍ನ 10 ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪ್ರಸಾರವಾಗಲಿವೆ. ಲೀಗ್ ಅನ್ನು ZEE5 ನಲ್ಲಿ ಮತ್ತು ಜಾಗತಿಕವಾಗಿ ರೇಡಿಯೊದಲ್ಲಿ ಏಕಕಾಲದಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಯುಎಇ ಟಿ20 ಲೀಗ್ ಚೇರ್‌ಮನ್ ಸಂತಸ

ZEE ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವುದಕ್ಕೆ ಯುಎಇ ಟಿ20 ಲೀಗ್‍ನ ಚೇರ್‌ಮನ್ ಖಾಲಿದ್ ಅಲ್ ಜರೂನಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಲೀಗ್‌ನೊಂದಿಗೆ ಸಂಯೋಜಿತವಾಗಿರುವ ZEEಯಂತಹ ವಿಶ್ವಾಸಾರ್ಹ ಪ್ರಸಾರ ಪಾಲುದಾರರನ್ನು ಹೊಂದುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಯಾವುದೂ ಇಲ್ಲವೆಂದು ಅವರು ಹೇಳಿದ್ದಾರೆ. ಈ ಲೀಗ್‌ನಲ್ಲಿ ನಂಬಿಕೆ ಹೊಂದಿರುವುದಕ್ಕಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿ ಉದ್ಯಮವಾಗಿ ಬೆಳೆಯಲು ZEEನ MD & CEO ಪುನಿತ್ ಗೋಯೆಂಕಾ ಮತ್ತು ಬಿಸಿನೆಸ್ ಸೌತ್ ಏಷ್ಯಾದ ಅಧ್ಯಕ್ಷ ರಾಹುಲ್ ಜೊಹ್ರಿ ಇಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

‘ಯುಎಇಯ ಟಿ20 ಲೀಗ್‌ನ ಮೊದಲ ಮಾಧ್ಯಮ ಹಕ್ಕುಗಳ ಸ್ವಾಧೀನದೊಂದಿಗೆ ಕ್ರೀಡಾ ಪ್ರಸಾರವನ್ನು ಮರು-ಪ್ರವೇಶಿಸಲು ZEE ನಿರ್ಧರಿಸಿದೆ ಎಂಬುದು ಮತ್ತಷ್ಟು ಖುಷಿಯ ವಿಚಾರವಾಗಿದೆ. ನಮ್ಮ ಲೀಗ್ ಅನ್ನು ಸಾಟಿಯಿಲ್ಲದ ಮಟ್ಟಕ್ಕೆ ಕೊಂಡೊಯ್ಯಲು ZEE ವೀಕ್ಷಕರ ದೊಡ್ಡಬಲ ಹೊಂದಿದೆ ಎಂಬುದರ ಬಗ್ಗೆ ನಮಗೆ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

 ಇದನ್ನೂ ಓದಿ: IPL 2022: ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಹೇಗಿರುತ್ತದೆ..?

ವೀಕ್ಷಕರಿಗೆ ಬರಪೂರ ಮನರಂಜನೆ

‘ಈ ಲೀಗ್‍ನ ಮೂಲಕ ನಾವು ವೀಕ್ಷಕರಿಗೆ ಬರಪೂರ ಮನರಂಜನೆ ನೀಡಲಿದ್ದೇವೆ ಎಂದು ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಬಿಸಿನೆಸ್ ಸೌತ್ ಏಷ್ಯಾದ ಅಧ್ಯಕ್ಷ ರಾಹುಲ್ ಜೊಹ್ರಿ ಭರವಸೆ ನೀಡಿದ್ದಾರೆ. ‘ZEEನಲ್ಲಿ ಯುಎಇಯ ಟಿ20 ಲೀಗ್‌ನ ಅಧಿಕೃತ ಜಾಗತಿಕ ಮಾಧ್ಯಮ ಹಕ್ಕುದಾರರಾಗಲು ನಾವು ಸಂತಸಪಡುತ್ತೇವೆ’ ಎಂದು ಹೇಳಿದ್ದಾರೆ.  

‘ಈಗಾಗಲೇ ಜಾಗತಿಕವಾಗಿ ಆಕರ್ಷಿಸುತ್ತಿರುವ ಲೀಗ್, ದೊಡ್ಡ ಕ್ರಿಕೆಟ್ ತಾರೆಗಳು ಮತ್ತು ತಂಡದ ಫ್ರಾಂಚೈಸಿಗಳು ಪ್ರಪಂಚದಾದ್ಯಂತದ ವೀಕ್ಷಕರಿಗೆ ಅದ್ಭುತ ಕ್ರಿಕೆಟ್ ಮತ್ತು ಮನರಂಜನೆ ನೀಡಲಿವೆ. ಯುಎಇಯ ಟಿ20 ಟೂರ್ನಿಯನ್ನು ಭಾರತ ಮತ್ತು ಜಗತ್ತಿನಾದ್ಯಂತ ಪ್ರೇಕ್ಷಕರಿಗೆ ಕೊಂಡೊಯ್ಯಲು ತನ್ನ ಪ್ಲಾಟ್‌ಫಾರ್ಮ್‌ಗಳ ಬಲವನ್ನು ಬಳಸಲು ZEE ಬದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News