ಲೋಕಸಮರಕ್ಕೂ ಮುನ್ನ GDP ಬೆಳವಣಿಗೆ ದರದಲ್ಲಿ ಭರ್ಜರಿ ಏರಿಕೆ; 3ನೇ ತ್ರೈಮಾಸಿಕದಲ್ಲಿ 8.4% ಹೆಚ್ಚಳ!

India GDP Growth: ಭಾರತದಲ್ಲಿ 8 ಪ್ರಮುಖ ವಲಯಗಳ ಬೆಳವಣಿಗೆ ದರವು ಜನವರಿಯಲ್ಲಿ ವಾರ್ಷಿಕ ಆಧಾರದ ಮೇಲೆ 15 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. 

Written by - Puttaraj K Alur | Last Updated : Feb 29, 2024, 08:25 PM IST
  • ಕೇಂದ್ರದಿಂದ ಪ್ರಸಕ್ತ ಹಣಕಾಸು ವರ್ಷದ 2024ರ 3ನೇ ತ್ರೈಮಾಸಿಕದಲ್ಲಿ GDP ಬೆಳವಣಿಗೆಯ ಅಂಕಿಅಂಶ ಬಿಡುಗಡೆ
  • ಲೋಕಸಭಾ ಚುನಾವಣೆಗೆ ಮುನ್ನ GDP ಬೆಳವಣಿಗೆ ದರದಲ್ಲಿ ಭರ್ಜರಿ ಏರಿಕೆ; 3ನೇ ತ್ರೈಮಾಸಿಕದಲ್ಲಿ 8.4% ಹೆಚ್ಚಳ!
  • ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ದಾಖಲಾದ 4.3% GDP ಬೆಳವಣಿಗೆ ದರಕ್ಕಿಂತ ಹೆಚ್ಚಾಗಿದೆ
ಲೋಕಸಮರಕ್ಕೂ ಮುನ್ನ GDP ಬೆಳವಣಿಗೆ ದರದಲ್ಲಿ ಭರ್ಜರಿ ಏರಿಕೆ; 3ನೇ ತ್ರೈಮಾಸಿಕದಲ್ಲಿ 8.4% ಹೆಚ್ಚಳ! title=
ಭಾರತೀಯ ಆರ್ಥಿಕ ಬೆಳವಣಿಗೆ ದರ

ಭಾರತೀಯ ಆರ್ಥಿಕ ಬೆಳವಣಿಗೆ ದರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ 2024ರ 3ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಇದು 8.4% ಆಗಿದೆ. ಇದು ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ದಾಖಲಾದ 4.3% ಬೆಳವಣಿಗೆ ದರಕ್ಕಿಂತ ಹೆಚ್ಚು. ಈ ಬೆಳವಣಿಗೆಯ ದರವು ಆರ್ಥಿಕತೆಯ ಬಲವಾದ ಚೇತರಿಕೆಯನ್ನು ಸೂಚಿಸುತ್ತದೆ. ಇದು ಸರ್ಕಾರದ ಪ್ರಮುಖ ಸಾಧನೆಯಾಗಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಆರ್‌ಬಿಐ ಆರ್ಥಿಕ ಬೆಳವಣಿಗೆಯನ್ನು ಶೇ.6.5ರಷ್ಟಿರಲಿದೆ ಎಂದು ಅಂದಾಜಿಸಿದೆ. ಎಸ್‌ಬಿಐ ರಿಸರ್ಚ್ ಬಗ್ಗೆ ಹೇಳುವುದಾದರೆ, ಅದರ ಅಂದಾಜು 6.5 ರಿಂದ 6.9 ಪ್ರತಿಶತದ ನಡುವೆ ಇತ್ತು. ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ಶೇ.7.6ರಷ್ಟಿದೆ. ಅದರಂತೆ ತ್ರೈಮಾಸಿಕ ಆಧಾರದ ಮೇಲೆ ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 

ಇದನ್ನೂ ಓದಿ: FASTagಗೆ ಸಂಬಂಧಿಸಿದ ಈ ಕೆಲಸ ಮಾಡಲು ಇಂದೇ ಕೊನೆ ದಿನ ! ನಾಳೆಯಿಂದ ಬೀಳುವುದು ಭಾರೀ ದಂಡ

ಕೋರ್ ಸೆಕ್ಟರ್ ಸ್ಥಿತಿ ಹೇಗಿತ್ತು?

ಭಾರತದಲ್ಲಿ 8 ಪ್ರಮುಖ ವಲಯಗಳ ಬೆಳವಣಿಗೆ ದರವು ಜನವರಿಯಲ್ಲಿ ವಾರ್ಷಿಕ ಆಧಾರದ ಮೇಲೆ 15 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. ಇದನ್ನು ಹೊರತುಪಡಿಸಿ ನಾವು ಈ ತಿಂಗಳ ಬಗ್ಗೆ ಹೇಳುವುದಾರೆ, ಬೆಳವಣಿಗೆಯ ದರವು 3.6 ಪ್ರತಿಶತದಷ್ಟಿದೆ. ಸೂಚ್ಯಂಕವು ಡಿಸೆಂಬರ್ 2023ರಲ್ಲಿ ಶೇ.4.9ರಷ್ಟು ಮತ್ತು ಜನವರಿ 2024ರಲ್ಲಿ ಶೇ.9.7ರ ದರದಲ್ಲಿ ಬೆಳೆಯುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೋರ್ ವಲಯದಲ್ಲೂ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಕಲ್ಲಿದ್ದಲು, ಉಕ್ಕು, ಸಿಮೆಂಟ್, ನೈಸರ್ಗಿಕ ಅನಿಲ, ವಿದ್ಯುತ್ ಮತ್ತು ಕಚ್ಚಾ ತೈಲ ಉತ್ಪಾದನೆಯಲ್ಲಿ ಈ ಬೆಳವಣಿಗೆಯಾಗಿದೆ. 

2023-24ರ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅಂಕಿಅಂಶಗಳ ಸಚಿವಾಲಯದ NSO (ರಾಷ್ಟ್ರೀಯ ಅಂಕಿಅಂಶ ಕಚೇರಿ) ಅಂಕಿಅಂಶಗಳನ್ನು ಬಿಡುಗಡೆ ಮಾಡುವಾಗ, 3ನೇ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇ,8.4ರಷ್ಟು ಬೆಳವಣಿಗೆ ದರವನ್ನು ತೋರಿಸಿದೆ ಎಂದು ಹೇಳಿದೆ. 2022-23ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಜಿಡಿಪಿ 40.35 ಲಕ್ಷ ಕೋಟಿಯಿಂದ ಪ್ರಸಕ್ತ ಹಣಕಾಸು ವರ್ಷದ ೩ನೇ ತ್ರೈಮಾಸಿಕದಲ್ಲಿ 43.72 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಇದನ್ನೂ ಓದಿ: PM Surya Ghar Yojana 2024: ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ಸಬ್ಸಿಡಿ ಸೇರಿದಂತೆ ರೂ.15000 ಆದಾಯ, ಒಂದೇ ಯೋಜನೆ, ಲಾಭ ಹಲವು! 

ಉತ್ಪಾದನಾ ವಲಯದ ಬೆಳವಣಿಗೆಯ ಮುನ್ಸೂಚನೆ

ಉತ್ಪಾದನಾ ವಲಯದ ಬೆಳವಣಿಗೆ ದರ ಶೇ.11.6ರಷ್ಟಿದೆ ಎಂದು ಅಂಕಿಅಂಶ ಸಚಿವಾಲಯದ ಎನ್‌ಎಸ್‌ಒ ಹೇಳಿದೆ. ಇದಲ್ಲದೇ ನಿರ್ಮಾಣ ಕ್ಷೇತ್ರದ ಬೆಳವಣಿಗೆ ಶೇ.9.5ರಷ್ಟಿದೆ. 2023-24ರ ಆರ್ಥಿಕ ವರ್ಷದ ೨ನೇ ಮುಂಗಡ ಅಂದಾಜನ್ನು ಸಹ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಜಿಡಿಪಿ ಆರ್ಥಿಕ ವರ್ಷದಲ್ಲಿ ಶೇ.7.6 ಎಂದು ಅಂದಾಜಿಸಲಾಗಿದೆ ಅಂತಾ ಎನ್‌ಎಸ್‌ಒ ಹೇಳಿದೆ. ಆದರೆ 2022-23ರಲ್ಲಿ ಇದು ಶೇ.7ರಷ್ಟಿತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ, 2022-23ರಲ್ಲಿ 160.71 ಲಕ್ಷ ಕೋಟಿ ರೂ.ಗಳಷ್ಟಿದ್ದ ಪ್ರಸಕ್ತ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ 172.90 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News