'ವರ್ಕ್ ಫ್ರಮ್ ಹೋಮ್' ಮಾಡುವವರಿಗೆ ಬಜೆಟ್ ನಲ್ಲಿ ಸಿಗಲಿದೆಯೇ ಗುಡ್ ನ್ಯೂಸ್ ? ಏನಿರಲಿದೆ ಸರ್ಕಾರದ ಯೋಜನೆ

 ಈ ಬಾರಿಯ ಬಜೆಟ್‌ನಲ್ಲಿ ‘ವರ್ಕ್ ಫ್ರಮ್ ಹೋಮ್’ ಮಾಡುವವರಿಗೆ ದೊಡ್ಡ ರಿಲೀಫ್ ಸಿಗುವ ನಿರೀಕ್ಷೆ ಇದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್‌ನಲ್ಲಿ ವೇತನದಾರರಿಗೆ ಸರ್ಕಾರದಿಂದ ಯಾವುದೇ ವಿಶೇಷ ಪರಿಹಾರ ಸಿಕ್ಕಿರಲಿಲ್ಲ.

Last Updated : Jan 27, 2022, 12:05 PM IST
  • Work from home allowanceಗೆ ಬೇಡಿಕೆ
  • ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ಆಗ್ರಹ
  • ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
'ವರ್ಕ್ ಫ್ರಮ್ ಹೋಮ್' ಮಾಡುವವರಿಗೆ ಬಜೆಟ್ ನಲ್ಲಿ ಸಿಗಲಿದೆಯೇ ಗುಡ್ ನ್ಯೂಸ್ ? ಏನಿರಲಿದೆ ಸರ್ಕಾರದ ಯೋಜನೆ  title=
Work from home allowanceಗೆ  ಬೇಡಿಕೆ  (file photo)

ನವದೆಹಲಿ : ಕೋವಿಡ್ ಮಹಾಮಾರಿಯಿಂದಾಗಿ (Covid Pandemic) ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ಶಾಲೆಯಿಂದ ಹಿಡಿದು ಕೆಲಸದವರೆಗೆ ಎಲ್ಲವೂ ಮನೆಯಿಂದಲೇ ನಡೆಯುತ್ತಿದೆ. 'ವರ್ಕ್ ಫ್ರಮ್ ಹೋಮ್' (Work from home) ಪ್ರವೃತ್ತಿಯ ನಡುವೆಯೇ, ಉದ್ಯೋಗಿಗಳ ಅನೇಕ ರೀತಿಯ ವೆಚ್ಚಗಳು ಹೆಚ್ಚಾಗಿದೆ.  'ವರ್ಕ್ ಫ್ರಮ್ ಹೋಮ್ ಪರಿಣಾಮವು ಇಂಟರ್ನೆಟ್, ದೂರವಾಣಿ, ಪೀಠೋಪಕರಣಗಳು ಮತ್ತು ವಿದ್ಯುತ್ ಬಿಲ್‌ಗಳ ಮೇಲೆ ಕಂಡುಬರುತ್ತದೆ.

ಸಿಗಲಿದೆಯೇ ಪರಿಹಾರ ?
ಕರೋನಾ ಸಾಂಕ್ರಾಮಿಕದ (Covid Pandemic) ಮೊದಲು, ಕೆಲವೊಂದು ಖರ್ಚುಗಳ ಚಿಂತೆ ಉದ್ಯೋಗಿಗಳಿಗೆ ಇರುತ್ತಿರಲಿಲ್ಲ. ಮೊದಲೇ ಹೇಳಿದ ಹಾಗೆ  ಇಂಟರ್ನೆಟ್, ದೂರವಾಣಿ, ಪೀಠೋಪಕರಣಗಳು ಮತ್ತು ಹೆಚ್ಚುತ್ತಿರುವ ವಿದ್ಯುತ್ ಬಿಲ್‌ಗಳ ಬಗ್ಗೆ ಉದ್ಯೋಗಿಗಳು ಚಿಂತೆ ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ (Budget 2022) ‘ವರ್ಕ್ ಫ್ರಮ್ ಹೋಮ್’ ಮಾಡುವವರಿಗೆ ದೊಡ್ಡ ರಿಲೀಫ್ ಸಿಗುವ ನಿರೀಕ್ಷೆ ಇದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್‌ನಲ್ಲಿ ವೇತನದಾರರಿಗೆ ಸರ್ಕಾರದಿಂದ ಯಾವುದೇ ವಿಶೇಷ ಪರಿಹಾರ ಸಿಕ್ಕಿರಲಿಲ್ಲ. ಇದೀಗ  ಈ ಬಾರಿ Work from home allowance ಸಿಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.  

ಇದನ್ನೂ ಓದಿ : 69 ವರ್ಷಗಳ ಮತ್ತೆ ಟಾಟಾ ತೆಕ್ಕೆಗೆ ಏರ್ ಇಂಡಿಯಾ, ಇಂದು ಪೂರ್ಣಗೊಳ್ಳಲಿದೆ ಹಸ್ತಾಂತರ ಪ್ರಕ್ರಿಯೆ

ವರ್ಕ್ ಫ್ರಮ್ ಹೋಂ ಅಲೋವೆನ್ಸ್ ಗೆ ಬೇಡಿಕೆ :  
ಈ ಹಿಂದೆ, ತೆರಿಗೆ ಸೇವೆಗಳು (Tax Service) ಮತ್ತು ಹಣಕಾಸು ಸೇವೆಗಳನ್ನು ಒದಗಿಸುವ Deloitte India ಕಂಪನಿಯು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಅಲೋವೆನ್ಸ್ (Work from home allowance) ನೀಡುವಂತೆ ಒತ್ತಾಯಿಸಿದೆ. ಸರಕಾರ ನೇರವಾಗಿ ಭತ್ಯೆ ನೀಡಲು ಸಾಧ್ಯವಾಗದಿದ್ದಲ್ಲಿ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಕೋರಲಾಗಿದೆ. ಇಲ್ಲಿ ಬ್ರಿಟನ್‌ನ  Work from home ಮಾದರಿಯನ್ನು ಉಲ್ಲೇಖಿಸಲಾಗಿದೆ.

ICAI ಕೂಡ ಇದೇ ರೀತಿಯ ಶಿಫಾರಸುಗಳನ್ನು ಮಾಡಿದೆ :
ಹಣಕಾಸು ಸಚಿವರು ಡೆಲಾಯ್ಟ್ ಇಂಡಿಯಾದ ಬೇಡಿಕೆಯನ್ನು ಪರಿಗಣಿಸಿದರೆ, ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು  50 ಸಾವಿರ ರೂ ವರೆಗೆದವರೆಗೆ ವರ್ಕ್ ಫ್ರಮ್ ಹೋಂ ಅಲೋವೆನ್ಸ್ (Work from home allowance) ಪಡೆಯುವ ಸಾಧ್ಯತೆ ಇದೆ. ಅದೇ ರೀತಿ, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಕೂಡ ಬಜೆಟ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ಶಿಫಾರಸುಗಳನ್ನು ಮಾಡಿದೆ.

ಇದನ್ನೂ ಓದಿ : ನಿಮ್ಮ ಬಳಿ 2 ರೂಪಾಯಿಯ ಈ ನಾಣ್ಯ ಇದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ

ಸ್ಟ್ಯಾಂಡರ್ಡ್ ಡಿಡೆಕ್ಷನ್ ನಲ್ಲಿ ಪರಿಹಾರ :  
ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ಪರಿಹಾರ ನೀಡುವ ಮಿತಿಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ICAI ಒತ್ತಾಯಿಸಿದೆ. ಪ್ರಸ್ತುತ, ಆದಾಯ ತೆರಿಗೆ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ 50,000 ರೂ. ಆಗಿದೆ. ಇದನ್ನು 1 ಲಕ್ಷ ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. 

ಆದಾಯ ತೆರಿಗೆಯ (Income tax) ಸೆಕ್ಷನ್ 10 ರ ಅಡಿಯಲ್ಲಿ ತೆರಿಗೆದಾರರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಆದರೆ ಈ ನಿಯಮ ಬಹಳ ಹಳೆಯದು. ಹಣದುಬ್ಬರದ ದೃಷ್ಟಿಯಿಂದ 50 ಸಾವಿರದ ಮಿತಿ  ಕಡಿಮ್ನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 10ರ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News