ನವದೆಹಲಿ : ಕರೋನಾ ಕಾರಣದಿಂದ (Coronavirus) ಅತೀ ಹೆಚ್ಚು ತತ್ತರಿಸಿದ್ದು, ದಿನಗೂಲಿ ಕಾರ್ಮಿಕರು. ಈಗ ಕ್ರಮೇಣ ಕೈಗಾರಿಕೆಗಳು ಮತ್ತೆ ಆರಂಭಗೊಂಡಿವೆ. ಆದರೆ ತಮ್ಮ ವ್ಯಾಪಾರದಿಂದಲೇ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿರುವ ಅದೆಷ್ಟೋ ಬೀದಿಬದಿ ವ್ಯಾಪಾರಿಗಳು ಇದ್ದಾರೆ.
ಸರಕಾರ ನೀಡುತ್ತಿದೆ 10 ಸಾವಿರ ರೂಪಾಯಿ :
ಬಂಡವಾಳದ ಕೊರತೆಯಿಂದ ಬೀದಿ ಬದಿ ವ್ಯಾಪಾರಗಳನ್ನು ಮಾಡುವುದು ಸಾಧ್ಯವಾಗದಿದ್ದರೆ, ಈ ಸುದ್ದಿ ನಿಮಗೆ ಸಹಾಯವಾಗಬಹುದು. 'ಪ್ರಧಾನಿ ಸ್ವಾನಿಧಿ ಯೋಜನೆ' (PM Svanidhi Yojana) ಅಡಿಯಲ್ಲಿ ಯಾವುದೇ ಖಾತರಿ ಇಲ್ಲದೆ, 10,000 ರೂ. ವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹತ್ತಿರದ ಬ್ಯಾಂಕ್‌ಗೆ (Bank) ಹೋಗಿ, ಈ ಯೋಜನೆಯಡಿ 10 ಸಾವಿರ ರೂಪಾಯಿ ಸಾಲ ಪಡೆದು ವ್ಯಾಪಾರ ಆರಂಭಿಸಬಹುದು.
ಇದನ್ನೂ ಓದಿ : ಮೊಬೈಲ್ ನಂಬರ್ ನೊಂದಣಿಯಾಗದಿದ್ದರೂ ಡೌನ್‌ಲೋಡ್ ಮಾಡಬಹುದು ಆಧಾರ್ ಕಾರ್ಡ್..!
ಯೋಜನೆಯ ಮುಖ್ಯಾಂಶಗಳು :
-ಇದರ ಅಡಿಯಲ್ಲಿ, ಸಾಲಗಾರನ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ (Mobile Aadhaar link) ಮಾಡುವುದು ಅವಶ್ಯಕ.
-ನೆನಪಿರಲಿ ಮಾರ್ಚ್ 24, 2020 ಅಥವಾ ಅದಕ್ಕೂ ಮೊದಲು ಈ ಕೆಲಸದಲ್ಲಿ ತೊಡಗಿರುವವರಿಗೆ ಮಾತ್ರ ಈ ಲೋನ್ (Loan) ಲಭ್ಯವಿರುತ್ತದೆ.
- ಈ ಸಾಲದ ಯೋಜನಾ ಅವಧಿಯು ಮಾರ್ಚ್ 2022 ರವರೆಗೆ ಮಾತ್ರ ಇರಲಿದೆ. ಆದ್ದರಿಂದ ಶೀಘ್ರದಲ್ಲೇ ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
- ನಗರ ಅಥವಾ ಅರೆ ನಗರ, ಗ್ರಾಮೀಣ ಪ್ರದೇಶಗಳ ಬೀದಿ ವ್ಯಾಪಾರಿಗಳು ಈ ಸಾಲವನ್ನು ಪಡೆಯಬಹುದು.
-ಈ ಸಾಲದ ಬಡ್ಡಿಯ ಮೇಲೆ ಸಬ್ಸಿಡಿ ಲಭ್ಯವಿದೆ ಮತ್ತು ಮೊತ್ತವನ್ನು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ವರ್ಗಾಯಿಸಲಾಗುತ್ತದೆ.
ಖಾತರಿಯಿಲ್ಲದೆ ಉಚಿತ ಸಾಲ :
ಈ ಯೋಜನೆಯಡಿಯಲ್ಲಿ, ಬೀದಿ ವ್ಯಾಪಾರಿಗಳು ಒಂದು ವರ್ಷಕ್ಕೆ 10,000 ರೂ. ವರೆಗೆ ಸಾಲವನ್ನು ಪಡೆಯಬಹುದು. ಅಂದರೆ, ಈ ಯೋಜನೆಯಲ್ಲಿ, ಸಾಲ ತೆಗೆದುಕೊಳ್ಳಲು ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾಗಿಲ್ಲ. ಪಡೆದಿರುವ ಸಾಲವನ್ನು ಮಾಸಿಕ ಕಂತುಗಳಲ್ಲಿ ಪಾವತಿಸಬಹುದು.
ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಸೂಪರ್‌ಹಿಟ್ ಪಿಂಚಣಿ ಯೋಜನೆ ಆರಂಭ, ಕೈ ಸೇರಲಿದೆ 1.1 ಲಕ್ಷ ರೂಪಾಯಿ
ಎಷ್ಟು ಸಬ್ಸಿಡಿ ಲಭ್ಯವಿದೆ ?
ಪಿಎಂ ಸ್ವಾನಿಧಿ ಯೋಜನೆಯಡಿಯಲ್ಲಿ (Pm Svanidhi Yojana) ಪಡೆದ ಸಾಲವನ್ನು ಮಾರಾಟಗಾರರು ನಿಯಮಿತವಾಗಿ ಮರುಪಾವತಿ ಮಾಡಿದರೆ, ಅವರಿಗೆ ವಾರ್ಷಿಕ ಶೇಕಡಾ 7 ರ ಬಡ್ಡಿ ದರದಲ್ಲಿ ಸಬ್ಸಿಡಿಯನ್ನು (Subsidy on interest) ನೀಡಲಾಗುತ್ತದೆ. ಬಡ್ಡಿ ಸಹಾಯಧನದ ಮೊತ್ತವನ್ನು ತ್ರೈಮಾಸಿಕ ಆಧಾರದ ಮೇಲೆ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಕಳುಹಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲವನ್ನು ಪಾವತಿಸಿದರೆ, ಮಾತ್ರ ಸಬ್ಸಿಡಿಯನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.