Taxpayers Alert! ತೆರಿಗೆ ಪಾವತಿದಾರರಿಗೆ ಬಿಗ್ ಶಾಕ್! Old Tax Slab ವ್ಯವಸ್ಥೆ ಸ್ಥಗಿತಗೊಳಿಸಲು ಕಂದಾಯ ಕಾರ್ಯದರ್ಶಿಗಳ ಸಲಹೆ

Old Income Tax Regime: ಹಣದುಬ್ಬರ ಏರಿಕೆಯ ನಡುವೆಯೇ ತೆರಿಗೆ ಪಾವತಿದಾರರಿಗೆ ಬಿಗ್ ಶಾಕ್ ನೀಡಲು  ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರವು ಹಳೆಯ ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸುವ ಸಾಧ್ಯತೆ ಇದ. ಇದರಲ್ಲಿ 70 ರೀತಿಯ ವಿನಾಯಿತಿಗಳನ್ನೂ ನೀಡಲಾಗಿದೆ. ಕಂದಾಯ ಕಾರ್ಯದರ್ಶಿ (Revenue Secretary) ತರುಣ್ ಬಜಾಜ್ (Tarun Bajaj) ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

Written by - Nitin Tabib | Last Updated : Mar 1, 2022, 05:31 PM IST
  • ತೆರಿಗೆ ಪಾವತಿದಾರರಿಗೆ ಬಿಗ್ ಶಾಕ್
  • ಹಳೆ ತೆರಿಗೆ ಸ್ಲ್ಯಾಬ್ ರದ್ದತಿ ಸಾಧ್ಯ
  • 2020-21 ರಲ್ಲಿ ಬಂದಿದೆ ಹೊಸ ತೆರಿಗೆ ಸ್ಲ್ಯಾಬ್
Taxpayers Alert! ತೆರಿಗೆ ಪಾವತಿದಾರರಿಗೆ ಬಿಗ್ ಶಾಕ್!  Old Tax Slab ವ್ಯವಸ್ಥೆ ಸ್ಥಗಿತಗೊಳಿಸಲು ಕಂದಾಯ ಕಾರ್ಯದರ್ಶಿಗಳ ಸಲಹೆ title=
Taxpayers Alert (File Photo)

ನವದೆಹಲಿ: Old Income Tax Regime: ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಹಣದುಬ್ಬರ ಜನರ ಸೊಂಟ ಮುರಿದಿದೆ. ಏತನ್ಮಧ್ಯೆ ತೆರಿಗೆ ಪಾವತಿದಾರರಿಗೆ ಮತ್ತೊಂದು ದೊಡ್ಡ ಶಾಕ್ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. 70 ಬಗೆಯ ವಿನಾಯಿತಿ ಇರುವ ಹಳೆಯ ತೆರಿಗೆ ಪದ್ಧತಿಯನ್ನು ಸರ್ಕಾರ ರದ್ದುಪಡಿಸುವ ಸಾಧ್ಯತೆ ಇದೆ. ವಾಸ್ತವದಲ್ಲಿ, ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೊಸ ತೆರಿಗೆ ವ್ಯವಸ್ಥೆಯತ್ತ ಜನರ ಆಕರ್ಷಣೆಯನ್ನು ಹೆಚ್ಚಿಸಲು ಈ ಪ್ರಸ್ತಾಪವನ್ನು ಮಾಡಿದ್ದಾರೆ.

ಪ್ರಸ್ತಾವನೆ ನೀಡಿದ ತರುಣ್ ಬಜಾಜ್ 
ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರವೂ ಜನರು ಹಳೆಯ ಆದಾಯ ತೆರಿಗೆಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಹೊಸ ತೆರಿಗೆ ಪದ್ಧತಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಆದಾಯ ತೆರಿಗೆಯ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ತೆರಿಗೆದಾರರನ್ನು ಉತ್ತೇಜಿಸುವ ಉದ್ದೇಶದಿಂದ ತರುಣ್ ಬಜಾಜ್ ಈ ಪ್ರಸ್ತಾಪವನ್ನು ಮಾಡಿದ್ದಾರೆ.

2020-21ರಲ್ಲಿ ಜಾರಿಗೆ ಬಂದಿತ್ತು ಹೊಸ ತೆರಿಗೆ ಸ್ಲ್ಯಾಬ್ 
ಆದಾಯ ತೆರಿಗೆಯ ಹೊಸ ವ್ಯವಸ್ಥೆಯನ್ನು 2020 ರಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ತೆರಿಗೆ ದರ ಕಡಿಮೆಯಾಗಿದೆ ಆದರೆ, ಕಡಿತದ ಸೌಲಭ್ಯ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆದಾರರಲ್ಲಿ ವಿನಾಯಿತಿ ಇಲ್ಲದ ಕಾರಣ ಕಡಿಮೆ ಆಸಕ್ತಿ ಗಮನಿಸಲಾಗುತ್ತಿದೆ. ಇದುವರೆಗೂ ಕೂಡ ಬಹುತೇಕ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಹಳೆಯ ತೆರಿಗೆ ಪದ್ಧತಿಯೊಂದಿಗೆ ಸಲ್ಲಿಸುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ

ಜನ ಹೊಸ ಸ್ಲ್ಯಾಬ್ ಅನ್ನು ಏಕೆ ಆಯ್ಕೆ ಮಾಡುತ್ತಿಲ್ಲ?
ಈ ಕುರಿತು ಮಾತನಾಡಿರುವ ತರುಣ್ ಬಜಾಜ್, ಇದೆ ಕಾರಣದಿಂದ ಜನರು ಹೊಸ ವ್ಯವಸ್ಥೆಯನ್ನು ಸ್ವೀಕರಿಸುತ್ತಿಲ್ಲ. ಎಲ್ಲಿಯವರೆಗೆ ನಾವು ಹಳೆ ವ್ಯವಸ್ಥೆಯ ಆಕರ್ಷಣೆಯನ್ನು ಕಡಿಮೆ ಮಾಡುವುದಿಲ್ಲವೋ, ಅಲ್ಲಿಯವರೆಗೆ ಜನರು ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದೆ ಬರುವುದಿಲ್ಲ' ಎಂದು ಬಜಾಜ್ ಹೇಳಿದ್ದಾರೆ. 

ಹೊಸ ತೆರಿಗೆ ವ್ಯವಸ್ಥೆ 
>> ಹೊಸ ತೆರಿಗೆ ವ್ಯವಸ್ಥೆಯಲ್ಲಿ 5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ
>> 5 ಲಕ್ಷ ರೂ.ಗಳಿಂದ 7.5 ರೂಗಳ ವರೆಗೆ ಶೇ.10ರಷ್ಟು ತೆರಿಗೆ 
>> ಒಂದು ವೇಳೆ 7.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಆದಾಯದ ಮೇಲೆ ಶೇ 15ರಷ್ಟು ತೆರಿಗೆ 
>> ನಿಮ್ಮ ಆದಾಯ ಒಂದು ವೇಳೆ 10 ಲಕ್ಷ ರೂ.ಗಳಿಂದ 12.50ಲಕ್ಷ ರೂಗಳವರೆಗೆ ಇದ್ದರೆ, ಶೇ.20 ರಷ್ಟು ತೆರಿಗೆ ಪಾವತಿಸಬೇಕು.
>> 12.5 ರಿಂದ 15 ಲಕ್ಷ ರೂ.ಗಳ ವರೆಗಿನ ಆದಾಯ ಇರುವವರು ಶೇ.25ರಷ್ಟು ತೆರಿಗೆ ಪಾವತಿಸಬೇಕು.
>> 15 ಲಕ್ಷ ರೂ.ಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿದವರು ಶೇ.30ರಷ್ಟು ತೆರಿಗೆ ಪಾವತಿಸಬೇಕು.

Trending News