PM Kisan Yojana: ರೈತರು ಈ ತಪ್ಪು ಮಾಡಿದ್ದರೆ ಹಿಂದಿರುಗಿಸಬೇಕಾಗುತ್ತದೆ ಪಿಎಂ ಕಿಸಾನ್ ಹಣ

PM Kisan Yojana: ಪಿಎಂ ಕಿಸಾನ್ ಯೋಜನೆಯಡಿ, ಅಕ್ರಮವಾಗಿ ಸವಲತ್ತು ಪಡೆಯುವ ರೈತರಿಗೆ ಸರ್ಕಾರದಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ. ಅಂತಹ ರೈತರಿಗೆ ನಿಗದಿತ ಕಾಲಮಿತಿಯೊಳಗೆ ಹಣವನ್ನು ಹಿಂದಿರುಗಿಸುವಂತೆ  ಸೂಚಿಸಲಾಗುತ್ತಿದೆ.  

Written by - Ranjitha R K | Last Updated : Jun 14, 2022, 12:43 PM IST
  • ಪ್ರತಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ
  • ರೈತರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಯೋಜನೆ ಜಾರಿ
  • ಯೋಜನೆ ದುರ್ಬಳಕೆ ಮಾಡಿದರೆ ಎಚ್ಚರ..!
 PM Kisan Yojana: ರೈತರು ಈ ತಪ್ಪು ಮಾಡಿದ್ದರೆ ಹಿಂದಿರುಗಿಸಬೇಕಾಗುತ್ತದೆ ಪಿಎಂ ಕಿಸಾನ್ ಹಣ  title=
PM Kisan Update (file photo)

PM Kisan Yojana : ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೋಜನೆಯಡಿ ವಾರ್ಷಿಕ 6 ಸಾವಿರ ರೂಪಾಯಿಯನ್ನು ಎರಡು ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುವುದು. 

ನಡೆಸಲಾಗುತ್ತಿದೆ ಸಾಮಾಜಿಕ ಲೆಕ್ಕ ಪರಿಶೋಧನೆ : 
ಈ ಯೋಜನೆಯ ಲಾಭ ಪಡೆಯಲು ರೈತರ ಅರ್ಹತೆಯನ್ನು ಸುನಿಶ್ಚಿತಗೊಳಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನು  ದುರುಪಯೋಗಪಡಿಸಿಕೊಂಡಿದ್ದರೆ ಈ  ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇದಕ್ಕಾಗಿ ಸರಕಾರದಿಂದ ಸಾಮಾಜಿಕ ಲೆಕ್ಕ ಪರಿಶೋಧನೆ ಕೂಡ ಮಾಡಲಾಗುತ್ತಿದೆ. ಅರ್ಹರಲ್ಲದ ರೈತರನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. 

ಇದನ್ನೂ ಓದಿ : Gold Price Today : ಅಗ್ಗವಾಯಿತು ಬೆಳ್ಳಿ, ಬಂಗಾರದ ಬೆಲೆ ಎಷ್ಟು ತಿಳಿಯಿರಿ

ನಿಗದಿತ ಕಾಲಮಿತಿಯ ನಂತರ ಕ್ರಮ :
ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಿಎಂ ಕಿಸಾನ್ ನಿಧಿ ರಿಕವರಿಗೆ ಸಂಬಂಧಿಸಿದಂತೆ ಕೆಲವು ರೈತರಿಗೆ ನೋಟಿಸ್ ಕೂಡಾ ನೀಡಲಾಗಿದೆ. ನೋಟಿಸ್ ಪಡೆದಿರುವ ರೈತರು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಪಡೆದಿರುವ ಹಣವನ್ನು ಹಿಂದಿರುಗಿಸುವ ಕಾರ್ಯವನ್ನು ಕೂಡಾ ಮಾಡುತ್ತಿದ್ದಾರೆ. ಇನ್ನು ನಿಗದಿತ ಕಾಲಮಿತಿಯ ಒಳಗೆ ಈ ಹಣವನ್ನು ಹಿಂದಿರುಗಿಸದೇ ಹೋದರೆ ಅಂಥಹ ರೈತರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದು. 

ಆದಾಯ ತೆರಿಗೆ ಪಾವತಿದಾರ ರೈತರಿಂದ ಹಣ ವಾಪಸ್ :
ಸರ್ಕಾರ ನಡೆಸುತ್ತಿರುವ ‘ಪಿಎಂ ಕಿಸಾನ್ ನಿಧಿ’ಯ ಲಾಭ ಪಡೆಯುತ್ತಿರುವ ಸಾಕಷ್ಟು ಮಂದಿ ತೆರಿಗೆ ಪಾವತಿಸುವ ವಿಭಾಗದಲ್ಲಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಅರ್ಹರಲ್ಲ ಎನ್ನುವುದನ್ನು ಸರ್ಕಾರ ಮೊದಲೇ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಪಾವತಿ ಮಾಡುವ ರೈತರಿಂದ ಈ ಹಣವನ್ನು ವಾಪಸ್ ಪಡೆಯಲಾಗುತ್ತಿದೆ. 

ಇದನ್ನೂ ಓದಿ : NPS ಹೂಡಿಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಮುಂದೆ ಚಂದಾದಾರರಿಗೆ ಸಿಗಲಿದೆ ಈ ಅದ್ಭುತ ಸೌಕರ್ಯ

ಯಾರು ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ :
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವ ರೈತರು ಮತ್ತು ಪತಿ-ಪತ್ನಿ ಇಬ್ಬರೂ ಈ ಯೋಜನೆಯ ಲಾಭವನ್ನು ಪಡೆಯುವಂತಿಲ್ಲ. ಅಂದರೆ, ಯಾವುದೇ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯ ಲಾಭ ಪಡೆಯಬೇಕಾದರೆ ರೈತರಾಗಿರಬೇಕು. ರೈತರಲ್ಲದವರು ಈ ಯೋಜನೆಯ ಲಾಭ ಪಡೆಯುವುದು ಸಾಧ್ಯವಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News