ಆದಾಯ ಲಕ್ಷವೇ ಇರಲಿ, ಇಲ್ಲ ಕೋಟಿಯೇ ಇರಲಿ ಈ ದೇಶದಲ್ಲಿ ಒಂದು ರೂಪಾಯಿಯೂ ತೆರಿಗೆ ಪಾವತಿಸಬೇಕಿಲ್ಲ!

Tax Free Countries: ಭಾರತವಷ್ಟೇ ಅಲ್ಲ, ಹಲವು ದೇಶಗಳಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯಕ್ಕೆ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ, ಇನ್ನೂ ಕೆಲವು ದೇಶಗಳಲ್ಲಿ ನಿಮ್ಮ ಆದಾಯ ಲಕ್ಷಗಳಲ್ಲಷ್ಟೇ ಅಲ್ಲ, ಕೋಟಿಗಳಲ್ಲಿದ್ದರೂ ಸಹ ಒಂದು ರೂಪಾಯಿಯೂ ತೆರಿಗೆ ಪಾವಟಿಸುವ ಅವಶ್ಯಕತೆ ಇರುವುದಿಲ್ಲ. 

Written by - Yashaswini V | Last Updated : Aug 13, 2024, 01:29 PM IST
  • ತೆರಿಗೆ ಮುಕ್ತ ದೇಶಗಳಲ್ಲಿ ದೇಶದ ನಾಗರೀಕರಷ್ಟೇ ಅಲ್ಲ, ವಿದೇಶಿ ನಾಗರಿಕರು, ಹೂಡಿಕೆದಾರರು ಮತ್ತು ಉದ್ಯಮಿಗಳು ತಮ್ಮ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ.
  • ಅಷ್ಟೇ ಅಲ್ಲ, ಇದಕ್ಕಾಗಿ ಅವರು ಅತಿ ಕಡಿಮೆ ತೆರಿಗೆ ಕಟ್ಟಬೇಕಾಗುತ್ತದೆ.
  • ಮಾತ್ರವಲ್ಲ, ಕೋಟಿಗಟ್ಟಲೆ ಹಣ ಇಡುವಾಗಲೂ ಸಹ ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ.
ಆದಾಯ ಲಕ್ಷವೇ ಇರಲಿ, ಇಲ್ಲ ಕೋಟಿಯೇ ಇರಲಿ ಈ ದೇಶದಲ್ಲಿ ಒಂದು ರೂಪಾಯಿಯೂ ತೆರಿಗೆ ಪಾವತಿಸಬೇಕಿಲ್ಲ!  title=

Tax Free Countries: ಭಾರತದಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯಕ್ಕೆ ಇಂತಿಷ್ಟು ಎಂದು ಆದಾಯ ತೆರಿಗೆಯನ್ನು (Income Tax) ಪಾವತಿಸಬೇಕಾಗುತ್ತದೆ. ಆದರೆ, ಕೆಲ್ವು ದೇಶಗಳಲ್ಲಿ ಆದಾಯ ಎಷ್ಟೇ ಇದ್ದರೂ ಅದರ ಮೇಲೆ ಯಾವುದೇ ತೆರಿಗೆಯನ್ನು ಪಾವಟಿಸುವ ಅವಶ್ಯಕತೆ ಇರುವುದಿಲ್ಲ ಅಥವಾ ಕಡಿಮೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹ "ತೆರಿಗೆ ಮುಕ್ತ ದೇಶ"ಗಳನ್ನು "ಟ್ಯಾಕ್ಸ್ ಹೆವನ್ ದೇಶಗಳು" ಎಂತಲೇ ಕರೆಯಲಾಗುತ್ತದೆ. 

"ಟ್ಯಾಕ್ಸ್ ಹೆವನ್ ದೇಶಗಳ" ಪಟ್ಟಿ(List of "Tax Haven Countries"): 
1- ಬ್ರಿಟಿಷ್ ವರ್ಜಿನ್ ದ್ವೀಪಗಳು
2- ಕೇಮನ್ ದ್ವೀಪಗಳು
3- ಬರ್ಮುಡಾ
4- ನೆದರ್ಲ್ಯಾಂಡ್ಸ್
5- ಸ್ವಿಟ್ಜರ್ಲೆಂಡ್
6- ಲಕ್ಸೆಂಬರ್ಗ್
7- ಹಾಂಗ್ ಕಾಂಗ್
8- ಜರ್ಸಿ
9- ಸಿಂಗಾಪುರ
10- ಯುನೈಟೆಡ್ ಅರಬ್ ಎಮಿರೇಟ್ಸ್
11- ಮಾರಿಷಸ್
12- ಸೈಪ್ರಸ್
13- ಪನಾಮ

ಇದನ್ನೂ ಓದಿ- Gruha Lakshmi: ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣ

ತೆರಿಗೆ ಮುಕ್ತ ದೇಶಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಎನ್ನಲು ಕಾರಣವೇನು? 
ತೆರಿಗೆ ಮುಕ್ತ ದೇಶಗಳಲ್ಲಿ (Tax Free Countries) ದೇಶದ ನಾಗರೀಕರಷ್ಟೇ ಅಲ್ಲ, ವಿದೇಶಿ ನಾಗರಿಕರು, ಹೂಡಿಕೆದಾರರು ಮತ್ತು ಉದ್ಯಮಿಗಳು ತಮ್ಮ ಹಣವನ್ನು  ಠೇವಣಿ ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇದಕ್ಕಾಗಿ ಅವರು ಅತಿ ಕಡಿಮೆ ತೆರಿಗೆ ಕಟ್ಟಬೇಕಾಗುತ್ತದೆ. ಮಾತ್ರವಲ್ಲ, ಕೋಟಿಗಟ್ಟಲೆ ಹಣ ಇಡುವಾಗಲೂ ಸಹ ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ. ಒಂದರ್ಥದಲ್ಲಿ ಈ ದೇಶಗಳು ಕಪ್ಪುಹಣ ಕ್ರೋಢೀಕರಣಕ್ಕೆ ಸಹಕಾರಿ ಆಗಿವೆ. ಹಾಗಾಗಿಯೇ ಈ ದೇಶಗಳು ತೆರಿಗೆ ವಂಚಕರಿಗೆ ಸ್ವರ್ಗದಂತಿದ್ದು, ಇವುಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ- ನಿವೃತ್ತಿ ಘೋಷಿಸಲು ಮುಂದಾದ ಗೌತಮ್ ಅದಾನಿ !ಕೋಟಿಗಳ ಸಾಮ್ರಾಜ್ಯದ ಸಾರಥ್ಯ ಯಾರ ಹೆಗಲಿಗೆ ? ರೇಸ್ ನಲ್ಲಿದೆ ನಾಲ್ಕು ಹೆಸರು !

ಹಿಂಡೆನ್‌ಬರ್ಗ್ ಪ್ರಕರಣದಲ್ಲಿ  ಟ್ಯಾಕ್ಸ್ ಹೆವನ್ ದೇಶಗಳಲ್ಲಿ ಒಂದಾಗಿರುವ ಬರ್ಮುಡಾ ಮತ್ತು ಮಾರಿಷಸ್‌ನಂತಹ ದೇಶಗಳ ಹೆಸರುಗಳು ಕೇಳಿಬರಲು ಏನು ಕಾರಣ? 
ಇತ್ತೀಚೆಗಷ್ಟೇ ಶನಿವಾರದಂದು (ಆಗಸ್ಟ್ 10) ಹಿಂಡೆನ್‌ಬರ್ಗ್ (Hindenburg) ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಆರ್ಥಿಕ ಅಕ್ರಮಗಳ ಆರೋಪ ಹೊರಿಸಿರುವ ವರದಿಯನ್ನು ಬಿಡುಗಡೆ ಮಾಡಿದೆ. ಹಿಂಡೆನ್‌ಬರ್ಗ್ ವರದಿಯ (Hindenburg Report) ಪ್ರಕಾರ, ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಬರ್ಮುಡಾ ಮತ್ತು ಮಾರಿಷಸ್ ಆಫ್‌ಶೋರ್ ಫಂಡ್‌ಗಳಲ್ಲಿ ಷೇರುಗಳನ್ನು ಹೊಂದಿದ್ದರು, ಅದನ್ನು ಅದಾನಿ ಗ್ರೂಪ್ ಪರವಾಗಿ ಬಳಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News