ನೀವೂ Syndicate Bank ಖಾತೆದಾರರಾಗಿದ್ದರೆ ಜೂನ್ 30ರೊಳಗೆ ಪೂರೈಸಿಕೊಳ್ಳಿ ಈ ಕೆಲಸ

ಸಿಂಡಿಕೇಟ್ ಬ್ಯಾಂಕ್ ಅನ್ನು  ಕೆನರಾ ಬ್ಯಾಂಕ್‌ ನೊಂದಿಗೆ ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಸಿಂಡಿಕೇಟ್ ಐಎಫ್‌ಎಸ್‌ಸಿ ಕೋಡ್ ಅಥವಾ ಐಎಫ್‌ಎಸ್‌ಸಿ  ಬದಲಾಗಿರುವುದಾಗಿ ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.  

Written by - Ranjitha R K | Last Updated : May 26, 2021, 02:42 PM IST
  • ಐಎಫ್‌ಎಸ್‌ಸಿ ಕೋಡ್ ಅಪ್ ಡೇಟ್ ಮಾಡಲು ಜೂನ್ 30 ರವರೆಗೆ ಸಮಯಾವಕಾಶ
  • ಬದಲಾಗಿದೆ ಸಿಂಡಿಕೇಟ್ ಬ್ಯಾಂಕ್ ಐಎಫ್‌ಎಸ್‌ಸಿ
  • ಜುಲೈ 1 ರಿಂದ ಹೊಸ ಐಎಫ್‌ಎಸ್‌ಸಿ ಕೋಡ್
ನೀವೂ Syndicate Bank ಖಾತೆದಾರರಾಗಿದ್ದರೆ ಜೂನ್ 30ರೊಳಗೆ ಪೂರೈಸಿಕೊಳ್ಳಿ ಈ ಕೆಲಸ title=
ಬದಲಾಗಿದೆ ಸಿಂಡಿಕೇಟ್ ಬ್ಯಾಂಕ್ ಐಎಫ್‌ಎಸ್‌ಸಿ (File photo Zee news)

ನವದೆಹಲಿ : ನೀವು ಕೂಡಾ ಸಿಂಡಿಕೇಟ್ ಬ್ಯಾಂಕಿನಲ್ಲಿ (Syndicate Bank) ಅಕೌಂಟ್ ಹೊಂದಿದ್ದೀರಾ ಹಾಗಿದ್ದರೆ ನಿಮಗೆ ಇದು ಮಹತ್ವದ ಸುದ್ದಿ. ಜುಲೈ ಒಂದರಿಂದ ಈ ಬ್ಯಾಂಕಿನ ಐಎಫ್‌ಎಸ್‌ಸಿ (IFSC) ಅಮಾನ್ಯವಾಗುತ್ತದೆ. ಅಂದರೆ ತಮ್ಮ ಬ್ಯಾಂಕ್ ಶಾಖೆಯ ಐಎಫ್‌ಎಸ್‌ಸಿ ಕೋಡ್ ಅಪ್ ಡೇಟ್ ಮಾಡಲು, ಈ ಬ್ಯಾಂಕಿನ ಗ್ರಾಹಕರಿಗೆ ಜೂನ್ 30 ರವರೆಗೆ ಸಮಯಾವಕಾಶವಿರುತ್ತದೆ. ಶಾಖೆಯ ಐಎಫ್‌ಎಸ್‌ಸಿ ಕೋಡ್ ಅಪ್ ಡೇಟ್ ಮಾಡಿದ ನಂತರ ಈ ಮಾಹಿತಿಯನ್ನು ಕೆನರಾ ಬ್ಯಾಂಕಿಗೆ (Canara Bank) ನೀಡಬೇಕಾಗುತ್ತದೆ. 

ಬದಲಾಗಿದೆ ಸಿಂಡಿಕೇಟ್ ಬ್ಯಾಂಕ್ ಐಎಫ್‌ಎಸ್‌ಸಿ :
ಸಿಂಡಿಕೇಟ್ ಬ್ಯಾಂಕ್ ಅನ್ನು (Syndicate Bank) ಕೆನರಾ ಬ್ಯಾಂಕ್‌ ನೊಂದಿಗೆ ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಸಿಂಡಿಕೇಟ್ ಐಎಫ್‌ಎಸ್‌ಸಿ ಕೋಡ್ ಅಥವಾ ಐಎಫ್‌ಎಸ್‌ಸಿ (The Indian Financial System Code) ಬದಲಾಗಿರುವುದಾಗಿ ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.  ಐಎಫ್‌ಎಸ್‌ಸಿ  ಇದೊಂದು 11 ಅಂಕಿಗಳ ಆಲ್ಫಾನ್ಯೂಮರಿಕ್ ಕೋಡ್ ಆಗಿರುತ್ತದೆ.  

ಇದನ್ನೂ ಓದಿ : Post Office Savings Scheme: ಪೋಸ್ಟ್ ಆಫೀಸ್‌ನ ಅತ್ಯಂತ ಲಾಭದಾಯಕ ಯೋಜನೆ, ಕೇವಲ 5 ವರ್ಷ ಹೂಡಿಕೆ ಮಾಡಿ ಮೇಲೆ 14 ಲಕ್ಷ ರೂ. ಗಳಿಸಿ

ಜುಲೈ 1 ರಿಂದ ಹೊಸ ಐಎಫ್‌ಎಸ್‌ಸಿ ಕೋಡ್ :
ಕೆನರಾ ಬ್ಯಾಂಕ್ ಪ್ರಕಾರ, SYNB ಯಿಂದ ಪ್ರಾರಂಭವಾಗುವ ಎಲ್ಲಾ ಐಎಫ್‌ಎಸ್‌ಸಿ (IFSC) ಕೋಡ್‌ಗಳು ಜುಲೈ 1, 2021 ರೊಳಗೆ ನಿಷ್ಕ್ರಿಯಗೊಳ್ಳುತ್ತವೆ. ಇದಾದ ನಂತರ  NEFT / RTGS / IMPS ಮೂಲಕ ಹಣ ಕಳುಹಿಸಬೇಕಾದರೆ, CNRB ಮೂಲಕ ಆರಂಭವಾಗುವ ಐಎಫ್‌ಎಸ್‌ಸಿ ಕೋಡ್  ಬಳಸಬೇಕಾಗುತ್ತದೆ.  ಗ್ರಾಹಕರ ಹಳೆಯ ಚೆಕ್‌ಬುಕ್ (Cheque book) ಜೂನ್ 30 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ನಂತರ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ತಕ್ಷಣ ತಮ್ಮ ಶಾಖೆಗೆ ಹೋಗಿ ಅದನ್ನು ಅಪ್ ಡೇಟ್ ಮಾಡುವಂತೆ, ಕೆನರಾ ಬ್ಯಾಂಕ್ (Canara Bank) ಹೇಳಿದೆ. 

ಐಎಫ್‌ಎಸ್‌ಸಿ ಕೋಡ್ ಬದಲಾವಣೆ ಯಾಕೆ?
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2019 ರಲ್ಲಿ 10 ಸರ್ಕಾರಿ ಬ್ಯಾಂಕುಗಳನ್ನು 4 ದೊಡ್ಡ ಬ್ಯಾಂಕುಗಳ ಜೊತೆ ವಿಲೀನಗೊಳಿಸಿ ಆದೇಶ ಹೊರಡಿಸಿದ್ದರು.  ವಿಲೀನದ ಎರಡೆರಡು ನಂತರ, ಐಎಫ್‌ಎಸ್‌ಸಿ ಕೋಡ್‌ ಗಳೊಂದಿಗೆ ವ್ಯವಹಾರ ನಡೆಸುವುದು ಸಾಧ್ಯವಿಲ್ಲ. ಯಾಕೆಂದರೆ ವಿಲೀನದ ನಂತರ ವಿಲೀನಗೊಂಡ ಬ್ಯಾಂಕಿನ ಅಸ್ತಿತ್ವ ಕೊನೆಯಾಗುತ್ತದೆ. ಹಾಗಾಗಿ ಆ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌ ಕೂಡಾ ಅಮಾನ್ಯವಾಗುತ್ತದೆ. 

ಇದನ್ನೂ ಓದಿ : Bank Holidays: ಜೂನ್‌ನಲ್ಲಿ ಎಷ್ಟು ದಿನ ರಜೆ ಇರಲಿದೆ ಬ್ಯಾಂಕ್, ಇಲ್ಲಿದೆ ಫುಲ್ ಲಿಸ್ಟ್

ವಿಲೀನಗೊಂಡಿರುವ ಬ್ಯಾಂಕುಗಳು :
ಮೊದಲೇ ಹೇಳಿದಂತೆ, 10 ಸರ್ಕಾರಿ ಬ್ಯಾಂಕುಗಳನ್ನು 4 ದೊಡ್ಡ ಬ್ಯಾಂಕುಗಳಾಗಿ ವಿಲೀನಗೊಳಿಸಲಾಗಿದೆ. ವಿಲೀನಗೊಂಡ 10 ಬ್ಯಾಂಕುಗಳು ಯಾವುವೆಂದರೆ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ (Bank Of Baroda) , ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ (Corporation Bank) , ಆಂಧ್ರ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಲಹಾಬಾದ್ ಬ್ಯಾಂಕ್. ಈ ಬ್ಯಾಂಕುಗಳನ್ನು ಇತರ ಪ್ರಮುಖ ಬ್ಯಾಂಕುಗಳಲ್ಲಿ ವಿಲೀನಗೊಳಿಸಲಾಗಿದೆ. ಬ್ಯಾಂಕುಗಳ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ಕೋಡ್‌ಗಳನ್ನು ಅಪ್ಡೇಟ್ ಮಾಡುವ ಪ್ರಕ್ರಿಯೆ ಏಪ್ರಿಲ್ 1, 2021 ರಿಂದ ಪ್ರಾರಂಭವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News