Stock Market Update - ದುರ್ಬಲ ಜಾಗತಿಕ ಸೂಚನೆಗಳ ನಡುವೆ, ಭಾರತೀಯ ಷೇರು ಮಾರುಕಟ್ಟೆ ಸೋಮವಾರ ತೀವ್ರ ಕುಸಿತ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಪ್ರಮುಖ ಸೂಚ್ಯಂಕಗಳ ಸೆನ್ಸೆಕ್ಸ್ ಸುಮಾರು 2 ತಿಂಗಳ ನಂತರ ಮೊದಲ ಬಾರಿಗೆ 59,000 ಕ್ಕಿಂತ ಕೆಳಕ್ಕೆ ಜಾರಿಗೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ನಿಫ್ಟಿ ಕೂಡ 18 ಸಾವಿರದ ಕೆಳಗೆ ತನ್ನ ದಿನದ ಮುಕ್ತಾಯ ಕಂಡಿದೆ. ಸೆನ್ಸೆಕ್ಸ್ 1170.12 ಅಂಕಗಳ ನಷ್ಟದೊಂದಿಗೆ 58,465.89 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದರೆ, ನಿಫ್ಟಿ 348.25 ಅಂಕಗಳ ನಷ್ಟದೊಂದಿಗೆ 17,416.55 ಅಂಕಗಳ ಮಟ್ಟದಲ್ಲಿ ತನ್ನ ವಹಿವಾಟನ್ನು ಮುಗಿಸಿದೆ. ಇದರಿಂದ ಹೂಡಿಕೆದಾರರು ಸುಮಾರು 8 ಲಕ್ಷ ಕೋಟಿ ರೂ. ನಷ್ಟವನ್ನು ಅನುಭವಿಸಿದ್ದಾರೆ.
ಇದಕ್ಕೂ ಮುನ್ನ ಮಧ್ಯಾಹ್ನ 1.35ಕ್ಕೆ ಸೆನ್ಸೆಕ್ಸ್ 1171.11 ಅಂಕ (ಶೇ. 1.96) ಇಳಿಕೆಯಾಗಿ 58,464.90ರಲ್ಲಿ ವಹಿವಾಟು ನಡೆಸುತ್ತಿತ್ತು. ಇದೇ ಅವಧಿಯಲ್ಲಿ ನಿಫ್ಟಿ 331.45 ಪಾಯಿಂಟ್‌ಗಳಷ್ಟು (ಶೇ 1.87) ಅಂದರೆ, 17,433.35 ಕ್ಕೆ ಇಳಿದಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 202.56 ಪಾಯಿಂಟ್ ಗಳ ಕುಸಿತ ಕಂಡು 59,433.45 ಅಂಕಗಳಿಗೆ ತಲುಪಿತ್ತು. ಇನ್ನೊಂದೆಡೆ ನಿಫ್ಟಿ ಕೂಡ ಈ ಅವಧಿಯಲ್ಲಿ 56.30 ಅಂಕ ಕುಸಿದು 17708.50ಕ್ಕೆ ತಲುಪಿತ್ತು. ನಿಫ್ಟಿ ಇಂದು ಆರು ತಿಂಗಳಲ್ಲೇ ಅತಿದೊಡ್ಡ ಕರೆಕ್ಷನ್ ಕಂಡಿದೆ.
ಇದನ್ನೂ ಓದಿ-Alert! ಅಪ್ಪಿ-ತಪ್ಪಿಯೂ ಕೂಡ ಗೂಗಲ್ ನಲ್ಲಿ ಈ ಸಂಖ್ಯೆ ಹುಡುಕಾಟ ನಡೆಸಬೇಡಿ
ರಿಲಯನ್ಸ್ ಷೇರು ಕುಸಿತ
ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ (Mukesh Ambani) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ತೈಲ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ವ್ಯವಹಾರದಲ್ಲಿ ಸೌದಿ ಅರೇಬಿಯಾದ ಕಂಪನಿ ಸೌದಿ ಅರಾಮ್ಕೋಗೆ ಶೇ. 20 ಪಾಲನ್ನು ಮಾರಾಟ ಮಾಡುವ ಒಪ್ಪಂದದ ಮರುಮೌಲ್ಯಮಾಪನವನ್ನು ಘೋಷಿಸದ ಹಿನ್ನೆಲೆ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇಂದು ಭಾರಿ ಕುಸಿತ ಕಂಡಿವೆ. ಶೇರುಗಳು 109.35 ಪಾಯಿಂಟ್‌ಗಳಷ್ಟು (ಶೇ 4.42) ಅಂದರೆ, 2363.40 ಕ್ಕೆ ತನ್ನ ವಹಿವಾಟನ್ನು ಕೊನೆಗೊಳಿಸಿವೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಬಂಡವಾಳ 14,99,185.71 ಕೋಟಿ ರೂ.ಗಳಷ್ಟು ಇದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Indian Railways: ರೈಲಿನ ರಿಸರ್ವ್ ಟಿಕೆಟ್ ಅನ್ನು ರದ್ದುಗೊಳಿಸುವ ಮೊದಲು, IRCTC ಯ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ
ಈ ವಲಯಗಳಲ್ಲಿ ಅತಿದೊಡ್ಡ ಕುಸಿತ
ಇಂದಿನ ವಲಯದ ಸೂಚ್ಯಂಕಗಳ ಕುರಿತು ಹೇಳುವುದಾದರೆ ಎಲ್ಲಾ ವಲಯಗಳು ರೆಡ್ ಮಾರ್ಕ್‌ನಲ್ಲಿ ವಹಿವಾಟನ್ನು ಅಂತ್ಯಗೊಳಿಸಿವೆ. ಪಿಎಸ್‌ಯು ಬ್ಯಾಂಕ್, ಮೀಡಿಯಾ ಮತ್ತು ರಿಯಾಲ್ಟಿ ಸೆಕ್ಟರ್ ಗಳಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಬ್ಯಾಂಕ್‌ಗಳು, ಆಟೋ, ಎಫ್‌ಎಂಸಿಜಿ, ಹಣಕಾಸು ಸೇವೆ, ಐಟಿ, ಲೋಹ, ಫಾರ್ಮಾ ಮತ್ತು ಖಾಸಗಿ ಬ್ಯಾಂಕ್‌ಗಳು ಕೂಡ ರೆಡ್ ಮಾರ್ಕ್‌ನಲ್ಲಿ ವಹಿವಾಟನ್ನು ನಿಲ್ಲಿಸಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.