ನವದೆಹಲಿ: Blockchain Technology - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಮೆರಿಕದ ಜೆಪಿ ಮೋರ್ಗನ್ (JP Morgan) ಜೊತೆ ಸೇರಿ ವಿದೇಶದಲ್ಲಿ ವಹಿವಾಟಿನ ವೇಗವನ್ನು ಹೆಚ್ಚಿಸಲು ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಎಸ್‌ಬಿಐ ಈ ಅಮೆರಿಕನ್ ಬ್ಯಾಂಕಿನ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಲಿದೆ. ಎರಡು ದೊಡ್ಡ ಬ್ಯಾಂಕುಗಳ ನಡುವಿನ ಈ ಒಪ್ಪಂದದ ನಂತರ, ಎಸ್‌ಬಿಐ ಗ್ರಾಹಕರು ಪಾವತಿ ಸಮಯ ಮತ್ತು ವಹಿವಾಟು ವೆಚ್ಚವನ್ನು ಉಳಿಸಲು ಸಾಧ್ಯವಾಗುತ್ತದೆ. ಗಡಿಯಾಚೆಗಿನ ಪಾವತಿಗಳಿಗೆ ಸಂಬಂಧಿಸಿದ ವಿಚಾರಣೆಗಳು ಮತ್ತು ಮಾಹಿತಿಗಾಗಿ ಈ ಹಿಂದೆ ಹದಿನೈದು ದಿನಗಳು ಬೇಕಾಗುತ್ತಿತ್ತು. ಆದರೆ ಇದೀಗ ಬ್ಲಾಕ್‌ಚೈನ್ ತಂತ್ರಜ್ಞಾನದ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಹಣಪಾವತಿ ಮಾಡಬಹುದು. SBIನ (State Bank Of India) ಈ ಹೆಜ್ಜೆಯಿಂದ ಕಡಿಮೆ ಹಂತಗಳಲ್ಲಿ ಮತ್ತು ಕಡಿಮೆ ಸಮಯದಲ್ಲಿ ಗಡಿಯಾಚೆಗಿನ ಪಾವತಿ ಸಾಧ್ಯ. ಈ ಕುರಿತು ಮಾಹಿತಿ ನೀಡಿರುವ ಎಸ್‌ಬಿಐ ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಗ್ರೂಪ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ವೆಂಕಟನಾಗೇಶ್ವ್ಕರ್, ಇತ್ತೀಚಿನ ವರ್ಷಗಳಲ್ಲಿ ನಾವು ಡಿಜಿಟಲ್ ರೂಪಾಂತರದ ಒಂದು ಹಂತದ ಮೂಲಕ ಸಾಗಿದ್ದೇವೆ ಎಂದಿದ್ದಾರೆ. ನಮ್ಮ ದೈನಂದಿನ ಕಾರ್ಯಾಚರಣೆಯನ್ನು ಸುಧಾರಿಸಲು ನಾವು ಹೊಸ ತಂತ್ರಜ್ಞಾನವನ್ನು ಇನ್ನಷ್ಟು ಸೇರಿಸುವುದನ್ನು ಮುಂದುವರೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
'ಈ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಿದ ದೇಶದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ನಮ್ಮ ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್ ಸೇವೆಯನ್ನು ಒದಗಿಸಲು ನಾವು ಈ ಅಪ್ಲಿಕೇಶನ್ ಅನ್ನು ಅನ್ವೇಷಿಸುತ್ತಿದ್ದೇವೆ. ಇದು ಜೆಪಿ ಮೋರ್ಗನ್ ಜೊತೆಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ JP Morgan ಕೂಡ' ಭಾರತದಲ್ಲಿ ತನ್ನ ಬ್ಲಾಕ್‌ಚೈನ್‌ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದಿದೆ. ಜೆಪಿ ಮೋರ್ಗಾನ್ ಚೇಸ್ ಬ್ಯಾಂಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಪೊರೇಟ್ ಮುಖ್ಯಸ್ಥ ಪಿಡಿ ಸಿಂಗ್, "ನಮ್ಮ ಗ್ರಾಹಕರ ಅನುಭವವನ್ನು ಸುಧಾರಿಸಲು ನಾವು ನಿರಂತರವಾಗಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಅನ್ವೇಷಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ- ನಿಮಗೆ ಉತ್ತಮ Income ನೀಡುವ SBI ಯೋಜನೆ ಬಗ್ಗೆ ತಪ್ಪದೇ ತಿಳಿಯಿರಿ
ಏನಿದು Blockchain Technology ತಂತ್ರಜ್ಞಾನ?
ಈ ಜಾಗತಿಕ ಬ್ಯಾಂಕಿನ ಈ ಬ್ಲಾಕ್‌ಚೈನ್ ತಂತ್ರಜ್ಞಾನವು(Blockchain Technology) ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್‌ಗಳು ಮತ್ತು ಹಣಕಾಸು ಕಂಪನಿಗಳಿಗೆ ಪೀರ್-ಟು-ಪೀರ್ ನೆಟ್‌ವರ್ಕ್ ಆಗಿದೆ. ಇದು ಬಳಕೆದಾರರು ತಮ್ಮ ನಡುವೆ ಡೇಟಾವನ್ನು ವೇಗವಾಗಿ, ನಿಯಂತ್ರಿತ ಮತ್ತು ಸುರಕ್ಷಿತವಾಗಿ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಗಡಿಯಾಚೆಗಿನ ಪಾವತಿಯ(Cross Border Payments) ಸಮಯದಲ್ಲಿ ಸಂಭವನೀಯ ಅಪಾಯವನ್ನು ಎದುರಿಸಲು ಇದು ಸಹಾಯ ಮಾಡುತ್ತದೆ. ಜಾಗತಿಕವಾಗಿ, ಸುಮಾರು 100 ಬ್ಯಾಂಕುಗಳು ಈ ನೆಟ್‌ವರ್ಕ್ ಅನ್ನು ಬಳಸುತ್ತಿವೆ. ಇತರ ಅನೇಕ ಖಾಸಗಿ ಮತ್ತು ಸರ್ಕಾರಿ ಸಾಲದಾತರು ಜೆಪಿ ಮೋರ್ಗನ್ ನ ಈ ನೆಟ್‌ವರ್ಕ್‌ಗೆ ಸೇರಲು ಯೋಚಿಸುತ್ತಿದ್ದಾರೆ.
ಇದನ್ನೂ ಓದಿ- SBI Alert : ಇದು ಭಾರೀ `ಮೋಸದ ಜಾಲ', ಬಿಟ್ಟು ಬಿಡಿ ದುರಾಸೆಯ ಫಟಾಫಟ್ ಸಾಲ..!
ಮತ್ತೆರಡು ಬ್ಯಾಂಕ್ ಗಳು ಜೆಪಿ ಮೋರ್ಗನ್ ಜೊತೆ ಇದಕ್ಕಾಗಿ ಚರ್ಚೆ ನಡೆಸುತ್ತಿವೆ
ಚೀನಾ ಮತ್ತು ಆಫ್ರಿಕಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿನ ಬ್ಯಾಂಕುಗಳು ಗಡಿಯಾಚೆಗಿನ ವ್ಯವಹಾರಗಳಿಗೆ ಬ್ಲಾಕ್‌ಚೈನ್ ಆಧಾರಿತ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಬ್ಲಾಕ್‌ಚೇನ್ ತಜ್ಞರು ಹೇಳುತ್ತಾರೆ.ಇದರಿಂದ ಈ ಬ್ಯಾಂಕ್ ಗಳ ಪೇಮೆಂಟ್ ಸೇವೆ ದುರುಸ್ತಿಯಾಗುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ವೇಗವಾಗಿ ಹಣ ಪಾವತಿಸಲಾಗುತ್ತಿದೆ. ಇದೆ ಸರದಿಯಲ್ಲಿ ಮುಂಬೈನ ಮತ್ತೆರಡು ದೊಡ್ಡ ಖಾಸಗಿ ವಲಯದ ಬ್ಯಾಂಕುಗಳು ಜೆಪಿ ಮೋರ್ಗನ್ ಅವರೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.