ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮತ್ತು ಸಾಮಾನ್ಯ ಜನರಿಗೆ ಆನ್‌ಲೈನ್ ವಂಚನೆಗಳ ಬಗ್ಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ.
ಎಸ್‌ಬಿಐ ಪ್ರಕಾರ, ಸೈಬರ್ ವಂಚಕರು ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್‌ಡಿ (Fixed Deposit) ಮಾಡಿದ ಗ್ರಾಹಕರ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತು ಕೆಲವು ಸೈಬರ್ ವಂಚಕರು ಗ್ರಾಹಕರ ಖಾತೆಯಲ್ಲಿ ಆನ್‌ಲೈನ್ ಎಫ್‌ಡಿಗಳನ್ನು ರಚಿಸಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ : Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ
ಎಸ್‌ಬಿಐ(State Bank of India) ಗ್ರಾಹಕರೆ ನಿಮ್ಮ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಾಗೇನಾದ್ರೂ ಆದ್ರೆ, ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗುವುದು ಗ್ಯಾರಂಟಿ ಎಡಿಎ ಕಾರಣ ತುಂಬಾ ಉಷಾರಾಗಿರಿ ಎಂದು ಟ್ವೀಟ್ ಮಾಡಿದೆ.
We urge our customers not to share their banking details with anyone. Don't fall for scammers impersonating as SBI, we never ask for personal details like Password/OTP/CVV/Card Number over the phone.
Be alert. Be safe.#CyberCrime #CyberSafety #OnlineFraud #BankFraud #Scam pic.twitter.com/0Td4cp54VE
— State Bank of India (@TheOfficialSBI) April 5, 2021
ಇದನ್ನೂ ಓದಿ : Paytm ನಿಂದ ಸಿಗುತ್ತೆ ಕೇವಲ 2 ನಿಮಿಷದಲ್ಲಿ ₹ 2 ಲಕ್ಷ ಸಾಲ..!
ನಿಮ್ಮ ಎಟಿಎಂ(ATM) ಪಾಸ್‌ವರ್ಡ್ / ಒಟಿಪಿ / ಸಿವಿವಿ / ಕಾರ್ಡ್ ಸಂಖ್ಯೆ ಮುಂತಾದ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಎಸ್‌ಬಿಐ ನಿಂದ ಯಾವುದೇ ವಿವರಗಳನ್ನು ಕೇಳಲು ಫೋನ್, ಎಸ್‌ಎಂಎಸ್ ಅಥವಾ ಮೇಲ್ ಮಾಡುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : Gold Rate: ಚಿನ್ನ ಖರೀದಿದಾರರೇ ಗಮನಿಸಿ: ಇಲ್ಲಿದೆ ಇಂದಿನ ಬಂಗಾರ ಬೆಲೆ!
ಸೈಬರ್ ವಂಚಕರು ಎಫ್‌ಡಿ ಖಾತೆ(FD Account) ಗುರಿಯಾಗಿಸಿಕೊಂಡು ಗ್ರಾಹಕರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಸೈಬರ್ ವಂಚಕರು ಮೊದಲು ತಮ್ಮ ಬೇಸಿಕ್ ನೆಟ್ ಬ್ಯಾಂಕಿಂಗ್ ವಿವರಗಳನ್ನು ಬಳಸಿಕೊಂಡು ನಿಮ್ಮ ಹೆಸರಲ್ಲಿ ಎಫ್‌ಡಿ ಖಾತೆಯನ್ನು ರಚಿಸುತ್ತಾರೆ. ನಂತರ ತಮ್ಮ ಖಾತೆಯಿಂದ ಸ್ವಲ್ಪ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತಾರೆ. ನಂತರ ಬ್ಯಾಂಕ್ ಅಧಿಕಾರಿ ಹೆಸರು ಹೇಳಿಕೊಂಡು ಕರೆ ಮಾಡಿ ಒಟಿಪಿ ಕೇಳುತ್ತಾರೆ. ವಂಚಕರು ಒಟಿಪಿ ಪಡೆದ ನಂತರ, ನಿಮ್ಮ ಸಂಪೂರ್ಣ ಎಫ್‌ಡಿ ಮೊತ್ತವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಆದ್ದರಿಂದ ಬ್ಯಾಂಕ್ ಗ್ರಾಹಕರೇ ಆದಷ್ಟು ನಿಮ್ಮ ಚಾಣಾಕ್ಷತೆಯಲ್ಲಿರು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮೂಲಕ ಕೇಳಿಕೊಂಡಿದ್ದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.