ಮೋದಿ ಸರ್ಕಾರ ನೀಡುವ ಸಬ್ಸಿಡಿ ಪಡೆದು ಈ ಉದ್ಯಮ ಆರಂಭಿಸಿ, ಲಕ್ಷಾಂತರ ಆದಾಯ ಗಳಿಸಿ!

Business Concept: ಒಂದು ವೇಳೆ ನೀವೂ ಕೂಡ ನಿಮ್ಮ ಕೆಲಸವನ್ನು ಬಿಟ್ಟು ವ್ಯಾಪಾರ ಮಾಡಲು ಅಥವಾ ಸ್ವಂತ ಉದ್ದ್ಯಮವನ್ನು ಆರಂಭಿಸಲು ಯೋಚಿಸುತಿದ್ದರೆ, ಇಂದು ನಾವು ನಿಮಗೆ ಉತ್ತಮ ವ್ಯಾಪಾರ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ (Business News In Kannada). 

Written by - Nitin Tabib | Last Updated : Aug 21, 2023, 11:45 PM IST
  • ಈ ವ್ಯವಹಾರ ಕಲ್ಪನೆಯಿಂದ, ನೀವು ಪ್ರತಿ ತಿಂಗಳು ಲಕ್ಷಾಂತರ ರೂ.ಗಳಿಕೆ ಮಾಡಬಹುದು.
  • ಈ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಶೇ. 50 ರಷ್ಟು ಸಹಾಯಧನ ಲಭ್ಯವಿರುವುದು ಒಂದು ಉತ್ತಮ ಸಂಗತಿಯಾಗಿದೆ. ಇದು ವಿಶೇಷ ವ್ಯವಹಾರವಾಗಿದೆ - ಮುತ್ತು ಕೃಷಿ.
  • ಚಿಪ್ಪು, ಮುತ್ತುಗಳ ವ್ಯಾಪಾರದ ಮೇಲೆ ಜನರ ಆಸಕ್ತಿ ಹೆಚ್ಚಾಗುತ್ತಿದೆ.
ಮೋದಿ ಸರ್ಕಾರ ನೀಡುವ ಸಬ್ಸಿಡಿ ಪಡೆದು ಈ ಉದ್ಯಮ ಆರಂಭಿಸಿ, ಲಕ್ಷಾಂತರ ಆದಾಯ ಗಳಿಸಿ! title=

Business Concept: ಒಂದು ವೇಳೆ ನೀವೂ ಕೂಡ ನಿಮ್ಮ ಕೆಲಸವನ್ನು ಬಿಟ್ಟು ವ್ಯಾಪಾರ ಮಾಡಲು ಅಥವಾ ಸ್ವಂತ ಉದ್ದ್ಯಮವನ್ನು ಆರಂಭಿಸಲು ಯೋಚಿಸುತಿದ್ದರೆ, ಇಂದು ನಾವು ನಿಮಗೆ ಉತ್ತಮ ವ್ಯಾಪಾರ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಉದ್ಯಮವನ್ನು ಆರಂಭಿಸಿ ನೀವು ಪ್ರತಿ ತಿಂಗಳು ಸಾವಿರಾರು ಅಲ್ಲ ಲಕ್ಷಾಂತರ ಆದಾಯ ಪಡೆಯಬಹುದು. ಈ ವ್ಯವಹಾರಕ್ಕೆ ಸರ್ಕಾರದಿಂದ ಶೇ. 50 ರಷ್ಟು  ಸಹಾಯಧನ ನೀಡಲಾಗುತ್ತದೆ. ಇದು ಮುತ್ತು ಕೃಷಿಯ ವ್ಯವಹಾರವಾಗಿದೆ. ಈ ಉದ್ಯಮವನ್ನು ಹೇಗೆ ಆರಂಭಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Business News In Kannada),

1. ಮುತ್ತು ಕೃಷಿಯ ಒಂದು ಎಕರೆ ಹೊಂಡದಲ್ಲಿ 25000 ಚಿಪ್ಪುಗಳನ್ನು ಹಾಕಿದರೆ ಸುಮಾರು 8 ಲಕ್ಷ ರೂ. ಗಳಿಕೆ ಮಾಡಬಹುದು ಒಂದು ವೇಳೆ ಈ ಚಿಪ್ಪುಗಳಲ್ಲಿ ಕೆಲ ಚಿಪ್ಪುಗಳು ಹಾಳಾದರೂ ಕೂಡ, ಇದರಲ್ಲಿ ಶೇ.50ಕ್ಕೂ ಹೆಚ್ಚು ಚಿಪ್ಪುಗಳು ಮುತ್ತಿನೊಂದಿಗೆ ಸುಲಭವಾಗಿ ಹೊರಬರುತ್ತವೆ. ಒಂದು ಮುತ್ತಿನ ಬೆಲೆ 120 ರಿಂದ 200 ರೂಪಾಯಿಗಳವರೆಗೆ ಇರುತ್ತದೆ. ತನ್ಮೂಲಕ ಎಲ್ಲಾ ವೆಚ್ಚಗಳನ್ನು ಕಳೆದ ನಂತರ, ಈ ವ್ಯವಹಾರವು ವಾರ್ಷಿಕವಾಗಿ 30 ಲಕ್ಷ ರೂ.ಆದಾಯ ನೀಡುತ್ತದೆ.

2. ಒಂದು ಚಿಪ್ಪು ತಯಾರಿಸಲು 25 ರಿಂದ 35 ರೂ. ವೆಚ್ಚ ತಗುಲುತ್ತದೆ ಒಂದು ಚಿಪ್ಪಿನಲ್ಲಿ ಎರಡು ಮುತ್ತುಗಳು ಹೊರಬರುತ್ತವೆ. ನಾವು ಅವುಗಳ ಮಾರಾಟದ ಬಗ್ಗೆ ಹೇಳುವುದಾದರೆ, ಒಂದು ಮುತ್ತು ಸುಮಾರು 120 ರಿಂದ 200 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಉತ್ತಮ ಗುಣಮಟ್ಟದ್ದಾಗಿದ್ದರೆ ರೂ.200ಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಹುದು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಇದಕ್ಕೆ ಸಹಾಯ ಮಾಡುತ್ತದೆ.

3. ಮುತ್ತು ಕೃಷಿಗಾಗಿ ಎಲ್ಲಾ ಚಿಪ್ಪುಗಳನ್ನು ಒಂದು ಬಲೆಯಲ್ಲಿ ಕಟ್ಟಿ 10 ರಿಂದ 15 ದಿನಗಳವರೆಗೆ ಕೊಳದಲ್ಲಿ ಹಾಕಲಾಗುತ್ತದೆ, ಇದರಿಂದ ಅವು ತಮ್ಮದೇ ಆದ ವಾತಾವರಣವನ್ನು ಸೃಷ್ಟಿಸುತ್ತವೆ. ಇದರ ನಂತರ, ಚಿಪ್ಪುಗಳನ್ನು ಹೊರತೆಗೆಯಲಾಗುತ್ತದೆ ಮತ್ತು ಅದರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ, ಸಿಂಪಿ ಒಳಗೆ ಅಚ್ಚನ್ನು ಸೇರಿಸಲಾಗುತ್ತದೆ. ಈ ಅಚ್ಚಿನ ಮೇಲೆ ಲೇಪನ ಮಾಡಿದ ನಂತರ, ಸಿಂಪಿ ಪದರವನ್ನು ತಯಾರಿಸಲಾಗುತ್ತದೆ, ಅದು ನಂತರ ಮುತ್ತು ಆಗುತ್ತದೆ.

4. ಈ ವ್ಯವಹಾರವನ್ನು ಮಾಡಲು ಮೂರು ವಿಷಯಗಳು ಬೇಕಾಗುತ್ತವೆ. ಮೊದಲನೆಯದಾಗಿ ಕೊಳ, ಚಿಪ್ಪು (ಇದರಿಂದ ಮುತ್ತುಗಳನ್ನು ತಯಾರಿಸಲಾಗುತ್ತದೆ) ಮತ್ತು ತರಬೇತಿ. ಎರಡನೆಯ ವಿಷಯವೆಂದರೆ ಚಿಪ್ಪುಗಳು, ಇವು ಭಾರತದ ಅನೇಕ ರಾಜ್ಯಗಳಲ್ಲಿ ದೊರೆಯುತ್ತವೆ. ದಕ್ಷಿಣ ಭಾರತ ಮತ್ತು ಬಿಹಾರದ ದರ್ಭಾಂಗ ಚಿಪ್ಪುಗಳು ಉತ್ತಮ ಗುಣಮಟ್ಟವನ್ನು ಹೊಂದಿರುತ್ತವೆ. ಇದರ ತರಬೇತಿಗಾಗಿಯೂ ಅನೇಕ ಸಂಸ್ಥೆಗಳಿವೆ.

ಇದನ್ನೂ ಓದಿ-ನೀವೂ ಅತಿ ಹೆಚ್ಚು ಆನ್ಲೈನ್ ಶಾಪಿಂಗ್ ಮಾಡುತ್ತೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ!

5. ಈ ವ್ಯವಹಾರ ಕಲ್ಪನೆಯಿಂದ, ನೀವು ಪ್ರತಿ ತಿಂಗಳು ಲಕ್ಷಾಂತರ ರೂ.ಗಳಿಕೆ ಮಾಡಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಶೇ. 50 ರಷ್ಟು ಸಹಾಯಧನ ಲಭ್ಯವಿರುವುದು ಒಂದು ಉತ್ತಮ ಸಂಗತಿಯಾಗಿದೆ. ಇದು ವಿಶೇಷ ವ್ಯವಹಾರವಾಗಿದೆ - ಮುತ್ತು ಕೃಷಿ. ಚಿಪ್ಪು, ಮುತ್ತುಗಳ ವ್ಯಾಪಾರದ ಮೇಲೆ ಜನರ ಆಸಕ್ತಿ ಹೆಚ್ಚಾಗುತ್ತಿದೆ.

ಇದನ್ನೂ ಓದಿ-ರೈತರ ಆದಾಯ ಹೆಚ್ಚಿಸಲು ಸರ್ಕಾರ ಕೈಗೊಂಡಿದೆ ಈ ಕ್ರಮ, ಈ ಕೆಲಸಕ್ಕೆ ಸಿಗಲಿದೆ 2.5 ಲಕ್ಷ ರೂ.ಗಳು!

(ಹಕ್ಕುತ್ಯಾಗ-ಈ ಲೇಖನದಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ಕಲ್ಪನೆಯ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದೆ. ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ನೀವು ಸಂಬಂಧಿತ ಕ್ಷೇತ್ರದ ತಜ್ಞರಿಂದ ಸಲಹೆ ಪಡೆಯಬೇಕು. ಇದರೊಂದಿಗೆ, ಲಾಭದ ಅಂಕಿಅಂಶಗಳು ನಿಮ್ಮ ವ್ಯಾಪಾರದ ಮಾರಾಟವನ್ನು ಅವಲಂಬಿಸಿರುತ್ತದೆ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News