ನವದೆಹಲಿ : ನೀವು ಕೂಡ ಉತ್ತಮ ಲಾಭಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಎಲ್ಐಸಿಯ ಸ್ಕೀಮ್ (LIC Scheme) ಉತ್ತಮ ಆಯ್ಕೆಯಾಗಿದೆ. ಈ ಸ್ಲೀಮ್ ನ ಹೆಸರು LIC jeevan shiromani Plan. ಈ ವಿಶೇಷ ಯೋಜನೆಯಲ್ಲಿ, ಒಂದು ರೂಪಾಯಿ ಬದಲಾಗಿ ಭಾರೀ ಲಾಭವನ್ನು ಪಡೆಯಬಹುದು. ಎಲ್ಐಸಿ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ರೀತಿಯ ಪಾಲಿಸಿಗಳನ್ನು ಪ್ರಸ್ತುತಪಡಿಸುತ್ತದೆ. ಇದೇ ಆಧಾರದ ಮೇಲೆ, ಎಲ್ಐಸಿ ಜೀವನ್ ಶಿರೋಮಣಿ ಯೋಜನೆಯನ್ನು (Jeevan Shiromani Plan ) ಪರಿಚಯಿಸಿದೆ. ಇದು ರಕ್ಷಣೆಯೊಂದಿಗೆ ದೊಡ್ಡ ಮೊತ್ತದ ಲಾಭವನ್ನೂ ನೀಡುತ್ತದೆ.
ಒಂದು ಕೋಟಿ ರೂಪಾಯಿಯ ಗ್ಯಾರಂಟಿ :
LIC ಯ ಯೋಜನೆ (Jeevan Shiromani Plan Benefits) ನಾನ್ ಲಿಂಕ್ಡ್ ಪ್ಲಾನ್ ಆಗಿದೆ. ಇದರಲ್ಲಿ, ಕನಿಷ್ಠ 1 ಕೋಟಿಯ ಗ್ಯಾರಂಟಿ ಮೊತ್ತ ಸಿಗುತ್ತದೆ. ಎಲ್‌ಐಸಿ ತನ್ನ ಗ್ರಾಹಕರಿಗೆ ತಮ್ಮ ಜೀವನವನ್ನು ಭದ್ರಪಡಿಸಲು ಹಲವು ಉತ್ತಮ ಪಾಲಿಸಿಗಳನ್ನು ನೀಡುತ್ತಲೇ ಇದೆ.
ಇದನ್ನೂ ಓದಿ : ರೈಲು ಪ್ರಯಾಣದಲ್ಲಿ ಈ ಎರಡು ತಪ್ಪುಗಳಾದರೆ ಕಾದಿದೆ 3 ವರ್ಷ ಜೈಲು, ನಿಮಗೆ ತಿಳಿದಿರಲೇ ಬೇಕು.
ಏನಿದು ಸ್ಕೀಮ್ :
ಎಲ್ಐಸಿಯ ಜೀವನ್ ಶಿರೋಮಣಿ ಯೋಜನೆಯನ್ನು 19 ಡಿಸೆಂಬರ್ 2017 ರಂದು ಆರಂಭಿಸಲಾಗಿದೆ. ಮೊದಲೇ ಹೇಳಿದ ಹಾಗೆ ಇದೊಂದು ನಾನ್ ಲಿಂಕ್ಡ್ ಸ್ಕೀಮ್ ಆಗಿದ್ದು, ಸೀಮಿತ ಪ್ರೀಮಿಯಂ ಪೇಮೆಂಟ್ ಮನಿ ಬ್ಯಾಕ್ ಪ್ಲಾನ್ (Money back Plan) ಆಗಿದೆ. ಇದು ಮಾರುಕಟ್ಟೆ ಸಂಬಂಧಿತ ಲಾಭದ ಯೋಜನೆ. ಈ ಯೋಜನೆಯನ್ನು ವಿಶೇಷವಾಗಿ ಹೈ ನೆಟ್ ವರ್ತ್ ವ್ಯಕ್ತಿಗಳಿಗಾಗಿ ಮಾಡಲಾಗಿದೆ. ಈ ಪ್ಲಾನ್ ಕೆಲವು ಗಂಭೀರ ಕಾಯಿಲೆಗಳಿಗೆ ಕವರ್ ಕೂಡಾ ನೀಡುತ್ತದೆ.
ಹಣಕಾಸಿನ ನೆರವು ಕೂಡಾ ಪಡೆಯಬಹುದು :
ಜೀವನ್ ಶಿರೋಮಣಿ ಯೋಜನೆ ಪಾಲಿಸಿದಾರರ ಕುಟುಂಬಕ್ಕೆ ಪಾಲಿಸಿ ಅವಧಿಯಲ್ಲಿ ಡೆತ್ ಬೆನಿಫಿಟ್ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತದೆ. ಇದರ ಹೊರತಾಗಿ, ಮೆಚ್ಯರಿಟಿ ನಂತರ ಒಂದು ದೊಡ್ಡ ಮೊತ್ತವನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ : Earn Money : ನಿಮ್ಮ ಬಳಿ ಈ 1 ರೂ. ವಿಶೇಷ ನಾಣ್ಯವಿದ್ದರೆ ನೀವು ರಾತ್ರೋರಾತ್ರಿ ಮಿಲಿಯನೇರ್ ಆಗಬಹುದು; ಹೇಗೆ ಗೊತ್ತಾ?
ಸರ್ವೈವಲ್ ಬೆನಿಫಿಟ್ :
ಸರ್ವೈವಲ್ ಬೆನಿಫಿಟ್ ಅಂದರೆ ಪಾಲಿಸಿದಾರರ ಜೀವಿತಾವಧಿಯಲ್ಲಿ ಸಿಗುವ ನಿಶ್ಚಿತ ಮೊತ್ತ .
1.14 ವರ್ಷದ ಪಾಲಿಸಿ -10 ಮತ್ತು 12 ನೇ ವರ್ಷ ವಿಮಾ ಮೊತ್ತದ 30-30%
2. 16 ವರ್ಷಗಳ ಪಾಲಿಸಿ -12 ನೇ ಮತ್ತು 14 ನೇ ವರ್ಷದಲ್ಲಿ ವಿಮಾ ಮೊತ್ತದ 35-35%
3. 18 ವರ್ಷಗಳ ಪಾಲಿಸಿ -14 ನೇ ಮತ್ತು 16 ನೇ ವರ್ಷ ವಿಮಾ ಮೊತ್ತದ 40-40%
4. 20 ವರ್ಷದ ಪಾಲಿಸಿ -16 ನೇ ಮತ್ತು 18 ನೇ ವರ್ಷ ವಿಮಾ ಮೊತ್ತದ 45-45%.
ನಿಮಗೆ ಸಿಗುವ ಸಾಲ ಎಷ್ಟು ?
ಈ ಪಾಲಿಸಿಯ ವಿಶೇಷತೆಯೆಂದರೆ ಪಾಲಿಸಿ ಅವಧಿಯಲ್ಲಿ, ಪಾಲಿಸಿ ಸರೆಂಡರ್ ಮೌಲ್ಯದ ಆಧಾರದ ಮೇಲೆ ಗ್ರಾಹಕರು ಸಾಲವನ್ನು (Loan) ತೆಗೆದುಕೊಳ್ಳಬಹುದು. ಆದರೆ ಈ ಸಾಲವು ಎಲ್ಐಸಿಯ ನಿಯಮಗಳು ಮತ್ತು ಷರತ್ತುಗಳ ಮೇಲೆ ಮಾತ್ರ ಲಭ್ಯವಿರುತ್ತದೆ. ಪಾಲಿಸಿ ಮೇಲಿನ ಸಾಲವು ಕಾಲಕಾಲಕ್ಕೆ ನಿರ್ಧರಿಸುವ ಬಡ್ಡಿದರದಲ್ಲಿ (Interest Rate) ಲಭ್ಯವಿರುತ್ತದೆ.
ಇದನ್ನೂ ಓದಿ : Facebook Loan: ಫೇಸ್ ಬುಕ್ ನಲ್ಲಿ 5 ದಿನದಲ್ಲಿ ಸಿಗಲಿದೆ 50 ಲಕ್ಷ ರೂ. ಸಾಲ..! ಹೇಗೆ ಗೊತ್ತಾ..?
ನಿಯಮಗಳು ಮತ್ತು ಷರತ್ತುಗಳು :
1. ಕನಿಷ್ಠ ವಿಮಾ ಮೊತ್ತ - 1 ಕೋಟಿ ರೂ
3. ಗರಿಷ್ಠ ಮೊತ್ತದ ಭರವಸೆ
3. ಪಾಲಿಸಿ ಅವಧಿ: 14, 16, 18 ಮತ್ತು 20 ವರ್ಷಗಳು
4.ಎಲ್ಲಿಯವರೆಗೆ ಪ್ರಿಮಿಯಂ ಪಾವತಿಸಬೇಕು : 4 ವರ್ಷಗಳು
5. ಎಂಟ್ರಿಗೆ ಕನಿಷ್ಠ ವಯಸ್ಸು: 18 ವರ್ಷಗಳು
6. ಗರಿಷ್ಠ ವಯಸ್ಸು: 14 ವರ್ಷಗಳ ಪಾಲಿಸಿಗೆ 55 ವರ್ಷಗಳು; 16 ವರ್ಷಗಳ ಪಾಲಿಸಿಗೆ 51 ವರ್ಷಗಳು; 18 ವರ್ಷಗಳ ಪಾಲಿಸಿಗೆ 48 ವರ್ಷಗಳು; 20 ವರ್ಷಗಳ ಪಾಲಿಸಿಗೆ 45 ವರ್ಷಗಳು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ