Smartphone ಬಳಕೆದಾರರೇ, ತಕ್ಷಣವೇ‌ ಈ ಕೆಲಸ ಮಾಡಿ

News Rules 2024: ಮುಂದಿನ ವರ್ಷ 2024 ಜನವರಿ 1ರಿಂದ ಸ್ಮಾರ್ಟ್‌ ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಬಹುದು.  

Written by - Yashaswini V | Last Updated : Dec 28, 2023, 04:00 PM IST
  • ಭಾರತ ಸರ್ಕಾರವು ಹೊಸ ದೂರಸಂಪರ್ಕ ಮಸೂದೆ 2023 ಅನ್ನು ಅಂಗೀಕರಿಸಿದೆ.
  • ಈ ಮಸೂದೆ ಶೀಘ್ರವೇ ಕಾನೂನಾಗಲಿದೆ. ಹೊಸ ಸಿಮ್ ಕಾರ್ಡ್ ಪಡೆಯಲು ಗ್ರಾಹಕರು ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು ಎಂಬ ಮಹತ್ವದ ನಿಯಮವನ್ನು ಈ ಹೊಸ ಮಸೂದೆಯಲ್ಲಿ ಮಾಡಲಾಗಿದೆ.
Smartphone ಬಳಕೆದಾರರೇ, ತಕ್ಷಣವೇ‌ ಈ ಕೆಲಸ ಮಾಡಿ  title=

News Rules 2024: ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ.‌ ಈ ನಡುವೆ ಸ್ಮಾರ್ಟ್‌ಫೋನ್ ಬಳಕೆಗೆ ಹೊಸ ವರ್ಷದೊಂದಿಗೆ ಅನೇಕ ಹೊಸ ನಿಯಮಗಳು ಬರುತ್ತಿವೆ. 2024ರ ಜನವರಿ 1ರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ನಿಮ್ಮ ಫೋನ್ ಮೇಲೆ ನೇರ ಪರಿಣಾಮ ಬೀರಬಹುದು. ಆದ್ದರಿಂದ, ಜನವರಿ 1ಕ್ಕೆ ಮೊದಲೇ ಈ 3 ಪ್ರಮುಖ ಕೆಲಸಗಳನ್ನು ಮಾಡಿ ಮುಗಿಸಬಿಟ್ಟರೆ ಒಳ್ಳೆಯದು.

ನಿಷ್ಕ್ರಿಯ UPI ಐಡಿ ಮತ್ತು ಸಂಖ್ಯೆಗಳಿಗೆ ಕುತ್ತು: 
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮಹತ್ವದ ನಿರ್ಧಾರ ಕೈಗೊಂಡಿದೆ. Google Pay, Paytm, PhonePe ಮತ್ತು ಬ್ಯಾಂಕ್‌ಗಳಂತಹ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವವರ ಪೈಕಿ UPI ಐಡಿಗಳು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿರದ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಬೇಕೆಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಸೂಚನೆ ನೀಡಿದೆ. ಇದರರ್ಥ ಕಳೆದ ಒಂದು ವರ್ಷದಲ್ಲಿ ನಿಮ್ಮ UPI ಐಡಿಯೊಂದಿಗೆ ನೀವು ಯಾವುದೇ ವಹಿವಾಟು ಮಾಡದಿದ್ದರೆ, ನಿಮ್ಮ UPI ಐಡಿಯನ್ನು 31ನೇ ಡಿಸೆಂಬರ್ 2023ರ ಬಳಿಕ ಬಂದ್ ಮಾಡಲಾಗುವುದು. ಅರ್ಥಾತ್ 01 ಜನವರಿ 2024ರಿಂದ ಇಂತಹ ಯುಪಿಐ ಐಡಿಗಳು ಕಾರ್ಯನಿರ್ವಹಿಸುವುದಿಲ್ಲ. 

ಇದನ್ನೂ ಓದಿ- ಸಿಲಿಂಡರ್ ಬೆಲೆ 450 ರೂಪಾಯಿಗೆ ಇಳಿಕೆ : ಬಡವರಿಗಾಗಿ ಸರ್ಕಾರದ ದಿಟ್ಟ ಕ್ರಮ

ಸಿಮ್ ಕಾರ್ಡ್‌ಗೂ ಕಂಡೀಷನ್ಸ್: 
ಭಾರತ ಸರ್ಕಾರವು ಹೊಸ ದೂರಸಂಪರ್ಕ ಮಸೂದೆ 2023 ಅನ್ನು ಅಂಗೀಕರಿಸಿದೆ. ಈ ಮಸೂದೆ ಶೀಘ್ರವೇ ಕಾನೂನಾಗಲಿದೆ. ಹೊಸ ಸಿಮ್ ಕಾರ್ಡ್ ಪಡೆಯಲು ಗ್ರಾಹಕರು ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು ಎಂಬ ಮಹತ್ವದ ನಿಯಮವನ್ನು ಈ ಹೊಸ ಮಸೂದೆಯಲ್ಲಿ ಮಾಡಲಾಗಿದೆ.

ಇದನ್ನೂ ಓದಿ- FD Rate Hike: ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿ‌ಐನಿಂದ ಗುಡ್ ನ್ಯೂಸ್

ಈ Gmail ಖಾತೆಗಳನ್ನು ಅಳಿಸಲಾಗುತ್ತದೆ: 
ಗೂಗಲ್ ಸರ್ಚ್ ಇಂಜಿನ್ ಇನ್ನೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದು ಅಥವಾ ಎರಡು ವರ್ಷಗಳಿಂದ ಬಳಸದೆ ಇರುವ ಎಲ್ಲಾ ಜಿಮೈಲ್ ಖಾತೆಗಳನ್ನು ಗೂಗಲ್ ಅಳಿಸುತ್ತಿದೆ. ಅಂದರೆ ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ನಿಮ್ಮ Gmail ಖಾತೆಯಿಂದ ನೀವು ಯಾವುದೇ ಇಮೇಲ್ ಕಳುಹಿಸದಿದ್ದರೆ ಅಥವಾ ಸ್ವೀಕರಿಸದಿದ್ದರೆ ನಿಮ್ಮ Gmail ಖಾತೆಯು ಶೀಘ್ರದಲ್ಲೇ ಮುಚ್ಚಲ್ಪಡುತ್ತದೆ. 

ಹಾಗಾಗಿ ಸಂಭಾವ್ಯ ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಈ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ ಮಾರ್ಗವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News