ಗ್ರಾಹಕರಿಗೆ ಬಿಗ್ ಶಾಕ್!: ಸಾಲದ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ

ಎಸ್‌ಬಿಐ ಬ್ಯಾಂಕ್ ಇತರ ಮೆಚ್ಯೂರಿಟಿಗಳ ಸಾಲಗಳಿಗೆ MCLRನ್ನು ಹೆಚ್ಚಿಸಿದೆ. ಕಡಿಮೆ ಅವಧಿಗೆ ಶೇ.7.35, 6 ತಿಂಗಳುಗಳು ಶೇ.7.65, 2 ವರ್ಷಕ್ಕೆ ಶೇ.7.90 ಮತ್ತು 3 ವರ್ಷಕ್ಕೆ ಶೇ.8ರಷ್ಟು ಏರಿಕೆಯಾಗಿದೆ.

Written by - Puttaraj K Alur | Last Updated : Aug 16, 2022, 01:53 PM IST
  • SBI ಬ್ಯಾಂಕ್‌ ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.0.5ರವರೆಗೆ ಹೆಚ್ಚಿಸಿದೆ
  • ಹೊಸ ಪರಿಷ್ಕೃತ ಬಡ್ಡಿದರಗಳು ಸೋಮವಾರದಿಂದಲೇ ಅನ್ವಯ ಆಗಲಿವೆ
  • ಎಸ್‌ಬಿಐ ತನ್ನ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲದ 20 ಬೇಸಿಸ್ ಪಾಯಿಂಟ್‌ ಹೆಚ್ಚಿಸಿದೆ
ಗ್ರಾಹಕರಿಗೆ ಬಿಗ್ ಶಾಕ್!: ಸಾಲದ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ title=
ಸಾಲದ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.0.5ರವರೆಗೆ ಹೆಚ್ಚಿಸಿದೆ. ಹೊಸ ಪರಿಷ್ಕೃತ ಬಡ್ಡಿದರಗಳು ಸೋಮವಾರದಿಂದಲೇ ಅನ್ವಯ ಆಗಲಿವೆ. ಎಸ್‌ಬಿಐ ತನ್ನ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ ದರವನ್ನು (MCLR) 20 ಬೇಸಿಸ್ ಪಾಯಿಂಟ್‌ (bps) ಹೆಚ್ಚಿಸಿದೆ, ಈ ಕ್ರಮವು ಇಎಂಐಗಳನ್ನು ಮತ್ತಷ್ಟು ದುಬಾರಿಯಾಗಿಸುತ್ತದೆ.

ಎಸ್‌ಬಿಐ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ಗೃಹ ಸಾಲದಂತಹ ದೀರ್ಘಾವಧಿಯ ಸಾಲಗಳನ್ನು ಈ ದರಕ್ಕೆ ಲಿಂಕ್ ಮಾಡಿರುವುದರಿಂದ 1 ವರ್ಷದ ಎಂಸಿಎಲ್‌ಆರ್ ಅನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಈಗ ಇದು ಶೇ.7.70 ರಷ್ಟಿದೆ. ಬ್ಯಾಂಕ್ ಇತರ ಮೆಚ್ಯೂರಿಟಿಗಳ ಸಾಲಗಳಿಗೆ MCLRನ್ನು ಹೆಚ್ಚಿಸಿದೆ. ಕಡಿಮೆ ಅವಧಿಗೆ ಅಂದರೆ 1 ರಿಂದ 3 ತಿಂಗಳ MCLR ಬಡ್ಡಿ ದರ ಶೇ.7.35 ಇದ್ದರೆ, 6 ತಿಂಗಳುಗಳಿಗೆ ಶೇ.7.65 ರಷ್ಟು, 2 ವರ್ಷಗಳಿಗೆ ಶೇ.7.90 ಮತ್ತು 3 ವರ್ಷಗಳು ಶೇ.8ರಷ್ಟು ಬಡ್ಡಿದರ ಇರಲಿದೆ.  

ಇದನ್ನೂ ಓದಿ: NPS Rule Update: NPS ನಿಯಮದಲ್ಲಿ ಮಹತ್ವದ ಬದಲಾವಣೆ, ಈ ಹೊಸ ಬದಲಾವಣೆ ನಿಮಗೂ ತಿಳಿದಿರಲಿ

ಮಾಹಿತಿಯ ಪ್ರಕಾರ ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್ (RLLR)ಅನ್ನು ಶೇ.7.15 ರಿಂದ 7.65ಕ್ಕೆ ಏರಿಕೆ ಮಾಡಿದ್ದರೆ, ಬಾಹ್ಯ ಮಾನದಂಡದ ಸಾಲದ ದರವನ್ನು (EBLR) ಶೇ.7.55 ರಿಂದ ಶೇ.8.05ಕ್ಕೆ ಏರಿಸಲಾಗಿದೆ. ಏಪ್ರಿಲ್‌ನಿಂದ ಎಸ್‌ಬಿಐ ಸಂಚಿತವಾಗಿ MCLRನ್ನು 70 bps ಹೆಚ್ಚಿಸಿದೆ. ಏಪ್ರಿಲ್, ಮೇ ಮತ್ತು ಜುಲೈನಲ್ಲಿ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂಸಿಎಲ್ಆರ್ ಅನ್ನು ತಲಾ 10 ಬಿಪಿಎಸ್ ಹೆಚ್ಚಿಸಿತ್ತು ಮತ್ತು ಜೂನ್‍ನಲ್ಲಿ 20 ಬಿಪಿಎಸ್ ಹೆಚ್ಚಿಸಿದೆ.

ಎಸ್‌ಬಿಐ ಜೊತೆಗೆ ಇತರ ಬ್ಯಾಂಕ್‌ಗಳು ಸಹ ಸಾಲದ ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ತಿಂಗಳ ಆರಂಭದಲ್ಲಿ ಹಣದುಬ್ಬರ ತಗ್ಗಿಸಲು ಬೆಂಚ್‌ಮಾರ್ಕ್ ಪಾಲಿಸಿ ದರಗಳನ್ನು 50 ಬಿಪಿಎಸ್‌ಗಳಷ್ಟು ಹೆಚ್ಚಿಸಿದ ಹಿನ್ನೆಲೆ  ಎಸ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್‌ನಿಂದ ಕೇಂದ್ರ ಬ್ಯಾಂಕ್ ನೀತಿ ಬಡ್ಡಿದರಗಳನ್ನು 140 ಬಿಪಿಎಸ್‌ಗಳಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ: ಆರ್‌ಬಿಐ ಖಡಕ್ ವಾರ್ನಿಂಗ್!

ಇಲ್ಲಿಯವರೆಗೆ ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ನಂತಹ ಪ್ರಮುಖ ಸಾಲದಾತರು ತಮ್ಮ ಎಂಸಿಎಲ್ಆರ್ ದರಗಳನ್ನು 5-10 ಬಿಪಿಎಸ್ ವ್ಯಾಪ್ತಿಯಲ್ಲಿ ಹೆಚ್ಚಿಸಿವೆ. ಇವು ತಮ್ಮ RLLR ಅನ್ನು ಸಹ ಹೆಚ್ಚಿಸಿವೆ. MCLRನ್ನು ಪ್ರತಿ ತಿಂಗಳು ಪರಿಷ್ಕರಿಸಿದಾಗ RBIನಿಂದ ರೆಪೊ ದರದಲ್ಲಿನ ಪರಿಷ್ಕರಣೆಯು ಸ್ವಯಂಚಾಲಿತವಾಗಿ ಬ್ಯಾಂಕ್‌ಗಳ RLLRನ ಮೇಲೆ ಪರಿಣಾಮ ಬೀರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News