ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆಗೆ ಫುಲ್ ಡಿಮ್ಯಾಂಡ್: ಗಗನಮುಖಿಯಾದ ಹೂವು-ಹಣ್ಣಿನ ದರ

Shivratri 2024: ನಾಳೆ (ಮಾರ್ಚ್ 08) ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಭರದಿಂದ ಸಾಗಿದ್ದು ಹೂವು-ಹಣ್ಣುಗಳ ದರಗಳು ಗಗನಮುಖಿಯಾಗಿರುವುದು ಜನರಲ್ಲಿ ಬೇಸರ ಉಂಟು ಮಾಡಿದೆ. 

Written by - Yashaswini V | Last Updated : Mar 7, 2024, 09:14 AM IST
  • ನಾಳೆ ಶಿವರಾತ್ರಿ ಹಬ್ಬದ ಹಿನ್ನೆಲೆ ಖರೀದಿ ಭರಾಟೆ ಜೋರು
  • ಶಿವನ ಪೂಜೆಗೆ ಬೇಕಾದ ಬೇಲದ ಹಣ್ಣು, ಬಿಲ್ವಪತ್ರೆ, ವಿಭೂತಿ, ಹೂವು, ಹಣ್ಣುಗಳ ಖರೀದಿ
  • ಕೆ.ಆರ್‌. ಮಾರುಕಟ್ಟೆ, ಗಾಂಧಿಬಜಾರ್‌, ಮಲ್ಲೇಶ್ವರಂನಲ್ಲಿ ಭರ್ಜರಿ ವ್ಯಾಪಾರ
ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆಗೆ ಫುಲ್ ಡಿಮ್ಯಾಂಡ್: ಗಗನಮುಖಿಯಾದ ಹೂವು-ಹಣ್ಣಿನ ದರ  title=

Shivaratri Festival Price Hike: ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನಾಳೆ(ಮಾರ್ಚ್ 08) ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಹಬ್ಬದ ತಯಾರಿಯಲ್ಲಿರುವ ಜನರು ಇಂದೇ ಪೂಜೆಗೆ ಬೇಕಾದ ಹೂವು-ಹಣ್ಣುಗಳನ್ನು ಖರೀದಿಸಲು ಮುಂದಾಗಿದ್ದು, ಬೆಲೆ ಏರಿಕೆ ಬಿಸಿಗೆ ತತ್ತರಿಸಿದ್ದಾರೆ. 

ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆಗೆ ಫುಲ್ ಡಿಮ್ಯಾಂಡ್! 
ಧಾರ್ಮಿಕ ನಂಬಿಕೆಗಳ ಪ್ರಕಾರ, ಭಕ್ತರು ಭಕ್ತಿಯಿಂದ ಒಂದು ಬಿಲ್ವ ಪತ್ರೆಯನ್ನು ಅರ್ಪಿಸಿದರೂ ಭಗವಾನ್ ಭೋಲೆನಾಥ ಭಕ್ತರ ಕೂಗಿಗೆ ಕಿವಿಗೊಡುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮಹಾಶಿವರಾತ್ರಿ ಹಬ್ಬದಲ್ಲಿ ಬಿಲ್ವಪತ್ರೆಗೆ ವಿಶೇಷ ಪ್ರಾಮುಖ್ಯತೆ ಇದೆ. ನಾಳೆ ಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಮಾರುಕಟ್ಟೆಗಳಲ್ಲಿ ಬಿಲ್ವಪತ್ರೆಗೆ ಸಖತ್ ಡಿಮ್ಯಾಂಡ್ ಇದೆ. 

ಇದನ್ನೂ ಓದಿ- Mahashivaratri: ಮಹಾಶಿವರಾತ್ರಿ ಯಾವಾಗ? ಮಾರ್ಚ್ 8 ಅಥವಾ 9…! ಪೂಜಾ ಸಮಯ ಸೇರಿ ಸ್ಪಷ್ಟ ಮಾಹಿತಿ ಇಲ್ಲಿದೆ

ಬಿಲ್ವಪತ್ರೆ ಮಾತ್ರವಲ್ಲದೆ, ಶಿವರಾತ್ರಿ ಹಬ್ಬದಲ್ಲಿ, ಶಿವನ ಪೂಜೆಗೆ ಬೇಕಾದ ಬೇಲದ ಹಣ್ಣು, ವಿಭೂತಿ, ಹೂವು, ಹಣ್ಣುಗಳ ಖರೀದಿ ಯ ಭರಾಟೆಯೂ ಜೋರಾಗಿದೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆ, ಗಾಂಧಿಬಜಾರ್‌, ಮಲ್ಲೇಶ್ವರಂನಲ್ಲಿನ ಮಾರುಕಟ್ಟೆಗಳಲ್ಲಿ ಇಂದು ಮುಂಜಾನೆಯಿಂದಲೇ ಭರ್ಜರಿ ವ್ಯಾಪಾರ ನಡೆಯುತ್ತಿದೆ. 

ಆದಾಗ್ಯೂ, ಶಿವರಾತ್ರಿ ಹಬ್ಬದಲ್ಲಿಯೂ ಸಹ ಹೂ-ಹಣ್ಣುಗಳ ಬೆಲೆ ಗಗನಕ್ಕೇರಿದೆ.  ವಾಸ್ತವವಾಗಿ, ಹಬ್ಬದಲ್ಲಿ ಹೆಚ್ಚಾಗಿ ಜನರು ಭಾರೀ ಪ್ರಮಾಣದಲ್ಲಿ ಹೂವು ಖರೀದಿಸುತ್ತಾರೆ. ಅದರಲ್ಲೂ ಶಿವನಿಗೆ ಪ್ರಿಯವಾದ ಹೂ ಹಣ್ಣುಗಳನ್ನು ಶಿವನ ಪೂಜೆಯಲ್ಲಿ ಇಡುವ ವಾಡಿಕೆ ಇದೆ. ಒಂದೆಡೆ ಬರಗಾಲ, ಮತ್ತೊಂದಡೆ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ ಎನ್ನುತ್ತಾರೆ ವ್ಯಾಪಾರಸ್ಥರು. 

ಇದನ್ನೂ ಓದಿ- Mahashivratri 2024: ಮಹಾಶಿವರಾತ್ರಿಯಂದು ಈ ಮಂತ್ರ ಪಠಿಸುವುದರಿಂದ ಶುಭ ಫಲಿತಾಂಶ ಪಡೆಯುತ್ತೀರಿ!

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ದರ ಎಷ್ಟಿದೆ ಎಂದು ನೋಡುವುದಾದರೆ... 
ಇಂದಿನ ಹೂವಿನ ದರ: 

ಮಲ್ಲಿಗೆ/ಕೆ.ಜಿ - 700 - 800ರೂ.
ಸೇವಂತಿಗೆ/ಕೆ.ಜಿ - 250 ರಿಂದ 300ರೂ.
ಗುಲಾಬಿ/ಕೆ.ಜಿ - 200ರೂ.
ಚೆಂಡು ಹೂ/ಕೆ.ಜಿ - 60ರೂ.
ಕಾಕಡ ಹೂ/ಕೆ.ಜಿ - 600ರೂ.
ಕನಕಾಂಬರ/ಕೆ.ಜಿ - 700ರೂ. 

ಹಣ್ಣುಗಳ ಬೆಲೆ..?               
ಅನಾನಸ್ (ಜೋಡಿ)/ಕೆ.ಜಿ -100ರೂ.
ಸೇಬು/ಕೆ.ಜಿ - 250ರೂ.
ದ್ರಾಕ್ಷಿ/ಕೆ.ಜಿ- 100ರೂ.
ಸೀತಾಫಲ/ಕೆ.ಜಿ -150ರೂ. 
ಸಪೋಟ/ಕೆ.ಜಿ- 160ರೂ.
ಮೂಸಂಬಿ/ಕೆ.ಜಿ- 90ರೂ.
ಕಿತ್ತಲೆ ಹಣ್ಣು/ಕೆ.ಜಿ- 200ರೂ. 
ಕಿವಿ ಹಣ್ಣು (3ಕ್ಕೆ)- 160ರೂ.
ಡ್ರ್ಯಾಗನ್ ಪ್ರೂಟ್ - 1 ಹಣ್ಣು- 80ರೂ.
ದಾಳಿಂಬೆ/ಕೆ.ಜಿ- 200ರೂ.
ಬಟರ್ ಫ್ರೂಟ್/ಕೆ.ಜಿ -200ರೂ,.
ಮರಸೇಬು/ಕೆ.ಜಿ -120ರೂ.
ಏಲಕ್ಕಿಬಾಳೆಹಣ್ಣು/ಕೆ.ಜಿ - 130ರೂ. 
ಪಚ್ಚಬಾಳೆಹಣ್ಣು/ಕೆ.ಜಿ- 40 ರೂ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News