SBI Cashback Credit Card: ಎಸ್ಬಿಐನಿಂದ ಸಾವಿರಾರು ರೂ.ಗಳ ಕ್ಯಾಶ್ ಬ್ಯಾಕ್ ಕೊಡುವ ಕ್ರೆಡಿಟ್ ಕಾರ್ಡ್ ಬಿಡುಗಡೆ

SBI Credit Card:  ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ವೊಂದನ್ನು ಬಿಡುಗಡೆ ಮಾಡಿದ್ದು, ಕಾರ್ಡ್ ನಲ್ಲಿ ಬ್ಯಾಂಕ್ ನೀಡುತ್ತಿರುವ ಕೊಡುಗೆಗಳನ್ನು ಕೇಳಿದರೆ ನೀವೂ ಕೂಡ ಸಂತಸಪಡುವಿರಿ. ಎಸ್ಬಿಐ ಕಾರ್ಡ್ಸ್  ಕಂಪನಿಯ ಈ ಕಾರ್ಡ್ ಬಿಡುಗಡೆಯ ಬಳಿಕ ICICI Credit Card, HDFC Credit Card ಹಾಗೂ Axis Credit Card ಗಳಿಗೆ ಭಾರಿ ಪೈಪೋಟಿ ಎದುರಾಗಲಿದೆ ಎಂಬ ಅಭಿಮತ ವ್ಯಕ್ತವಾಗಿದೆ.  

Written by - Nitin Tabib | Last Updated : Sep 3, 2022, 11:51 AM IST
  • ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • SBI ಕಾರ್ಡ್ ಹೊಸ 'ಕ್ಯಾಶ್‌ಬ್ಯಾಕ್ SBI ಕಾರ್ಡ್' ಅನ್ನು ಬಿಡುಗಡೆ ಮಾಡಿದೆ.
  • ಈ ಕಾರ್ಡ್ ನಲ್ಲಿ ಪ್ರಸ್ತುತ ಬ್ಯಾಂಕ್ 5% ಕ್ಯಾಶ್‌ಬ್ಯಾಕ್ ನೀಡುತ್ತದೆ.
SBI Cashback Credit Card: ಎಸ್ಬಿಐನಿಂದ ಸಾವಿರಾರು ರೂ.ಗಳ ಕ್ಯಾಶ್ ಬ್ಯಾಕ್ ಕೊಡುವ ಕ್ರೆಡಿಟ್ ಕಾರ್ಡ್ ಬಿಡುಗಡೆ title=
SBI Cashback Credit Card

Cashback Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. SBI ಕಾರ್ಡ್ ಹೊಸ 'ಕ್ಯಾಶ್‌ಬ್ಯಾಕ್ SBI ಕಾರ್ಡ್' ಅನ್ನು ಬಿಡುಗಡೆ ಮಾಡಿದೆ. ಈ ಕಾರ್ಡ್ ನಲ್ಲಿ ಪ್ರಸ್ತುತ ಬ್ಯಾಂಕ್ 5% ಕ್ಯಾಶ್‌ಬ್ಯಾಕ್ ನೀಡುತ್ತದೆ. ವಿಶೇಷವೆಂದರೆ ಕಾರ್ಡುದಾರರು ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದೆ ಎಲ್ಲಾ ಆನ್‌ಲೈನ್ ಖರ್ಚುಗಳ ಮೇಲೆ 5% ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಮಾರುಕಟ್ಟೆಯಲ್ಲಿ ಇನ್ನೂ ಶೇ.5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಕಾರ್ಡ್‌ಗಳು ಇವೆ, ಆದರೆ ಅವುಗಳ ಮೇಲೆ ಕೆಲವು ನಿರ್ಬಂಧಗಳಿವೆ. ಉದಾಹರಣೆಗೆ, ನೀವು ನಿರ್ದಿಷ್ಟ ವ್ಯಾಪಾರ ವಹಿವಾಟು ನಡೆಸಿದಾಗ ಮಾತ್ರ 5% ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. SBI ಕಾರ್ಡ್‌ನಿಂದ ಕ್ಯಾಶ್‌ಬ್ಯಾಕ್ ಆನ್‌ಲೈನ್ ಮತ್ತು ಆಫ್‌ಲೈನ್ ಖರೀದಿಗಳಲ್ಲಿ ಲಭ್ಯವಿದೆ. ಈ ಕಾರ್ಡ್‌ನಲ್ಲಿ ಹೆಚ್ಚಿನ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ, ನೀವು ಒಂದು ವರ್ಷದಲ್ಲಿ 6 ಸಾವಿರ ರೂಪಾಯಿಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?
ಶ್ರೇಣಿ-II ಮತ್ತು ಶ್ರೇಣಿ-III ನಗರಗಳು ಸೇರಿದಂತೆ ದೇಶಾದ್ಯಂತದ ಗ್ರಾಹಕರು ಡಿಜಿಟಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ 'ಎಸ್‌ಬಿಐ ಕಾರ್ಡ್ ಸ್ಪ್ರಿಂಟ್' ಮೂಲಕ ಮನೆಯಲ್ಲೇ ಕುಳಿತು ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಎಸ್‌ಬಿಐ ಕಾರ್ಡ್‌ಸ್ ತಿಳಿಸಿದೆ.

ಇದನ್ನೂ ಓದಿ-EPFO Update: ಶೀಘ್ರದಲ್ಲಿಯೇ ರೂ.81,000 ನಿಮ್ಮ ಪಿಎಫ್ ಖಾತೆ ಸೇರಲಿವೆ! ದಿನಾಂಕ ಮತ್ತು ಬ್ಯಾಲೆನ್ಸ್ ನೋಟ್ ಮಾಡ್ಕೊಳ್ಳಿ

ಕಾರ್ಡ್ ಶುಲ್ಕ ಎಷ್ಟು?
SBI ವಿಶೇಷ ಕೊಡುಗೆಯ ಅಡಿಯಲ್ಲಿ ಮಾರ್ಚ್ 2023 ರವರೆಗೆ ಕಾರ್ಡ್ ಶುಲ್ಕವನ್ನು ಉಚಿತವಾಗಿ ಇರಿಸಿದೆ. ಇದರ ನಂತರ, ಒಂದು ವರ್ಷದವರೆಗೆ ಕಾರ್ಡ್‌ನ ನವೀಕರಣ ಶುಲ್ಕ 999 ರೂ. ಇರಲಿದೆ. ಆದರೆ, ಒಂದು ವರ್ಷದಲ್ಲಿ ನೀವು ಈ ಕಾರ್ಡ್‌ನೊಂದಿಗೆ 2 ಲಕ್ಷ ರೂಪಾಯಿ ಖರ್ಚು ಮಾಡಿದರೆ, ನಂತರ ನೀವು ಈ ಕಾರ್ಡ್‌ ಗಾಗಿ ನವೀಕರಣ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ-Modi Government Scheme: ದೇಶದ ರೈತರಿಗೊಂದು ಸಂತಸದ ಸುದ್ದಿ, ಕೇಂದ್ರ ಸರ್ಕಾರದಿಂದ ರೈತರಿಗೆ 3 ಲಕ್ಷ ಧನಸಹಾಯ

ಕ್ಯಾಶ್ಬ್ಯಾಕ್ ಎಷ್ಟು ಸಿಗುತ್ತದೆ?
ಬ್ಯಾಂಕ್ ಪ್ರಕಾರ ಮೊದಲ ವರ್ಷದಲ್ಲಿ ಮಾರ್ಚ್ 2023ರವರೆಗೆ ವಿಶೇಷ ಕೊಡುಗೆಯ ರೂಪದಲ್ಲಿ ಇದನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು. ನೀವು 'ಕ್ಯಾಶ್‌ಬ್ಯಾಕ್ SBI ಕಾರ್ಡ್' ಮೂಲಕ ಆನ್‌ಲೈನ್‌ನಲ್ಲಿ ರೂ 100 ಖರ್ಚು ಮಾಡಿದರೆ, ನೀವು ಅನಿಯಮಿತ ಶೇ.1ರಷ್ಟು  ಕ್ಯಾಶ್‌ಬ್ಯಾಕ್ ಪಡೆಯುವಿರಿ ಎಂದು ಹೇಳಲಾಗಿದೆ. ಈ ರೀತಿಯಾಗಿ, ನೀವು ತಿಂಗಳಿಗೆ 10,000 ರೂ.ವರೆಗಿನ ಆನ್‌ಲೈನ್ ಖರೀದಿಗಳ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಅಂದರೆ, ಒಂದು ತಿಂಗಳಲ್ಲಿ ಈ ಕಾರ್ಡ್‌ನೊಂದಿಗೆ 10 ಸಾವಿರ ರೂಪಾಯಿ ವಹಿವಾಟು ನಡೆಸಿದರೆ, ಒಂದು ವರ್ಷದಲ್ಲಿ ನೀವು 6000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕಾರ್ಡ್‌ನಲ್ಲಿ ನಿಮಗೆ ಸ್ವಯಂ-ಕ್ರೆಡಿಟ್ ಸೌಲಭ್ಯವನ್ನು ನೀಡಲಾಗಿದೆ. ಇದರ ಅಡಿಯಲ್ಲಿ, ಸ್ಟೇಟ್ಮೆಂಟ್ ತಯಾರಾದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ನಿಮ್ಮ SBI ಕಾರ್ಡ್ ಖಾತೆಯಲ್ಲಿ ನೀವು ಕ್ಯಾಶ್‌ಬ್ಯಾಕ್ ಪಡೆಯುವಿರಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News