ಬೆಟ್ಟದಷ್ಟು ಸಾಲವಿರಲಿ, ಈ ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ಹಣದ ಸುರಿಮಳೆ!

Grace of Mercury: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು. 

Written by - Puttaraj K Alur | Last Updated : Jun 1, 2024, 05:54 PM IST
  • ಸಾಲದಿಂದ ಮುಕ್ತಿ ಹೊಂದಲು ಈ ಸುಲಭ ಪರಿಹಾರವನ್ನು ಮಾಡಿ
  • ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂಗಿನಿಂದ ಮಾಡಿ ಈ ಪರಿಹಾರ
  • ಬುಧನ ಅನುಗ್ರಹದಿಂದ ನಿಮ್ಮ ಮೇಲೆ ಹಣದ ಸುರಿಮಳೆಯೇ ಆಗಲಿದೆ
ಬೆಟ್ಟದಷ್ಟು ಸಾಲವಿರಲಿ, ಈ ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ಹಣದ ಸುರಿಮಳೆ! title=
ಸಾಲಕ್ಕೆ ಈ ಪರಿಹಾರ ಮಾಡಿ

Astro tips & tricks: ಬೆಟ್ಟದಷ್ಟು ಸಾಲವಿರಲಿ, ಈ ಒಂದು ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ನಿಮ್ಮ ಮೇಲೆ ಹಣದ ಸುರಿಮಳೆಯೇ ಆಗಲಿದೆ. ಹೌದು, ನೀವು ಲಕ್ಷ, ಕೋಟಿ ಸಾಲ ಮಾಡಿದ್ದರೂ ಯಾವುದೇ ರೀತಿಯ ಚಿಂತೆಯಿಲ್ಲ. ಇಂದಿನಿಂದಲೇ ಈ ಒಂದು ಕೆಲಸ ಮಾಡಿದರೆ ಬುಧನ ಕೃಪೆಯಿಂದ ನಿಮ್ಮ ಸಾಲ ತೀರಿಸಲು ಶಕ್ತಿ ಪ್ರಾಪ್ತಿಯಾಗುತ್ತದೆ. ಅನೇಕರು ಜೀವನದಲ್ಲಿ ತಿಳಿದು, ತಿಳಿಯದೆಯೋ ತೀರಿಸಲಾಗದಷ್ಟು ಸಾಲ ಮಾಡಿ ನರಳುತ್ತಿರುತ್ತಾರೆ. ಇದಕ್ಕೆ ಸೂಕ್ತ ಪರಿಹಾರ ದೊರೆಯದೆ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈ ವಿಶೇಷ ತಂತ್ರ ಅಥವಾ ಪರಿಹಾರವನ್ನು ಮಾಡುವ ಮೂಲಕ ನೀವು ಈ ಸಾಲದಿಂದ ಮುಕ್ತಿ ಹೊಂದಬಹುದು. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು. ಹಣದ ಸಮಸ್ಯೆಯಿಂದ ನೀವು ಮುಕ್ತಿ ಹೊಂದಬಹುದು.

ಇದನ್ನೂ ಓದಿ: ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!

ನೀವು ಸಂಪತ್ತಿಗಾಗಿ ಧರ್ಮ ಮಾರ್ಗದಲ್ಲಿ ಮಾತ್ರ ಶ್ರಮಿಸಬೇಕು. ಈ ಸಲಹೆ ಪಾಲಿಸಿದರೆ ನೀವು ಸಾಲದ ಸುಳಿ ಮತ್ತು ಹಣದ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು. ಸಾಲದ ಸುಳಿಯಿಂದ ಹೊರಬರಲು ಬುಧ ಗ್ರಹದ ಅನುಗ್ರಹ ಇರಲೇಬೇಕು. ಬುಧನಿಗೆ ಇಷ್ಟವಾದ ದಿಕ್ಕು ಎಂದರೆ ಅದು ಉತ್ತರ ದಿಕ್ಕು. ನೀವು ಮೈತುಂಬಾ ಸಾಲ ಮಾಡಿಕೊಂಡಿದ್ದರೆ ಆ ಸಾಲ ತೀರಿಸಲು, ಆರ್ಥಿಕ ಪರಿಸ್ಥಿತಿ, ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿಯಾಗಲು ಮನೆಯಿಂದ ಹೊರಗಡೆ ಹೋಗಬೇಕಾದರೆ ಸ್ವಲ್ಪ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಹೋಗಬೇಕು.

ಉತ್ತರ ದಿಕ್ಕಿಗೆ ಹಿಂಗನ್ನು ಏಕೆ ಎಸೆಯಬೇಕೆಂದರೆ, ಉತ್ತರ ದಿಕ್ಕು ನವಗ್ರಹಗಳಲ್ಲಿ ಬುಧನಿಗೆ ಪ್ರಿಯವಾದ ದಿಕ್ಕು. ಅದಕ್ಕೆ ಇಷ್ಟವಾದ ವಸ್ತು ಎಂದರೆ ಹಿಂಗು. ಹೀಗಾಗಿ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಬುಧನ ಸ್ಮರಣೆ ಮಾಡಬೇಕು. ಮನೆಯಿಂದ ಪ್ರತಿನಿತ್ಯ ಹೊರ ಹೋಗಬೇಕಾದರೆ ಈ ಒಂದು ಪರಿಹಾರ ಮಾಡಬೇಕು. ಇದರಿಂದ ಹಣಕಾಸಿನ ಸಮಸ್ಯೆಗಳು ಬೇಗ ಕಳೆಯುತ್ತದೆ, ಸಾಲಗಳನ್ನು ತೀರಿಸಲು ನಿಮಗೆ ದಾರಿ ಕಾಣಿಸುತ್ತದೆ.
ಒಂದು ಬಿಳಿ ವಸ್ತ್ರದಲ್ಲಿ ಗಟ್ಟಿ ಹಿಂಗನ್ನು ಕಟ್ಟಬೇಕು. ಈ ಕೆಲಸವನ್ನು ಬುಧವಾರ ಮಾಡಿದರೆ ತುಂಬಾ ಒಳ್ಳೆಯದು. ಬಿಳಿವಸ್ತ್ರದಲ್ಲಿ ಕಟ್ಟಿದ ಈ ಹಿಂಗನ್ನು 11 ವಾರ ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬೇಕು. 11 ವಾರ ಆದ ಮೇಲೆ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಹೀಗೆ ಮಾಡಿದರೆ ನಿಮಗೆ ಬುಧನ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಿಮ್ಮ ಸಾಲ ತೀರಿಸಲು ಹಣದ ಬಲ ಬರುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನೇಕ ರೀತಿಯ ಏಳಿಗೆಯಾಗಿ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಬಹುದು.

ಇದನ್ನೂ ಓದಿ: Ketu Nakshatra Transit: ಕೇತು ಪ್ರಭಾವದಿಂದ ಕೆಲ ರಾಶಿಯವರಿಗೆ ವೃತ್ತಿಯಲ್ಲಿ ಸಂಕಷ್ಟ, ಧನ ಹಾನಿ

ಮಂಗಳವಾರ ಎರಡು ತೆಂಗಿನಕಾಯಿ ಸ್ವಲ್ಪ ಗಟ್ಟಿ ಹಿಂಗು ತೆಗೆದುಕೊಂಡು ನದಿ ತೀರಕ್ಕೆ ಹೋಗಬೇಕು. ಅಲ್ಲಿ ಬುಧನ ಸ್ಮರಣೆ ಮಾಡುತ್ತಾ ನವಗ್ರಹಗಳ ಸ್ಮರಣೆ ಮಾಡಬೇಕು. ನಿಮ್ಮ ಎಡಗೈಯಲ್ಲಿ ಮೊದಲು ಒಂದು ತೆಂಗಿನಕಾಯಿ ಹಿಡಿದುಕೊಂಡು ಅದರ ಮೇಲೆ ಸ್ವಲ್ಪ ಗಟ್ಟಿ ಹಿಂಗು ಇರಿಸಬೇಕು. 19 ಬಾರಿ ಎಡ ಭಾಗದಿಂದ ಬಲಭಾಗಕ್ಕೆ ಸುತ್ತಬೇಕು. ನದಿಗೆ 19 ಸಲ ಇಳಿ ತೆಗೆದು ಅಥವಾ ಎಡದಿಂದ ಬಲಕ್ಕೆ ಸುತ್ತಿ ಆ ತೆಂಗಿನಕಾಯಿ ಮತ್ತು ಹಿಂಗನ್ನು ನದಿ ತೀರದ ದೂರದಲ್ಲಿ ಎಸೆಯಬೇಕು, ಆದರೆ ನೀರಿಗೆ ಮಾತ್ರ ಎಸೆಯಬಾರದು. ನಂತರ ಇನ್ನೊಂದು ತೆಂಗಿನಕಾಯಿಯನ್ನು ಅಲ್ಲಿಯೇ ಒಡೆದು ನದಿಗೆ ಎಸೆಯಬೇಕು. ನಂತರ ಅದೇ ನದಿಯಲ್ಲಿ ಸ್ನಾನ ಮಾಡಿ ಬರಬೇಕು. ಈ ವಿಧಾನ ಪಾಲಿಸುವಾಗ ನಿಮ್ಮ ಸಾಲಗಳ ಮೊತ್ತ, ಯಾರ ಬಳಿ ಸಾಲ ಮಾಡುತ್ತಿರೋ ಅವರ ಹೆಸರುಗಳು ಮತ್ತು ನಿಮ್ಮ ಇಷ್ಟದೇವರ ಹೆಸರು, ನವಗ್ರಹಗಳ ಹೆಸರಗಳನ್ನು ಜಪಿಸಬೇಕು. 

ಈ ಒಂದು ಶಕ್ತಿಯುತ ಪರಿಹಾರವನ್ನು ಯಾವುದಾದರೂ ಒಂದು ಮಂಗಳವಾರ ಮಾಡಬೇಕು. ಇದು ಫಲ ಕೊಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮನುಷ್ಯ ಮಾಡಿದ ಕರ್ಮದ ಫಲಗಳು, ಅವನಿಗೆ ಇರುವ ಜನ್ಮದೋಷ, ಜಾತಕ ದೋಷ, ಗ್ರಹಗಳ ಚಲನವಲನ ಕೂಡ ಅವಲಂಭಿಸಿರುತ್ತದೆ. ಆದ್ದರಿಂದ ಈ ಪರಿಹಾರವನ್ನು ತಾಳ್ಮೆಯಿಂದ ಮಾಡಿ ಸಾಲದಿಂದ ಮುಕ್ತರಾಗಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News