SBI Alert: ತನ್ನ FD ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI! ಹೇಳಿದ್ದೇನು?

SBI Alert - ಕೊರೊನಾ (Corona Pandemic) ಕಾಲದಲ್ಲಿ  ಡಿಜಿಟಲ್ ಬ್ಯಾಂಕಿಂಗ್ (Digital Banking ) ತುಂಬಾ ವೇಗವಾಗಿ ಬೆಳೆಯುತ್ತಿದೆ. ಇದೆ ಕಾರಣದಿಂದ RBI ಸೇರಿದಂತೆ SBI ಕೂಡ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸಿದೆ. ಸೈಬರ್ ವಂಚನೆಯಿಂದ (Cyber Fraud) ಪಾರಾಗಲು ಎಚ್ಚರಿಕೆಯ ಸಂದೇಶ ರವಾನಿಸುವುದರ ಜೊತೆಗೆ ಕೆಲ ಸಲಹೆಗಳನ್ನು ಕೂಡ ನೀಡಿದೆ.

Written by - Nitin Tabib | Last Updated : Jun 5, 2021, 04:58 PM IST
  • ತನ್ನ FD ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ SBI
  • ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ಮಾಹಿತಿ ನೀಡಿದ SBI.
  • FD ಖಾತೆ ತೆರೆಯುವ ಮೂಲಕ ಹೇಗೆ ವಂಚಿಸಲಾಗುತ್ತಿದೆ ಎಂಬ ವಿವರ ನೀಡಿದ ಬ್ಯಾಂಕ್.
SBI Alert: ತನ್ನ FD ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI! ಹೇಳಿದ್ದೇನು? title=
SBI Alert (File Photo)

ನವದೆಹಲಿ:  SBI Alert - ಒಂದು ವೇಳೆ ನಿಮಗೂ ಕೂಡ ಫಿಕ್ಸೆಡ್ ಡಿಪಾಸಿಟ್ (Fixed Deposit) ಅಥವಾ FDಗೆ ಸಂಬಂಧಿಸಿದಂತೆ ಯಾವುದೇ ಕರೆ ಬಂದಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಅದರಲ್ಲೂ ವಿಶೇಷವಾಗಿ SBI ಗ್ರಾಹಕರು. ಸ್ವತಃ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ಸಾಮಾನ್ಯ ನಾಗರಿಕರಿಗೆ FD ಹೂಡಿಕೆಗೆ ಸಂಬಂಧಿಸಿದ ಆನ್ಲೈನ್ ಫ್ರಾಡ್ ನಿಂದ ಬಚಾವಾಗಲು ಎಚ್ಚರಿಕೆ ನೀಡಿದೆ. ಆನ್ಲೈನ್ ವಂಚನೆಗೆ (Online Fraud) ಸಂಬಂಧಿಸಿದಂತೆ ಬ್ಯಾಂಕ್ ಗೆ ಹಲವು ಗ್ರಾಹಕರು ದೂರು ನೀಡಿದ್ದಾರೆ. ಸೈಬರ್ ಕಳ್ಳರನ್ನು ತಡೆಯಲು ಬ್ಯಾಂಕ್ ಗ್ರಾಹಕರಿಗೆ ಪಾಸ್ವರ್ಡ್/OTP/CVV/ಕಾರ್ಡ್ ನಂಬರ್ ಗಳಂತಹ ಮಾಹಿತಿಯ ಜೊತೆಗೆ  ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಮಾಡಿದೆ. ಬ್ಯಾಂಕ್ ಎಂದಿಗೂ ಕೂಡ ಫೋನ್, SMS ಅಥವಾ ಇ-ಮೇಲ್ ಮೂಲಕ ಇಂತಹ ಡಿಟೇಲ್ ಗಳನ್ನು ಹಂಚಿಕೊಳ್ಳಲು ಗ್ರಾಹಕರಿಗೆ ಕೇಳುವುದಿಲ್ಲ ಎಂದು ಹೇಳಿದೆ.

ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ (SBI Twitter Account) ಮೂಲಕ ಮಾಹಿತಿ ನೀಡಿರುವ ಬ್ಯಾಂಕ್ (State Bank Of India) ಸೈಬರ್ ಅಪರಾಧಿಗಳು ಆನ್ಲೈನ್ ಮೂಲಕ FD ಮಾಡಿಸಲಾಗುತ್ತಿದೆ ಎಂಬ ಮಾಹಿತಿ ಇದ್ದು, ಗ್ರಾಹಕರಿಗೆ ವಂಚನೆ ಎಸಗಲಾಗುತ್ತಿದೆ ಎಂದಿದೆ.

ಈ ರೀತಿ ವಂಚನೆ ಎಸಗಲಾಗುತ್ತಿದೆ
ವಂಚಕರ ವಂಚನೆಯ ಪದ್ಧತಿ  ಕುರಿತು ಮಾಹಿತಿ ನೀಡಿರುವ ಬ್ಯಾಂಕ್, ನೆಟ್ ಬ್ಯಾಂಕಿಂಗ್ (SBI Net Banking) ಡಿಟೇಲ್ ಮೂಲಕ ಅಮಾಯಕ ಗ್ರಾಹಕರ ಹೆಸರಿನಲ್ಲಿ FD ತಯಾರಿಸಿ, ಅದಕ್ಕೆ ಸ್ವಲ್ಪ ಹಣವನ್ನು ವರ್ಗಾಯಿಸುತ್ತಿದ್ದಾರೆ. ಇಲ್ಲಿ ವಂಚಕ ತನ್ನನ್ನು ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಗ್ರಾಹಕರಿಂದ OTP ಪಡೆದುಕೊಳ್ಳುತ್ತಾರೆ. ಒಂದೊಮ್ಮೆ ಗ್ರಾಹಕರಿಂದ OTP ಪಡೆದುಕೊಳ್ಳುವ ವಂಚಕರು ಬಳಿಕ ಆ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುತ್ತಾರೆ ಎಂದು ಹೇಳಿದೆ.

ಇದನ್ನೂ ಓದಿ- Govt of India final notice to Twitter : ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಫೈನಲ್ ನೋಟಿಸ್..!

ಈ ಐದು ತಪ್ಪುಗಳನ್ನು ಮಾಡಬೇಡಿ
>> ಎಂದಿಗೂ ಕೂಡ ಯಾರೊಂದಿಗೂ ಕೂಡ ಡೆಬಿಟ್/ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ  ಪಾಸ್ವರ್ಡ್/PIN/ UPI PIN/OTP/CVV/ಕಾರ್ಡ್ ನಂಬರ್ ಗಳಂತಹ ಮಾಹಿತಿಯ ಜೊತೆಗೆ  ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಮಾಡಿದೆ. ಫೋನ್ ಮೂಲಕ ಪಾಸ್ವರ್ಡ್ ಬದಲಾವಣೆ ಮಾಡಲು ಹೇಳುವ ಮೂಲಕ ಅತಿ ಹೆಚ್ಚು ವಂಚನೆ ಎಸಗಲಾಗುತ್ತಿದೆ. ಪಾಸ್ವರ್ಡ್ ಒಂದು ವೇಳೆ ಬದಲಾವಣೆ ಮಾಡದೆ ಹೋದಲ್ಲಿ ನಿಮ್ಮ ಕಾರ್ಡ್ ಬ್ಲಾಕ್ ಆಗಲಿದೆ ಎಂದು ವಂಚಕರು ಗ್ರಾಹಕರಿಗೆ ತಪ್ಪಾಗಿ ಮನವರಿಕೆ ಮಾಡಿಸುತ್ತಿದ್ದಾರೆ ಎಂದು ಬ್ಯಾಂಕ್ ಹೇಳಿದೆ.

>>ಎಂದಿಗೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ಫೋನ್ ನಲ್ಲಿ ಸಂಗ್ರಹಿಸಬೇಡಿ. ಫೋನ್ ಕಳ್ಳತನವಾದರೆ, ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. 

>> ಯಾವುದೇ ವ್ಯಕ್ತಿಯ ಜೊತೆಗೆ ನಿಮ್ಮ ATM ಕಾರ್ಡ್ ಡಿಟೇಲ್ಸ್ ಹಂಚಿಕೊಳ್ಳಬೇಡಿ.

ಇದನ್ನೂ ಓದಿ- ತೆರಿಗೆದಾರರು ಈಗ ಮೊಬೈಲ್ ನಲ್ಲೆ ಸಲ್ಲಿಸಬಹುದು IT Return : ಹೇಗೆ ಇಲ್ಲಿದೆ ನೋಡಿ

>>ಪಬ್ಲಿಕ್ ನೆಟ್ವರ್ಕ್ (Public Network), ಓಪನ್ ನೆಟ್ವರ್ಕ್ (Open Network) ಹಾಗೂ ಫ್ರೀ ವೈ-ಫೈ ಜೋನ್ (Free Wi-Fi Zone) ಗಳನ್ನು ಬಳಸಿ ಆನ್ಲೈನ್ ವ್ಯವಹಾರ (Online Transaction) ನಡೆಸಬೇಡಿ. ಇದರಿಂದ ನಿಮ್ಮ ಮಾಹಿತಿ ಕಳ್ಳತನವಾಗುವ ಸಾಧ್ಯತೆ ಇರುತ್ತದೆ ಮತ್ತು ಇದರಿಂದ ನಿಮ್ಮ ಜೊತೆಗೆ ಆನ್ಲೈನ್ ಫ್ರಾಡ್ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

>> ಯಾವುದೇ ಬ್ಯಾಂಕ್ ಫೋನ್ ಮೂಲಕ ಡೆಬಿಟ್/ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ  ಪಾಸ್ವರ್ಡ್/PIN/ UPI PIN/OTP/CVV/ಕಾರ್ಡ್ ನಂಬರ್ ಗಳಂತಹ ಮಾಹಿತಿ ಕೇಳುವುದಿಲ್ಲ. ಯಾರಾದರು ನಿಮ್ಮ ಬಳಿ ಫೋನ್ ಮೂಲಕ ಇಂತಹ ಮಾಹಿತಿ ಹಂಚಿಕೊಳ್ಳಲು ಕೇಳಿದರೆ, ಕೂಡಲೇ ಎಚ್ಚೆತ್ತುಕೊಳ್ಳಿ.

ಇದನ್ನೂ ಓದಿ-Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News