ಮುಂದಿನ ವರ್ಷ ಶೇ.87 ರಷ್ಟು ಕಂಪನಿಗಳ ನೌಕರರ ವೇತನದಲ್ಲಿ ಹೆಚ್ಚಳ: ಸಮೀಕ್ಷೆ

ಕೋವಿಡ್ -19 ಗೆ ಸಂಬಂಧಿಸಿದ ಸವಾಲುಗಳ ನಡುವೆಯೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಸ್ಥಿತಿಸ್ಥಾಪಕತ್ವವನ್ನು ತೋರಿಸಿವೆ ಎಂದು ಬುಧವಾರ ಬಿಡುಗಡೆ ಮಾಡಿದ ಅಯಾನ್ ಸಮೀಕ್ಷಾ ವರದಿ ತಿಳಿಸಿದೆ.

Last Updated : Nov 5, 2020, 10:21 AM IST
  • ಕೊವಿಡ್-19 ಪ್ರಕೋಪದ ನಡುವೆಯೂ ಕೂಡ ದೇಶದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳು ಫ್ಲೆಕ್ಷಿಬಿಲಿಟಿ ತೋರಿಸಿವೆ.
  • 2021 ರಲ್ಲಿ ಶೇ. 87 ರಷ್ಟು ಕಂಪನಿಗಳು ತಮ್ಮ ನೌಕರರ ವೇತನವನ್ನು ಹೆಚ್ಚಿಸಲಿವೆ.
  • ಈ ವೇತನ ಹೆಚ್ಚಳ ಸರಾಸರಿ ಶೇ.7.1ರಷ್ಟು ಇರಲಿದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಮುಂದಿನ ವರ್ಷ ಶೇ.87 ರಷ್ಟು ಕಂಪನಿಗಳ ನೌಕರರ ವೇತನದಲ್ಲಿ ಹೆಚ್ಚಳ: ಸಮೀಕ್ಷೆ title=

ನವದೆಹಲಿ: ಭಾರತದಲ್ಲಿ ಕಾರ್ಯ ನಿರ್ವಹಿಸುವ  ಶೇಕಡಾ 87 ರಷ್ಟು ಕಂಪನಿಗಳು 2021 ರಲ್ಲಿ ತಮ್ಮ ನೌಕರರ ವೇತನವನ್ನು ಹೆಚ್ಚಿಸಲು (Salary Hike) ಯೋಜನೆ ರೂಪಿಸುತ್ತಿವೆ. 2020 ರ ತುಲನೆಯಲ್ಲಿ ಕೇವಲ 71 ಪ್ರತಿಶತ ಕಂಪನಿಗಳು ಮಾತ್ರ ತಮ್ಮ ವೇತನವನ್ನು ಹೆಚ್ಚಿಸಿವೆ. ಜಾಗತಿಕ ವೃತ್ತಿಪರ ಸೇವಾ ಸಂಸ್ಥೆ ಐಯಾನ್ ನಡೆಸಿದ ಸಮೀಕ್ಷೆಯು ಇದನ್ನು ಬಹಿರಂಗಪಡಿಸಿದೆ.

ಸಮೀಕ್ಷೆಯ ಪ್ರಕಾರ, ಕರೋನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಒಳಗಾದ ಆರ್ಥಿಕತೆಯ ಯುಗದಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳು ಈ ವರ್ಷ ನೌಕರರ ಸರಾಸರಿ ವೇತನವನ್ನು ಶೇಕಡಾ 6.1 ರಷ್ಟು ಹೆಚ್ಚಿಸಿವೆ. ಇದು ಕಳೆದ ದಶಕದಲ್ಲಿ ಅತ್ಯಂತ ಕಡಿಮೆ ಮಟ್ಟದ್ದಾಗಿದೆ. ಆದರೂ ಕೂಡ ಮುಂದಿನ ವರ್ಷ ಸರಾಸರಿ ಏರಿಕೆ ಶೇಕಡಾ 7.3ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನು ಓದಿ- ಸರ್ಕಾರಿ ನೌಕರರಿಗೊಂದು ಶಾಕಿಂಗ್ ನ್ಯೂಸ್.. ಜಾರಿಯಾಗಿದೆ ಹೊಸ ಆದೇಶ

ಕೋವಿಡ್ -19 ಗೆ ಸಂಬಂಧಿಸಿದ ಸವಾಲುಗಳ ನಡುವೆಯೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಸ್ಥಿತಿಸ್ಥಾಪಕತ್ವವನ್ನು ತೋರಿಸಿವೆ ಎಂದು ಬುಧವಾರ ಬಿಡುಗಡೆ ಮಾಡಿದ ಅಯಾನ್ ಸಮೀಕ್ಷಾ ವರದಿ ತಿಳಿಸಿದೆ. ವರ್ಷ 2020ರಲ್ಲಿ ಶೇ.71ರಷ್ಟು ಕಂಪನಿಗಳು ತಮ್ಮ ನೌಕರರ ವೇತನ ವೃದ್ಧಿ ಮಾಡಿವೆ. ಇದರ ತುಲನೆಯಲ್ಲಿ 2021 ರಲ್ಲಿ ಶೇ. 87ರಷ್ಟು ಕಂಪನಿಗಳು ವೇತನ ವೃದ್ಧಿಯ ಪಕ್ಷದಲ್ಲಿವೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸರಾಸರಿ ವೇತನ  ಏರಿಕೆ ದರ 2020 ರಲ್ಲಿ ಶೇ 6.1 ರಷ್ಟಿತ್ತು. ಇದು 2009 ರ ಸರಾಸರಿ ಶೇಕಡಾ 6.3 ಕ್ಕಿಂತ ಕಡಿಮೆಯಾಗಿದೆ. ಅಯಾನ್ ಅವರ 'ಭಾರತದಲ್ಲಿ ವೇತನ ಪ್ರವೃತ್ತಿ ಸಮೀಕ್ಷೆ' ಯಲ್ಲಿ, ಮುಂದಿನ ವರ್ಷ ಕಂಪನಿಗಳು ವೇತನವನ್ನು ಸರಾಸರಿ 7.3 ರಷ್ಟು ಹೆಚ್ಚಿಸುತ್ತವೆ ಎಂದು ಹೇಳಲಾಗಿದೆ. ಇದಕ್ಕಾಗಿ 20 ಕ್ಕೂ ಹೆಚ್ಚು ಕೈಗಾರಿಕೆಗಳ 1,050 ಕಂಪನಿಗಳನ್ನು ಅಯಾನ್ ಸಮೀಕ್ಷೆ ನಡೆಸಿದೆ.

ಇದನ್ನು ಓದಿ- ಈ ಕ್ಷೇತ್ರದ ನೌಕರರಿಗೆ ಈ ಬಾರಿ ಹೆಚ್ಚು ಇನ್ಕ್ರೀಮೆಂಟ್ ಸಿಗಲಿದೆ.. ನಿಮ್ಮ ಕ್ಷೇತ್ರ ಯಾವುದು?

2020 ರ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ, ಶೇಕಡಾ 87 ರಷ್ಟು ಕಂಪನಿಗಳು 2021 ರಲ್ಲಿ ಹೆಚ್ಚಳ ನೀಡಲು ಬದ್ಧವಾಗಿವೆ. ಆದರೆ ಶೇಕಡಾ 61 ರಷ್ಟು ಕಂಪನಿಗಳು ಶೇ.5 ರಿಂದ ಶೇ. 10 ರಷ್ಟು ವೇತನ ವೃದ್ಧಿ ನೀಡುವುದಾಗಿ ತಿಳಿಸಿವೆ.

2020 ರಲ್ಲಿ, ಶೇಕಡಾ 71 ರಷ್ಟು ಕಂಪನಿಗಳು ತಮ್ಮ ನೌಕರರ ವೇತನವನ್ನು ಹೆಚ್ಚಿಸಿವೆ. ಇವುಗಳ ಪೈಕಿ 45 ಪ್ರತಿಶತದಷ್ಟು ಕಂಪನಿಗಳು ಶೇ.5  ರಿಂದ ಶೇ.10 ರಷ್ಟು ವೇತನ ಹೆಚ್ಚಳ ಮಾಡಿವೆ. ಅಯಾನ್ ನಲ್ಲಿ ಪಾಲುದಾರ ಮತ್ತು ಸಿಇಒ (ಪರ್ಫಾರ್ಮೆನ್ಸ್ ಅಂಡ್ ರಿವಾರ್ಡ್ ಸೊಲ್ಯೂಷನ್ಸ್) ಆಗಿ ಕಾರ್ಯನಿರ್ವಹಿಸುವ ನಿತಿನ್ ಸೇಠಿ, ಹೇಳುವ ಪ್ರಕಾರ "ಇದು ಒಂದು ವಿಶಿಷ್ಠ ವರ್ಷ. ಕಂಪನಿಗಳು ತಮ್ಮ ಉದ್ಯೋಗಿಗಳು ಮತ್ತು ಗ್ರಾಹಕರಲ್ಲಿ ಹೂಡಿಕೆ ಮಾಡುತ್ತಿವೆ. ಕೋವಿಡ್ -19 ರ ಆಳವಾದ ಪ್ರಭಾವದ ಹೊರತಾಗಿಯೂ, ಕಂಪನಿಗಳು ನೌಕರರ ಬಗ್ಗೆ ಪ್ರಬುದ್ಧ ಮತ್ತು ಹೊಂದಿಕೊಳ್ಳುವ ಮನೋಭಾವವನ್ನು ತೋರಿಸಿವೆ" ಎಂದಿದ್ದಾರೆ.

ಇದನ್ನು ಓದಿ -ರಾಜ್ಯ ಪೊಲೀಸರಿಗೆ ದೀಪಾವಳಿ ಗಿಫ್ಟ್: ವೇತನ ಹೆಚ್ಚಳ ಮಾಡಿದ ಸಿಎಂ

ಹೈಟೆಕ್, ಐಟಿ, ಐಟಿಇಎಸ್, ಲೈಫ್ ಸೈನ್ಸಸ್, ಇ-ಕಾಮರ್ಸ್, ರಾಸಾಯನಿಕಗಳು ಮತ್ತು ವೃತ್ತಿಪರ ಸೇವೆ ಒದಗಿಸುವ ಕಂಪನಿಗಳ ನೌಕರರು ಹೆಚ್ಚಿನ ವೇತನ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

Trending News