Bharat Rice available on online: ಆನ್ಲೈನ್ ಮತ್ತು ಆಫ್ಲೈನ್ ವಿಧಾನದಲ್ಲಿಯೂ ಗ್ರಾಹಕರಿಗೆ ಅಕ್ಕಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಾಫೆಡ್ ಕರ್ನಾಟಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ರಿಲಯನ್ಸ್ನ ಜಿಯೋ ಮಾರ್ಟ್ ಹಾಗೂ ಫೇಸ್ಬುಕ್ನ ಮಾಲೀಕತ್ವದ ವಾಟ್ಸಾಪ್ ದೇಶಾದ್ಯಂತ ಇರುವ ಲಕ್ಷಾಂತರ ದಿನಸಿ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಜೋಡಿಸಲು ಯೋಜನೆ ರೂಪಿಸಿವೆ. ಹೀಗಾಗಿ ಇದೇ ರೀತಿಯ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳಿಗೆ ರಿಲಯನ್ಸ್ ರಿಟೇಲ್ ಭಾರಿ ಪೈಪೋಟಿ ನೀಡಲಿದೆ. ರಿಲಯನ್ಸ್ ಜಿಯೋದಲ್ಲಿನ ಶೇ 9.9 ರಷ್ಟು ಪಾಲು ಖರೀದಿಸುವ ಒಪ್ಪಂದಕ್ಕೆ ಫೇಸ್ಬುಕ್ ಸಹಿ ಹಾಕಿದೆ. ಈ ಒಪ್ಪಂದದಿಂದ, ಭಾರತದಲ್ಲಿ ಚಿಲ್ಲರೆ ಅಂಗಡಿ ನಿರ್ವಹಣೆ ಸ್ವರೂಪ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.