Repo Rate: ಹಣದುಬ್ಬರದಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಆರ್‌ಬಿಐ ಪರಿಹಾರ, ಸಾಲಗಳ ಮೇಲಿನ ಬಡ್ಡಿದರದಲ್ಲಿ ಇಲ್ಲ ಬದಲಾವಣೆ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಎಂಪಿಸಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾಹಿತಿ ನೀಡಿದ್ದಾರೆ.  

Written by - Yashaswini V | Last Updated : Oct 8, 2021, 11:13 AM IST
  • ರೆಪೊ ದರ - ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
  • ಸತತ 9 ನೇ ಬಾರಿಗೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
  • ಬ್ಯಾಂಕುಗಳಿಂದ ಸಾಲದ ದರಗಳು ಸ್ಥಿರವಾಗಿರುತ್ತವೆ
Repo Rate: ಹಣದುಬ್ಬರದಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಆರ್‌ಬಿಐ ಪರಿಹಾರ, ಸಾಲಗಳ ಮೇಲಿನ ಬಡ್ಡಿದರದಲ್ಲಿ ಇಲ್ಲ ಬದಲಾವಣೆ title=
RBI has not made any changes in the Repo Rate and Reverse Repo Rate

ನವದೆಹಲಿ:  ಹಣದುಬ್ಬರವನ್ನು ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಆರ್‌ಬಿಐ ಪರಿಹಾರ ನೀಡಿದೆ ಮತ್ತು ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸದಿರಲು ನಿರ್ಧರಿಸಿದೆ. ವಿತ್ತೀಯ ನೀತಿ ಸಮಿತಿಯ (ಎಂಪಿಸಿ) 3 ದಿನಗಳ ಸಭೆಯ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್  (RBI Governor Shaktikanta Das)  ಬಡ್ಡಿದರದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಘೋಷಿಸಿದರು.

ರೆಪೊ ದರ - ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ:
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ (Repo Rate) ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಅದನ್ನು 4 ಶೇಕಡಾದಲ್ಲಿ ಇರಿಸಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್  (Shaktikanta Das)  ಹೇಳಿದರು. ಇದರೊಂದಿಗೆ, ರಿವರ್ಸ್ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ಆರ್‌ಬಿಐ ನಿರ್ಧರಿಸಿದೆ ಮತ್ತು ಈ ತ್ರೈಮಾಸಿಕದಲ್ಲಿ ಅದು 3.35 ಶೇಕಡಾದಲ್ಲಿ ಉಳಿಯುತ್ತದೆ ಎಂದವರು ಮಾಹಿತಿ ನೀಡಿದರು.

ಇದನ್ನೂ ಓದಿ- Indian Railways: ರೈಲ್ವೆಯ ಈ ಪ್ರಮುಖ ನಿಯಮ 6 ತಿಂಗಳವರೆಗೆ ವಿಸ್ತರಣೆ, ಉಲ್ಲಂಘಿಸಿದರೆ ಬೀಳುತ್ತೆ ದಂಡ

ಸತತ 9 ನೇ ಬಾರಿಗೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ:
ಇದರೊಂದಿಗೆ ಭಾರತೀಯ ರಿಸರ್ವ್ (Reserve Bank) ಬ್ಯಾಂಕ್ ಸತತ 9 ನೇ ಬಾರಿಗೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಅನ್ನು ಮಾಡಿಲ್ಲ. ಈ ಹಿಂದೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 2020 ರಲ್ಲಿ ರೆಪೊ ದರವನ್ನು ಕಡಿಮೆ ಮಾಡಿತು. ಈ ರೆಪೊ ದರವು ಏಪ್ರಿಲ್ 2001 ರ ನಂತರ ಅತ್ಯಂತ ಕಡಿಮೆ ಮಟ್ಟವಾಗಿದೆ.

ಇದನ್ನೂ ಓದಿ- Easy Way To Get DL: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ, ಶುಲ್ಕ ಕೇವಲ 350 ರೂ.

ರೆಪೊ ಮತ್ತು ರಿವರ್ಸ್ ರೆಪೊ ದರ ಎಂದರೇನು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ಈ ರೆಪೋ ದರದ (Repo Rate) ಆಧಾರದ ಮೇಲೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸಾಲಗಳ ಮೇಲಿನ ಬಡ್ಡಿಯನ್ನು ನಿಗದಿಗೊಳಿಸುತ್ತವೆ. ಅಂದರೆ, ರೆಪೊ ದರ ಕಡಿಮೆಯಾದಾಗ, ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗಿರುತ್ತವೆ ಮತ್ತು ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಬಹುದು. ಅದೇ ಸಮಯದಲ್ಲಿ, ರಿವರ್ಸ್ ರೆಪೊ ದರವು ರೆಪೊ ದರಕ್ಕೆ ವಿರುದ್ಧವಾಗಿದೆ ಮತ್ತು ಇದು ಬ್ಯಾಂಕ್‌ಗಳಿಂದ ಠೇವಣಿಗಳಿಗೆ ಆರ್‌ಬಿಐ ನೀಡುವ ಬಡ್ಡಿದರ ನೀಡುತ್ತದೆ. ರಿವರ್ಸ್ ರೆಪೊ ದರದ (Reverse Repo Rate) ಮೂಲಕ ಮಾರುಕಟ್ಟೆಗಳಲ್ಲಿನ ದ್ರವ್ಯತೆಯನ್ನು ನಿಯಂತ್ರಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News