RBI Digital Rupee: ಡಿಜಿಟಲ್ ರೂಪಾಯಿ, Cryptocurrency ಗಿಂತ ಹೇಗೆ ಭಿನ್ನವಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

RBI Digital Rupee: CBDC ಪ್ರಾರಂಭಿಸಲು, RBI ಕಾಯಿದೆ, FEMA, IT ಕಾಯಿದೆ ಇತ್ಯಾದಿಗಳಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ.

Written by - Nitin Tabib | Last Updated : Feb 4, 2022, 07:27 PM IST
  • ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮೊಳಗಿಸಿದ್ದಾರೆ.
  • ಶೀಘ್ರದಲ್ಲಿಯೇ ಭಾರತದಲ್ಲಿ RBI ಡಿಜಿಟಲ್ ಕರೆನ್ಸಿ ಜಾರಿಗೊಳಿಸಲಿದೆ.
  • ಈ ಕರೆನ್ಸಿ ಬ್ಲಾಕ್ ಚೈನ್ ಸೇರಿದಂತೆ ಇತರೆ ತಂತ್ರಜ್ಞಾನಗಳ ಮೇಲೆ ಆಧಾರಿತವಾಗಿರಲಿದೆ.
RBI Digital Rupee: ಡಿಜಿಟಲ್ ರೂಪಾಯಿ, Cryptocurrency ಗಿಂತ ಹೇಗೆ ಭಿನ್ನವಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ title=
RBI Digital Rupee VS Cryptocurrency (File Photo)

RBI Digital Rupee ಇದು 2022 ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಮಾಡಿದ ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ. ಅದೂ ಸೆಂಟ್ರಲ್ ಬ್ಯಾಂಕ್ ಬೆಂಬಲಿತ ಡಿಜಿಟಲ್ ಕರೆನ್ಸಿ (CBDC). ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ  ಡಿಜಿಟಲ್ ರೂಪಾಯಿಯನ್ನು ಹೊಸ ಹಣಕಾಸು ವರ್ಷದಲ್ಲಿ ಜಾರಿಗೊಳಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗುತ್ತಿರುವ ಈ  ಡಿಜಿಟಲ್ ರೂಪಾಯಿ ನಿಖರವಾಗಿ ಏನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಎಲ್ಲರೂ ಆಶ್ಚರ್ಯಪಡುವಂತಾಗಿದೆ. ಸರಳವಾಗಿ ಹೇಳುವುದಾದರೆ, CBDC ಎನ್ನುವುದು ದೇಶದ ಕೇಂದ್ರ ಬ್ಯಾಂಕ್‌ನಿಂದ ಡಿಜಿಟಲ್ ರೂಪದಲ್ಲಿ ನೀಡಲಾದ ಕಾನೂನು ಟೆಂಡರ್ ಆಗಿದೆ. ಇದು ಫಿಯೆಟ್ ಕರೆನ್ಸಿಯನ್ನು ಹೋಲುತ್ತದೆ ಮತ್ತು ತನ್ಮೂಲಕ  ವಹಿವಾಟುಗಳನ್ನು ನಡೆಸಬಹುದು.

ಇದು Cryptocurrency ಗಿಂತ ಹೇಗೆ ಭಿನ್ನವಾಗಿದೆ?
RBI ಮಾನ್ಯತೆಯೊಂದಿಗೆ CBDC ಸೆಂಟ್ರಲೈಸ್ದ್ ಆಗಿರಲಿದೆ. ಇನ್ನೊಂದೆಡೆ ಕ್ರಿಪ್ಟೋಕರೆನ್ಸಿ ಡಿಸೆಂಟ್ರಲೈಸ್ದ್ ಆಗಿದೆ. ಇವುಗಳನ್ನು ಜಾರಿಗೊಳಿಸುವ ನಿಶ್ಚಿತ ವ್ಯಕ್ತಿ ಯಾರೂ ಇಲ್ಲ ಹಾಗೂ ಯಾವುದೇ ವ್ಯಕ್ತಿಯ ವ್ಯವಹಾರವನ್ನು ಅವರು ಪ್ರತಿನಿಧಿಸುವುದಿಲ್ಲ.

ಭಾರತದಲ್ಲಿ ಡಿಜಿಟಲ್ ಕರೆನ್ಸಿಯ ಅವಶ್ಯಕತೆ ಇದೆಯೇ?
CBDC ಭಾರತದಲ್ಲಿ ನಗದು ಬಳಕೆಯನ್ನು ಬದಲಿಸುವುದಿಲ್ಲ. ಆದರೆ, ಭಾರತವು ಡಿಜಿಟಲ್ ಕರೆನ್ಸಿಗೆ ಬದಲಾದಂತೆ, ಇದು ಮುದ್ರಣ, ಸಾಗಣೆ, ಸಂಗ್ರಹಣೆ ಮತ್ತು ವಿತರಣೆಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ. ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ ಮತ್ತು ಕಾಗದದ ಕರೆನ್ಸಿಯ ಬಳಕೆ ಕಡಿಮೆಯಾಗುತ್ತದೆ. ಆದ್ದರಿಂದ, ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವನ್ನು ಉತ್ತೇಜಿಸುವ ಅವಶ್ಯಕತೆಯಿದೆ.

ಇದನ್ನೂ ಓದಿ-Corona ನೆಪ ಹೇಳಿ ಮಹಿಳೆಯ ಖಾಸಗಿ ಅಂಗದಿಂದ ಸ್ವ್ಯಾಬ್ ಮಾದರಿ ಪಡೆದ ಲ್ಯಾಬ್ ಟೆಕ್ನಿಶಿಯನ್

ವಿತ್ತೀಯ ನೀತಿಯ ಮೇಲೆ CBDC ಯ ಪರಿಣಾಮ ಏನು?
ಹಿಂದೆ, ಕರೆನ್ಸಿಯ ಪೂರೈಕೆಯನ್ನು ಬಾಂಡ್ ಖರೀದಿಗಳು, ಕರೆನ್ಸಿಗಳ ಮಾರಾಟ ಮತ್ತು ಖರೀದಿ ಇತ್ಯಾದಿಗಳ ಮೂಲಕ ಟ್ರ್ಯಾಕ್ ಮಾಡಲಾಗುತ್ತಿತ್ತು. ಆದಾಗ್ಯೂ, CBDC ಗಳ ಬಳಕೆಯು ಹಣದ ಬೇಡಿಕೆಯನ್ನು ವಿಶ್ಲೇಷಿಸಬಹುದು ಮತ್ತು ನೀತಿ ನಿರ್ವಹಣೆಯನ್ನು ಸುಧಾರಿಸಬಹುದು.

ಇದನ್ನೂ ಓದಿ -ನೀವು ಮಾಡುವ ಈ ತಪ್ಪುಗಳಿಂದ ನಿಮ್ಮ ಮನೆಯಲ್ಲಿ ನಿಲ್ಲುವುದಿಲ್ಲ ಲಕ್ಷ್ಮಿದೇವಿ!

CBDC ಯಾವಾಗ ಪ್ರಾರಂಭವಾಗುತ್ತದೆ?
ಸಂಸತ್ತಿನಲ್ಲಿ ಕ್ರಿಪ್ಟೋ ಕಾನೂನನ್ನು ಅಂಗೀಕರಿಸುವ ಮೊದಲು CBDC ಬಿಡುಗಡೆಯಾಗಲಿದೆ ಎಂಬ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಾಗದದ ಕರೆನ್ಸಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನು ನಿಬಂಧನೆಗಳನ್ನು ಮಾಡಲಾಗಿರುವುದರಿಂದ CBDC ಯ ರೋಲ್ ಔಟ್‌ಗಾಗಿ RBI ಕಾಯಿದೆ, The Coinage Act, FEMA ಮತ್ತು IT ಕಾಯಿದೆಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇದೆ.

ಇದನ್ನೂ ಓದಿ-Rashmika ಗೆ ಟ್ರೋಲ್‌ ಕಾಟ..! ʼಲೆಜೆಂಡ್‌ʼ ಬಾಯಲ್ಲಿ ಕನ್ನಡ ಕವನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News