PPF Latest Update: ಪಿಪಿಎಫ್ ಹೂಡಿಕೆದಾರರಿಗೆ ಬಿಗ್ ಶಾಕ್!

PPF Latest News: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೂಡಿಕೆದಾರರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಪಿಪಿಎಫ್‌ನ ಬಡ್ಡಿದರದಲ್ಲಿ ಸರ್ಕಾರ ಮತ್ತೆ ಯಾವುದೇ ಬದಲಾವಣೆ ಮಾಡಿಲ್ಲ. 12 ತ್ರೈಮಾಸಿಕಗಳಿಂದ ಇದು ಶೇ.7.1ರಲ್ಲಿ ಸ್ಥಿರವಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಈಗ ಶೇಕಡಾ 8.2 ರ ಬಂಪರ್ ಬಡ್ಡಿಯನ್ನು ಪಡೆಯುತ್ತವೆ.  

Written by - Nitin Tabib | Last Updated : Mar 31, 2023, 07:12 PM IST
  • ಹೂಡಿಕೆಯ ವಿಷಯದಲ್ಲಿ ಪಿಪಿಎಫ್ ಅನ್ನು ಉತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ.
  • ಇದು EEE ವರ್ಗದಲ್ಲಿ ಬರುತ್ತದೆ.
  • ಹೂಡಿಕೆಯ ಮೇಲೆ ಸೆಕ್ಷನ್ 80C ಅಡಿಯಲ್ಲಿ ಕಡಿತ ಲಭ್ಯವಿದೆ.
PPF Latest Update: ಪಿಪಿಎಫ್ ಹೂಡಿಕೆದಾರರಿಗೆ ಬಿಗ್ ಶಾಕ್! title=
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಅಪ್ಡೇಟ್ !

PPF Latest Update: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೂಡಿಕೆದಾರರ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಸತತ 12ನೇ ತ್ರೈಮಾಸಿಕದಲ್ಲಿ ಪಿಪಿಎಫ್ ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಹಣಕಾಸು ಸಚಿವಾಲಯ ಇಂದು ಪರಿಷ್ಕರಿಸಿದೆ. ಹೊಸ ಬಡ್ಡಿ ದರಗಳು ಏಪ್ರಿಲ್ 1, 2023 ರಿಂದ ಅನ್ವಯಿಸಲಿವೆ, ಇದು ಜೂನ್ 30, 2023 ರವರೆಗೆ ಮಾನ್ಯವಾಗಿರುತ್ತದೆ. ಪಿಪಿಎಫ್ ಮೇಲಿನ ಬಡ್ಡಿದರವನ್ನು ಶೇ.7.1ರಲ್ಲೇ ಕಾಯ್ದಿರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 1, 2020 ರಿಂದ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿ ದರಗಳು ಶೇ.7.1 ರಷ್ಟೇ ಉಳಿಯಲಿವೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಶೇ. 8.2 ರಷ್ಟು ಬಡ್ಡಿ
ಹಣಕಾಸು ಸಚಿವಾಲಯ ಹೊರಡಿಸಿದ ಪ್ರಕಟನೆಯ ಪ್ರಕಾರ, ಮುಂದಿನ ತ್ರೈಮಾಸಿಕಕ್ಕೆ (1 ಏಪ್ರಿಲ್ 2023 ರಿಂದ 30 ಜೂನ್ 2023) ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಶೇಕಡಾ 8 ರಿಂದ ಶೇಕಡಾ 8.2 ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಖಾತೆ ಅಂದರೆ ಎಂಐಎಸ್ ಯೋಜನೆಗೆ ಬಡ್ಡಿದರಗಳನ್ನು ಶೇ.7.1ರಿಂದ ಶೇ.7.4ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ-Big Update: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ, ಯಾವ ಯೋಜನೆಯ ಮೇಲೆ ಎಷ್ಟು ಬಡ್ಡಿ? ಇಲ್ಲಿದೆ ಪಟ್ಟಿ

ಸುಕನ್ಯಾ ಸಮೃದ್ಧಿ ಯೋಜನೆಗೆ ಶೇಕಡಾ 8 ಬಡ್ಡಿ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಗೆ ಇನ್ಮುಂದೆ  ಶೇಕಡಾ 7 ರ ಬದಲಿಗೆ 7.7 ಶೇಕಡಾ ಬಡ್ಡಿ ಸಿಗಲಿದೆ. ಇದು ಇಡುವರೆಗಿನ ಅತಿ ದೊಡ್ಡ ಏರಿಕೆಯಾಗಿದೆ. PPF ಮೇಲಿನ ಬಡ್ಡಿ ದರವನ್ನು ಶೇ. 7.1 ರಷ್ಟಕ್ಕೆ ಕಾಯ್ದಿರಿಸಲಾಗಿದೆ. ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿದರವನ್ನು ಶೇಕಡಾ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಬಡ್ಡಿದರಗಳನ್ನು ಶೇ.7.6 ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ-8th Pay Commission ಕುರಿತು ಬಿಗ್ ಅಪ್ಡೇಟ್, ಶೇ.44 ರಷ್ಟು ಹೆಚ್ಚಾಗಲಿದೆ ವೇತನ!

ಪಿಪಿಎಫ್ ಯೋಜನೆಯಲ್ಲಿ ತೆರಿಗೆಯಲ್ಲಿ ಟ್ರಿಪಲ್ ಲಾಭ
ಹೂಡಿಕೆಯ ವಿಷಯದಲ್ಲಿ ಪಿಪಿಎಫ್ ಅನ್ನು ಉತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ. ಇದು EEE ವರ್ಗದಲ್ಲಿ ಬರುತ್ತದೆ. ಹೂಡಿಕೆಯ ಮೇಲೆ ಸೆಕ್ಷನ್ 80C ಅಡಿಯಲ್ಲಿ ಕಡಿತ ಲಭ್ಯವಿದೆ. ರಿಟರ್ನ್ಸ್ ಮತ್ತು ಮೆಚ್ಯೂರಿಟಿ ಕೂಡ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಬಡ್ಡಿಯನ್ನು ಪ್ರತಿ ತ್ರೈಮಾಸಿಕ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಬಡ್ಡಿಯನ್ನು ವಾರ್ಷಿಕ ಸಂಯುಕ್ತ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದರಲ್ಲಿ ಕನಿಷ್ಠ ರೂ 500 ಮತ್ತು ಗರಿಷ್ಠ ರೂ 1.5 ಲಕ್ಷ ರೂ.ಗಳನ್ನು ಒಂದು ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಬಹುದು. ಇದರ ಮುಕ್ತಾಯವು 15 ವರ್ಷಗಳು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News