ನವದೆಹಲಿ : Public Provident Fund: ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು PPF ಅತ್ಯುತ್ತಮ ಆಯ್ಕೆಯಾಗಿದೆ. ಈ ಖಾತೆ ಪ್ರತಿ ಹಂತದಲ್ಲೂ ತೆರಿಗೆ ಪ್ರಯೋಜನಗಳನ್ನು (benefits of PPF account) ನೀಡುತ್ತದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ, ಈ ಅವಧಿಯಲ್ಲಿ ಗಳಿಸಿದ ಆದಾಯ, ಮೆಚ್ಯೂರಿಟಿ ಮೊತ್ತ ಮತ್ತು ಒಟ್ಟಾರೆ ಬಡ್ಡಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಇದರ ಅಡಿಯಲ್ಲಿ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1,50,000 ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು (Tax relaxation) ಪಡೆಯುವುದು ಕೂಡಾ ಸಾಧ್ಯವಾಗುತ್ತದೆ.
ಬಂಪರ್ ಪ್ರಯೋಜನಗಳನ್ನು ನೀಡುತ್ತದೆ PPF :
ಪ್ರಸ್ತುತ, ಪಿಪಿಎಫ್ ಖಾತೆಯು (PPF Account) ಶೇಕಡಾ 7.1 ರ ಬಡ್ಡಿದರವನ್ನು ನೀಡುತ್ತಿದೆ. ತಜ್ಞರ ಪ್ರಕಾರ, ದೀರ್ಘಾವಧಿಯವರೆಗೆ PPF ನಲ್ಲಿ ಹೂಡಿಕೆ (investment) ಮಾಡುವುದರಿಂದ ಕಾಂಪೌಂಡ್ ಪವರ್ ಲಾಭವನ್ನು ನೀಡುತ್ತದೆ. ಅಂದರೆ ಹೆಚ್ಚುವರಿ ಲಾಭವನ್ನು ಗಳಿಸುವುದು ಸಾಧ್ಯವಾಗುತ್ತದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್‌ಲೈನ್‌ನಲ್ಲಿ PPF ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುತ್ತದೆ.
ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ
ಅಗತ್ಯ ದಾಖಲೆಗಳು :
ಪಿಪಿಎಫ್ ಖಾತೆಗಳನ್ನು (PPF Account) ತೆರೆಯಲು ದಾಖಲಾತಿ ನಮೂನೆ, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, PAN ಕಾರ್ಡ್ ನಕಲು, ID ಪುರಾವೆ ಮತ್ತು ನಿವಾಸ ಪುರಾವೆಗಳ ಅಗತ್ಯವಿದೆ. ಬ್ಯಾಂಕಿನ KYC ಮಾನದಂಡಗಳ ಪ್ರಕಾರ, ಖಾತೆಯನ್ನು ತೆರೆಯಲು, ಈ ದಾಖಲೆಗಳನ್ನು ಹೊಂದಿರಬೇಕು.
ಎಸ್‌ಬಿಐನಲ್ಲಿ ಪಿಪಿಎಫ್ ಖಾತೆ ತೆರೆಯುವ ವಿಧಾನ :
1. ಇದಕ್ಕಾಗಿ, ಮೊದಲನೆಯದಾಗಿ SBI ನೆಟ್ ಬ್ಯಾಂಕಿಂಗ್ ಪೋರ್ಟಲ್ - onlinesbi.com ಗೆ ಹೋಗಿ ಲಾಗಿನ್ ಮಾಡಿ.
2. ಈಗ 'ರಿಕ್ವೆಸ್ಟ್ ಅಂಡ್ ಎನ್ಕ್ವಯರಿಸ್ ಟ್ಯಾಬ್‌ಗೆ ಹೋಗಿ ಮತ್ತು 'New PPF Account' ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಂತರ 'PPF ಖಾತೆಗಾಗಿ ಅಪ್ಲೈ ' ವಿಭಾಗವನ್ನು ಕ್ಲಿಕ್ ಮಾಡಿ.
4. ಇಲ್ಲಿ ಪರದೆಯ ಮೇಲೆ, ಹೆಸರು, ಪ್ಯಾನ್ (PAN) ಮತ್ತು ವಿಳಾಸದಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
5. ಇದರ ನಂತರ, ಖಾತೆಯನ್ನು ತೆರೆಯಬೇಕಾದ ಬ್ಯಾಂಕ್‌ನ ಶಾಖೆಯ ಕೋಡ್ ಅನ್ನು ನಮೂದಿಸಿ.
6. ಈಗ ನಿಮ್ಮ ನಾಮಿನಿ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮಾಡಿ .
7. ಇದರ ನಂತರ ನಿಮ್ಮ ಮೊಬೈಲ್ ಫೋನ್ ಗೆ ಬರುವ OTPಯನ್ನು ನಮೂದಿಸಬೇಕು. ಫಾರ್ಮ್ ಅನ್ನು ಪ್ರಿಂಟ್ ಮಾಡಲು 'PPF ಖಾತೆ ಆನ್‌ಲೈನ್ ಅಪ್ಲಿಕೇಶನ್ ಅನ್ನು ಪ್ರಿಂಟ್ ಮಾಡುವ ಆಯ್ಕೆಗೆ ಕ್ಲಿಕ್ ಮಾಡಿ .
8. 30 ದಿನಗಳ ಒಳಗೆ KYC ದಾಖಲೆ ಮತ್ತು ಫೋಟೋದೊಂದಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. SBI ಪ್ರಕಾರ ಅರ್ಜಿ ಸಲ್ಲಿಸಿದ ದಿನದಿಂದ 30 ದಿನಗಳ ನಂತರ ಖಾತೆ ತೆರೆಯುವ ಫಾರ್ಮ್ ಅನ್ನು ಡಿಲೀಟ್ ಮಾಡಲಾಗುತ್ತದೆ.
ಇದನ್ನೂ ಓದಿ : ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಚಿಂತೆ ಬಿಟ್ಟು ಬಿಡಿ , TATA ತಂದಿದೆ ಅಗ್ಗದ ಬೆಲೆಯ CNG ಕಾರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.