Post Office Super Hit Scheme! ನಿತ್ಯ ಕೇವಲ 50ರೂ.ಹೂಡಿಕೆ ಮಾಡಿ 35 ಲಕ್ಷ ಪಡೆಯಿರಿ

Post Office Scheme: ಅಂಚೆ ಕಛೇರಿಯ (Post Office) ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿದಿನ ಕೇವಲ 50 ರೂ.ಗಳನ್ನು ಠೇವಣಿ ಇರಿಸಿದರೆ, ಮುಂಬರುವ ದಿನಗಳಲ್ಲಿ ನೀವು 35 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದು.ಈ ಯೋಜನೆಯ ವಿವರಗಳನ್ನು ತಿಳಿಯೋಣ ಬನ್ನಿ.

Written by - Nitin Tabib | Last Updated : Dec 25, 2021, 02:53 PM IST
  • ಅಂಚೆ ಕಛೇರಿಯ ಗ್ರಾಮ ಸುರಕ್ಷಾ ಯೋಜನೆ ಒಂದು ಅದ್ಭುತ ಯೋಜನೆಯಾಗಿದೆ.
  • ಪ್ರತಿ ತಿಂಗಳು 1500 ಠೇವಣಿ ಮಾಡಿದರೆ, ನೀವು 35 ಲಕ್ಷಗಳನ್ನು ಪಡೆಯಬಹುದು.
  • ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳು ಇಲ್ಲಿವೆ.
Post Office Super Hit Scheme! ನಿತ್ಯ ಕೇವಲ 50ರೂ.ಹೂಡಿಕೆ ಮಾಡಿ 35 ಲಕ್ಷ ಪಡೆಯಿರಿ title=
Postal Investment Scheme (File Photo)

ನವದೆಹಲಿ: Gram Suraksha Scheme - ಅಂಚೆ ಕಚೇರಿಯಲ್ಲಿ (India Post) ಮಾಡಿದ ಹೂಡಿಕೆಯನ್ನು ಸುರಕ್ಷಿತ ಹೂಡಿಕೆ (Investment Idea) ಎಂದು ಪರಿಗಣಿಸಲಾಗುತ್ತದೆ. ಹಾಗೆ ನೋಡಿದರೆ ಯಾವುದೇ ಹೂಡಿಕೆಯೊಂದಿಗೆ ಸಾಮಾನ್ಯವಾಗಿ ಅಪಾಯದ ಅಂಶ ಇದ್ದೆ ಇರುತ್ತದೆ. ಆದರೆ, ಪ್ರತಿಯೊಬ್ಬರೂ ಆ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹಣವು ಸುರಕ್ಷಿತವಾಗಿರುವಂತಹ ಸ್ಥಳದಲ್ಲಿ ನೀವು ಹೂಡಿಕೆ ಮಾಡಬೇಕು ಮತ್ತು ನೀವು ಶೂನ್ಯ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. ಉತ್ತಮ ಲಾಭ ನೀಡುವ ಯೋಜನೆಯ ಕುರಿತು ನೀವೂ ಕೂಡ ಯೋಚಿಸುತ್ತಿದ್ದರೆ,  ಅಂಚೆ ಕಚೇರಿಯು ನಿಮಗೆ ಉತ್ತಮವಾದ ಹೂಡಿಕೆಯ ಜಾಗವಾಗಿದೆ.

35 ಲಕ್ಷ ಸಿಗಲಿದೆ (How To Invest Money)
ಇದಕ್ಕಾಗಿ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು ನಿಮಗೆ ಉತ್ತಮ ಆಯ್ಕೆಯಾಗಳಿವೆ. ಈ ಯೋಜನೆಗಳಲ್ಲಿ  ಅಪಾಯದ ಅಂಶವೂ ಕಡಿಮೆ ಮತ್ತುಇದೇ ವಲೇ  ಆದಾಯವೂ ಉತ್ತಮವಾಗಿರುತ್ತದೆ. ಅಪಾಯವು ಅತ್ಯಲ್ಪವಾಗಿರುವ ಮತ್ತು ಉತ್ತಮವಾದ ಆದಾಯವನ್ನು ಹೊಂದಿರುವ ಹೂಡಿಕೆಯ ಕುರಿತು ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಹೌದು, ನಾವು ಅಂಚೆ ಕಛೇರಿಯ 'ಗ್ರಾಮ ಸುರಕ್ಷಾ ಯೋಜನೆ' ಬಗ್ಗೆ ಮಾತನಾಡುತ್ತಿದ್ದೇವೆ. ಇಂಡಿಯಾ ಪೋಸ್ಟ್ ನೀಡುವ ಈ ಸಂರಕ್ಷಣಾ ಯೋಜನೆಯು ಇಂತಹ ಒಂದು ಆಯ್ಕೆಯಾಗಿದ್ದು, ಇದರಲ್ಲಿ ನೀವು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ, ನೀವು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕು. ಈ ಮೊತ್ತವನ್ನು ನಿಯಮಿತವಾಗಿ ಠೇವಣಿ ಮಾಡುವುದರಿಂದ, ಮುಂಬರುವ ಸಮಯದಲ್ಲಿ ನೀವು 31 ರಿಂದ 35 ಲಕ್ಷಗಳ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-ಡಿ.1ರೊಳಗೆ ಈ ಮಹತ್ವದ ಕೆಲಸ ಪೂರ್ಣಗೊಳಿಸಿ: ಸರ್ಕಾರದಿಂದ 7 ಲಕ್ಷ ರೂ. ಸಿಗಲಿದೆ

ಹೂಡಿಕೆಯ ನಿಯಮಗಳು ಇಲ್ಲಿವೆ (Post Office Invest Scheme)
>> 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
>> ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರಿಂದ 10 ಲಕ್ಷ ರೂ.
>> ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು.
>> ಪ್ರೀಮಿಯಂ ಪಾವತಿಸಲು ನೀವು 30 ದಿನಗಳ ಸಮಯಾವಕಾಶ ಪಡೆಯಬಹುದು.
>> ಈ ಯೋಜನೆಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು.
>> ಈ ಸ್ಕೀಮ್ ತೆಗೆದುಕೊಂಡ 3 ವರ್ಷಗಳ ನಂತರ ನೀವು ಅದನ್ನು ಸರೆಂಡರ್ ಮಾಡಬಹುದು. ಆದರೆ ಅಂತಹ  ಪರಿಸ್ಥಿತಿಯಲ್ಲಿ ನಿಮಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ.

ಇದನ್ನೂ ಓದಿ-ITR ದಾಖಲಿಸಿ Royal Enfield Bullet ಗೆಲ್ಲಿ, ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ

ತುಂಬಾ ಪ್ರಯೋಜನ
ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂಪಾಯಿಗಳ ಪಾಲಿಸಿಯನ್ನು ಖರೀದಿಸಿದರೆ, ಅವನ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂ., 58 ವರ್ಷಗಳಿಗೆ ರೂ. 1463 ಮತ್ತು 60 ವರ್ಷಗಳಿಗೆ ರೂ. 1411 ಆಗಿರುತ್ತದೆ. ಹೀಗಿರುವಾಗ ಪಾಲಿಸಿ ಖರೀದಿದಾರರು 55 ವರ್ಷಗಳಿಗೆ 31.60 ಲಕ್ಷ ರೂ., 58 ವರ್ಷಗಳಿಗೆ ರೂ. 33.40 ಲಕ್ಷ ಮತ್ತು 60 ವರ್ಷಗಳಿಗೆ ರೂ. 34.60 ಲಕ್ಷದ ಮೆಚುರಿಟಿ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ-Paytm New Cash Back Offer: ಪ್ರಿ-ಪೇಯ್ಡ್ ಪ್ಲಾನ್ ರೀಚಾರ್ಜ್‌ನಲ್ಲಿ 1000 ರೂ.ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News