PM Kisan: ನವರಾತ್ರಿಯಲ್ಲಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ, ಖಾತೆಗೆ 2 ಸಾವಿರ ರೂ. ಬರಲಿದೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ ಇದೆ. ಈ ತಿಂಗಳು 12ನೇ ಕಂತಿಗೆ ಕಾಯುತ್ತಿರುವ ಕೋಟ್ಯಂತರ ರೈತರ ಖಾತೆಗೆ 2000 ರೂ. ಜಮಾ ಆಗುವ ಸಾಧ‍್ಯತೆ ಇದೆ.

Written by - Puttaraj K Alur | Last Updated : Sep 25, 2022, 11:48 AM IST
  • ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ 12ನೇ ಕಂತಿಗಾಗಿ ಕಾಯುತ್ತಿರುವ ಕೋಟ್ಯಂತರ ರೈತರಿಗೆ ಸಿಹಿ ಸುದ್ದಿ
  • ನವರಾತ್ರಿ ಹಬ್ಬದೊಳಗೆ ರೈತರ ಖಾತೆಗೆ 12ನೇ ಕಂತಿನ ಹಣ ಜಮಾ ಸಾಧ್ಯತೆ
  • ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಇ-ಕೆವೈಸಿ ಮಾಡಿಸಲು ಸಲಹೆ
PM Kisan: ನವರಾತ್ರಿಯಲ್ಲಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ, ಖಾತೆಗೆ 2 ಸಾವಿರ ರೂ. ಬರಲಿದೆ title=
PM Kisan 12th Installment

ನವದೆಹಲಿ: ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ 12ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಈ ನವರಾತ್ರಿಯಲ್ಲಿ ರೈತರ ಖಾತೆಗೆ 12ನೇ ಕಂತಿನ ಹಣವನ್ನು ಜಮಾ ಮಾಡಬಹುದು. ನವರಾತ್ರಿಯ ಆರಂಭದಲ್ಲಿ ಖಾತೆಗೆ 2 ಸಾವಿರ ರೂ. ಬರಲಿದೆ ಎಂದು ಹೇಳಲಾಗುತ್ತಿದೆ. ಇದರ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ.

ಈ ತಿಂಗಳು ಹಣ ಜಮಾ ಆಗಲಿದೆ

ವರದಿಗಳ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ರೈತರಿಗೆ ‘ಪ್ರಧಾನ ಮಂತ್ರಿ ಸಮ್ಮಾನ್ ನಿಧಿ’ ಯೋಜನೆಯ 12ನೇ ಕಂತಿನ ಹಣ ಸಿಗುತ್ತದೆ. ಸೆಪ್ಟೆಂಬರ್ 30ರೊಳಗೆ ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು. ಇದಕ್ಕೂ ಮೊದಲು ನೀವು ಪಿಎಂ ಕಿಸಾನ್ ಕಂತುಗಳ ಸ್ಥಿತಿಯನ್ನು ಪರಿಶೀಲಿಸಬೇಕು. ಇದರಿಂದ ನಿಮ್ಮ ಖಾತೆಗೆ 2 ಸಾವಿರ ರೂ. ಬರುತ್ತದೋ ಇಲ್ಲವೋ ಎಂಬುದು ಗೊತ್ತಾಗಲಿದೆ.

ಇದನ್ನೂ ಓದಿ: UPA ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆಗೆ ಬ್ರೇಕ್ ಬಿದ್ದಿತ್ತು, ಇನ್ಫೋಸಿಸ್ ಸಹಸಂಸ್ಥಾಪಕರು ಹೇಳಿದ್ದೇನು?

ಕಂತು ಪಡೆಯಲು ವಿಳಂಬ ಏಕೆ?

ಪಿಎಂ ಕಿಸಾನ್ ಯೋಜನೆಯಲ್ಲಿ ಸರ್ಕಾರವು ಅನೇಕ ಅಕ್ರಮಗಳನ್ನು ಕಂಡುಹಿಡಿದಿದೆ. ಇದನ್ನು ತಡೆಯಲು ಸರ್ಕಾರವು ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ರೈತರಿಂದ ಇ-ಕೆವೈಸಿ ನವೀಕರಿಸಲು ಆಗಸ್ಟ್ 31ರಂದು ಕೊನೆಯ ದಿನಾಂಕವಾಗಿತ್ತು. ಆದರೆ ನಿಗದಿತ ದಿನದಂದು ರೈತರ ಇ-ಕೆವೈಸಿ ಪೂರ್ಣಗೊಂಡಿಲ್ಲ, ಆದ್ದರಿಂದ ಇದನ್ನು ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ 12ನೇ ಕಂತಿನ ಹಣ ಬರಲು ವಿಳಂಬವಾಗುತ್ತಿದೆ.

ತಕ್ಷಣವೇ ಇ-ಕೆವೈಸಿ ಮಾಡಿಸಿ

ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿಯ ಈ ಗಡುವು ಮುಕ್ತಾಯವಾಗಿದೆ. ಆದರೆ ಇ-ಕೆವೈಸಿ ಮಾಡಿಸುವ ಸೌಲಭ್ಯ ಇನ್ನೂಇದೆ. ನೀವು ಇನ್ನೂ ಇ-ಕೆವೈಸಿ ಮಾಡಿಸಿರದಿದ್ದರೆ ನಿಮ್ಮ 12ನೇ ಕಂತಿನ ಹಣವು ಬರದಿರಬಹುದು. ಆದ್ದರಿಂದ ಇಂದೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿರಿ.

ಇದನ್ನೂ ಓದಿ: Car Export: ವಿದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಭಾರತದಲ್ಲಿ ತಯಾರಾದ ಈ 10 ಕಾರುಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News