PM Kisan: ಇನ್ನೂ ನಿಮ್ಮ ಖಾತೆಗೆ 2000 ರೂ. ಬಂದಿಲ್ಲವೇ? ಈ ಸಂಖ್ಯೆಗೆ ದೂರು ನೀಡಿ, ತಕ್ಷಣ ಲಾಭ ಪಡೆಯಿರಿ

PM Kisan Samman Nidhi Yojana: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತನ್ನು ಬಿಡುಗಡೆ ಮಾಡಲಾಗಿದೆ. ಇದರ ಅಡಿಯಲ್ಲಿ, ರೈತರ ಖಾತೆಯಲ್ಲಿ ಇನ್ನೂ ಹಣ ಬಂದಿಲ್ಲವಾದರೆ, ಅವರು ತಕ್ಷಣವೇ ಕೇಂದ್ರ ಕೃಷಿ ಸಚಿವಾಲಯಕ್ಕೆ ದೂರು ನೀಡಬಹುದು. ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ.  

Written by - Yashaswini V | Last Updated : Aug 10, 2021, 11:28 AM IST
  • ಪಿಎಂ ಕಿಸಾನ್ ನ 9 ನೇ ಕಂತನ್ನು ಬಿಡುಗಡೆ ಮಾಡಲಾಗಿದೆ
  • ನಿಮ್ಮ ಖಾತೆಯಲ್ಲಿ ಇನ್ನೂ ಕೂಡ ಹಣ ಬರದಿದ್ದರೆ ದೂರು ನೀಡಿ
  • ಕೃಷಿ ಸಚಿವಾಲಯಕ್ಕೆ ದೂರು ನೀಡುವ ಮೂಲಕ ನೀವು ತಕ್ಷಣ ಪರಿಹಾರ ಪಡೆಯಬಹುದು
PM Kisan: ಇನ್ನೂ ನಿಮ್ಮ ಖಾತೆಗೆ 2000 ರೂ. ಬಂದಿಲ್ಲವೇ? ಈ ಸಂಖ್ಯೆಗೆ ದೂರು ನೀಡಿ, ತಕ್ಷಣ ಲಾಭ ಪಡೆಯಿರಿ title=
PM Kisan Samman Nidhi Scheme

ನವದೆಹಲಿ: PM Kisan Samman Nidhi Yojana- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯಡಿ 9 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ 2000 ರೂಪಾಯಿಗಳು ರೈತರ ಖಾತೆಗೆ ಬರಲಾರಂಭಿಸಿವೆ. ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಅಡಿಯಲ್ಲಿ ಇಲ್ಲಿಯವರೆಗೆ 12 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸಲಾಗಿದೆ. ಈ ಯೋಜನೆಯಡಿಯಲ್ಲಿ ನೀವು ಇನ್ನೂ ಕೂಡ ಹಣವನ್ನು ಸ್ವೀಕರಿಸದಿದ್ದರೆ, ತಕ್ಷಣ ಕೇಂದ್ರ ಕೃಷಿ ಸಚಿವಾಲಯಕ್ಕೆ (Ministry of Agriculture) ದೂರು ನೀಡಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಲು ಮುಂದೆ ಓದಿ...

ಎಲ್ಲಿ ಮತ್ತು ಹೇಗೆ ದೂರು ನೀಡಬೇಕು?
ಪಿಎಂ ಕಿಸಾನ್ ಯೋಜನೆಯಡಿ ಇನ್ನೂ ಕೂಡ ನೀವು 9ನೇ ಕಂತಿನ ಹಣವನ್ನು ಸ್ವೀಕರಿಸದಿದ್ದರೆ ಅಂದರೆ ನಿಮ್ಮ ಖಾತೆಯಲ್ಲಿ 2000 ರೂಪಾಯಿಗಳು ಬರದಿದ್ದರೆ, ಮೊದಲು ನೀವು ನಿಮ್ಮ ಪ್ರದೇಶದ ಅಕೌಂಟೆಂಟ್ ಮತ್ತು ಕೃಷಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಇಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ನೀವು ಅದಕ್ಕೆ ಸಂಬಂಧಿಸಿದ ಸಹಾಯವಾಣಿಗೆ ಕರೆ ಮಾಡಬಹುದು. ಇ-ಡೆಸ್ಕ್ (PM-KISAN Help Desk) ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಇದಲ್ಲದೇ, ನೀವು pmkisan-ict@gov.in ಇ-ಮೇಲ್ ನಲ್ಲಿ ಕೂಡ ಸಂಪರ್ಕಿಸಬಹುದು. ಆದರೆ ಇಲ್ಲಿಯೂ ಕೂಡ ನಿಮಗೆ ಸೂಕ್ತ ಮಾಹಿತಿ ಲಭ್ಯವಾಗದಿದ್ದರೆ 011-23381092 (Direct HelpLine) ಸಂಖ್ಯೆಗೆ ಕರೆ ಮಾಡಿ.

ಇದನ್ನೂ ಓದಿ- PM Kisan: 6000 ವಾರ್ಷಿಕ ಕಂತುಗಳೊಂದಿಗೆ 3000 ರೂ.ಗಳ ಮಾಸಿಕ ಪಿಂಚಣಿಯನ್ನು ಈ ರೀತಿ ಪಡೆಯಿರಿ

ಕೃಷಿ ಸಚಿವಾಲಯಕ್ಕೆ ದೂರು ನೀಡಿ:
ಕೃಷಿ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಹಣವು ರೈತರ ಬ್ಯಾಂಕ್ ಖಾತೆಗೆ ತಲುಪದಿದ್ದರೆ, ಅದನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ರೈತರ ಖಾತೆಗೆ ಹಣ ತಲುಪದಿದ್ದರೆ ಅಥವಾ ಯಾವುದೇ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಕೃಷಿ ಸಚಿವಾಲಯಕ್ಕೆ ದೂರು ನೀಡಿದರೆ ತಕ್ಷಣವೇ ಅದನ್ನು ಸರಿಪಡಿಸಲಾಗುತ್ತದೆ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತರು ಪಡೆಯಬೇಕು ಎಂದು ಸರ್ಕಾರವು ಆಶಿಸುತ್ತದೆ.

ನೀವು ಕೂಡ ಇಲ್ಲಿ ಸಂಪರ್ಕಿಸಬಹುದು:
ಈ ಯೋಜನೆಯಲ್ಲಿ ನಿಮ್ಮ ಖಾತೆ ಸ್ಥಿತಿಯನ್ನು ನೀವೇ ಪರಿಶೀಲಿಸಬಹುದು ಮತ್ತು ಅರ್ಜಿ ಸಲ್ಲಿಸಬಹುದು. ಯೋಜನೆಯ ರೈತ ಕಲ್ಯಾಣ ವಿಭಾಗದಲ್ಲಿ ನೀವು ಸಂಪರ್ಕಿಸಬಹುದು. ಈವರೆಗೆ ನಿಮ್ಮ ಖಾತೆಗೆ ಹಣ ಬಂದಿಲ್ಲದಿದ್ದರೆ, ನೀವು ಅದರ ಬಗ್ಗೆ ದೂರು ನೀಡಬಹುದು. ಪಿಎಂ ಕಿಸಾನ್ ಸಮ್ಮನ್ ಸಹಾಯವಾಣಿ ಸಂಖ್ಯೆಯಲ್ಲಿ ನೀವು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಬಹುದು. 

ಇದನ್ನೂ ಓದಿ- PM Kisan Scheme Mobile App: ಪಿಎಂ ಕಿಸಾನ್ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಬಹುದು

ಸಚಿವಾಲಯವನ್ನು ಸಂಪರ್ಕಿಸುವ ಸೌಲಭ್ಯ  (Agriculture ministry helpline numbers)
- PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
- PM ಕಿಸಾನ್ ಸಹಾಯವಾಣಿ ಸಂಖ್ಯೆ: 155261
- PM ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011—23381092, 23382401
- ಪಿಎಂ ಕಿಸಾನ್ ಅವರ ಹೊಸ ಸಹಾಯವಾಣಿ: 011-24300606
- ಪಿಎಂ ಕಿಸಾನ್ ಇನ್ನೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109
- ಇ-ಮೇಲ್ ID: pmkisan-ict@gov.in
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News