PM Kisan: ರೈತರಿಗೆ ದೀಪಾವಳಿ ಉಡುಗೊರೆ, ಇಂದು ಖಾತೆ ಸೇರಲಿದೆ 4 ಸಾವಿರ ರೂ.

PM Kisan Update: ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಉಡುಗೊರೆ ಸಿಗಲಿದೆ.  ಪ್ರಧಾನಿ ಮೋದಿ ಇಂದು 10 ಕೋಟಿಗೂ ಹೆಚ್ಚು ರೈತರ ಖಾತೆಗೆ 2-2 ಸಾವಿರ ರೂಪಾಯಿಗಳನ್ನು ವರ್ಗಾಯಿಸಲಿದ್ದಾರೆ. ಈ ಹಣವನ್ನು ಪಿಎಂ ಕಿಸಾನ್‌ನ 12 ನೇ ಕಂತಿನ ರೂಪದಲ್ಲಿ ಫಲಾನುಭವಿಗಳಿಗೆ ಲಭ್ಯವಾಗಲಿದೆ.  

Written by - Yashaswini V | Last Updated : Oct 17, 2022, 08:37 AM IST
  • ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತು ಇಂದು ಅಕ್ಟೋಬರ್ 17 ರಂದು ಲಭ್ಯವಾಗಲಿದೆ.
  • ಪ್ರಧಾನಿ ಮೋದಿ ಅವರು ರೈತರಿಗೆ 12 ನೇ ಕಂತು ಬಿಡುಗಡೆ ಮಾಡಲಿದ್ದಾರೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
  • ಹತ್ತು ಕೋಟಿಗೂ ಹೆಚ್ಚು ರೈತರು ಇದರಿಂದ ಲಾಭ ಪಡೆಯಲಿದ್ದಾರೆ.
PM Kisan: ರೈತರಿಗೆ ದೀಪಾವಳಿ ಉಡುಗೊರೆ, ಇಂದು ಖಾತೆ ಸೇರಲಿದೆ 4 ಸಾವಿರ ರೂ.  title=
PM Kisan 12th installment

PM Kisan 12th Installment: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ ಇಂದು ಮೋದಿ ಸರ್ಕಾರದಿಂದ ದೀಪಾವಳಿ ಉಡುಗೊರೆ ಲಭ್ಯವಾಗಲಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 10 ಕೋಟಿಗೂ ಹೆಚ್ಚು ರೈತರ ಖಾತೆಗೆ 2-2 ಸಾವಿರ ರೂಪಾಯಿಗಳನ್ನು ವರ್ಗಾಯಿಸಲಿದ್ದಾರೆ. ಈ ಹಣವನ್ನು ಪಿಎಂ ಕಿಸಾನ್‌ನ 12 ನೇ ಕಂತಿನ ರೂಪದಲ್ಲಿ ಫಲಾನುಭವಿಗಳಿಗೆ ಲಭ್ಯವಾಗಲಿದೆ.  

ಅಕ್ಟೋಬರ್ 17 ರಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್), ಪುಸಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 17 ರಂದು 'ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022' ರ ಎರಡು ದಿನಗಳ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.  ಈ ಸಂದರ್ಭದಲ್ಲಿ ಅವರು ರೈತರು ಮತ್ತು ಕೃಷಿ ಸ್ಟಾರ್ಟಪ್‌ಗಳು, ಸಂಶೋಧಕರು, ನೀತಿ ನಿರೂಪಕರು, ಬ್ಯಾಂಕರ್‌ಗಳು ಮತ್ತು ಇತರ ಮಧ್ಯಸ್ಥಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ರೈತರಿಗೆ 12 ನೇ ಕಂತು ಬಿಡುಗಡೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಡಿಬಿಟಿಯಿಂದ 16 ಸಾವಿರ ಕೋಟಿ ಹಣವನ್ನು  ರೈತರ ಖಾತೆಗೆ ವರ್ಗಾಯಿಸಲಿದ್ದಾರೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.  

ಇದನ್ನೂ ಓದಿ- PMVVY: ವಿವಾಹಿತರಿಗೆ ಮಾಸಿಕವಾಗಿ 10,000 ರೂ.ಪಿಂಚಣಿ ನೀಡಲಿದೆ ಮೋದಿ ಸರ್ಕಾರ

ಅಂತಹ ರೈತರಿಗೆ ಖಾತೆ ಸೇರಲಿದೆ 4000 ರೂ.
ಪಿಎಂ ಕಿಸಾನ್ ಯೋಜನೆಯಲ್ಲಿ ಇ-ಕೆವೈಸಿ  ಪೂರ್ಣಗೊಳಿಸದ ರೈತರಿಗೆ 12ನೇ ಕಂತಿನ ಹಣವನ್ನು ನೀಡಲಾಗುವುದಿಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ನಿಮ್ಮ e-KYC ಅನ್ನು ನೀವು ಪೂರ್ಣಗೊಳಿಸದಿದ್ದರೆ, ಶೀಘ್ರದಲ್ಲೇ ಅದನ್ನು ಮಾಡಿ. 31ನೇ ಮೇ 2022 ರಂದು ಸರ್ಕಾರದಿಂದ ನೀಡಲಾದ 2000 ರೂ.ಗಳನ್ನು ನೀವು ಪಡೆಯಲು ಸಾಧ್ಯವಾಗದಿದ್ದರೆ, ಈ ಬಾರಿ ಅಕ್ಟೋಬರ್ 17 ರಂದು (ಸೋಮವಾರ) ನಿಮ್ಮ ಖಾತೆಗೆ 4000 ರೂ. ಸೇರಲಿದೆ. 

ಇದನ್ನೂ ಓದಿ- EPFO Update : PF ಖಾತೆದಾರರಿಗೆ ಸಿಹಿ ಸುದ್ದಿ : ಈ ದಿನ ಸರ್ಕಾರದಿಂದ ನಿಮ್ಮ ಖಾತೆಗೆ ₹81,000!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪಿಎಂ ಕಿಸಾನ್ ಸ್ಟೇಟಸ್ ಪರಿಶೀಲಿಸಲು ಹಂತ-ಹಂತದ ಪ್ರಕ್ರಿಯೆ:-
* ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಿಂದ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
* ನಿಮ್ಮ Android ಸಾಧನದಲ್ಲಿ, ನೇರವಾಗಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಅಲ್ಲಿಯೂ ಪಿಎಂ ಕಿಸಾನ್ ಅಪ್ಲಿಕೇಶನ್ ಎಂದು ಟೈಪ್ ಮಾಡಿ  ಅದನ್ನು ಡೌನ್‌ಲೋಡ್ ಮಾಡಿ.
* ಅದರ ನಂತರ, ಫಲಾನುಭವಿಯ ಸ್ಥಿತಿಯನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ.
* ಈ ಮೂಲಕ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News