Petrol Price Today : ಇಂದು ಮತ್ತೆ ಅಗ್ಗವಾಗಿದೆಯೆ ಪೆಟ್ರೋಲ್ - ಡೀಸೆಲ್ ಬೆಲೆ? ಇಂದಿನ ದರ ಇಲ್ಲಿ ಪರಿಶೀಲಿಸಿ

ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರ ನಂತರ, ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್‌ನಿಂದ ವ್ಯಾಟ್ ಅನ್ನು ಸಹ ಕಡಿಮೆ ಮಾಡಿತು.

Written by - Channabasava A Kashinakunti | Last Updated : May 29, 2022, 07:23 AM IST
  • ಪೆಟ್ರೋಲ್ - ಡೀಸೆಲ್ ಬೆಲೆ ಇಳಿಕೆ ಮಾಡಿದೆ ಸರ್ಕಾರ
  • ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ ಇಲ್ಲಿ ತಿಳಿಯಿರಿ
  • ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರ ಜಾರಿ
Petrol Price Today : ಇಂದು ಮತ್ತೆ ಅಗ್ಗವಾಗಿದೆಯೆ ಪೆಟ್ರೋಲ್ - ಡೀಸೆಲ್ ಬೆಲೆ? ಇಂದಿನ ದರ ಇಲ್ಲಿ ಪರಿಶೀಲಿಸಿ title=

Petrol-Diesel Price Today 26th May : ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರವು ಜನರ ಸಮಸ್ಯೆಗಳನ್ನು ಹೆಚ್ಚಿಸಿದೆ. ಈ ನಡುವೆ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನತೆಗೆ ಬಿಗ್ ರಿಲೀಫ್ ನೀಡಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರ ನಂತರ, ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್‌ನಿಂದ ವ್ಯಾಟ್ ಅನ್ನು ಸಹ ಕಡಿಮೆ ಮಾಡಿತು.

ಪೆಟ್ರೋಲ್ - ಡೀಸೆಲ್ ಬೆಲೆ ಇಳಿಕೆ ಮಾಡಿದೆ ಸರ್ಕಾರ

ಮೇ 21 ರಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 8 ರೂ. ಮತ್ತು ಡೀಸೆಲ್ ಮೇಲಿನ 6 ರೂ. ಕಡಿತಗೊಳಿಸಿದೆ. ಅದರ ನಂತರ ಪೆಟ್ರೋಲ್ ಬೆಲೆ ಲೀಟರ್‌ಗೆ 9.50 ರೂ. ಮತ್ತು ಡೀಸೆಲ್ 7 ರೂ..ನಷ್ಟು ಕಡಿಮೆಯಾಯಿತು. ಕೇಂದ್ರ ಸರ್ಕಾರದ ಈ ನಿರ್ಧಾರದ ನಂತರ ಕೆಲವು ರಾಜ್ಯಗಳು ಕೂಡ ಮುಂದೆ ಬಂದು ಅಬಕಾರಿ ಸುಂಕ ಮಾಡಿದವು. ಮಹಾರಾಷ್ಟ್ರ, ಕೇರಳ ಮತ್ತು ರಾಜಸ್ಥಾನ ಸರ್ಕಾರವು ಪೆಟ್ರೋಲ್-ಡೀಸೆಲ್‌ನಿಂದ ವ್ಯಾಟ್ ಅನ್ನು ಕಡಿಮೆ ಮಾಡಿದೆ (ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಕಡಿತ).

ಇದನ್ನೂ ಓದಿ : ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿನ ನಕಲಿ ವಿಮರ್ಶೆಗಳನ್ನು ಪರಿಶೀಲಿಸಲು ಕ್ರಮ- ಕೇಂದ್ರ ಸರ್ಕಾರ

ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ ಇಲ್ಲಿ ತಿಳಿಯಿರಿ

- ದೆಹಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ.
- ಮುಂಬೈ ಪೆಟ್ರೋಲ್ 111.35 ರೂ ಮತ್ತು ಡೀಸೆಲ್ ಲೀಟರ್‌ಗೆ 97.28 ರೂ.
- ಚೆನ್ನೈ ಪೆಟ್ರೋಲ್ 102.63 ರೂ ಮತ್ತು ಡೀಸೆಲ್ ಲೀಟರ್‌ಗೆ 94.24 ರೂ.
- ಕೋಲ್ಕತ್ತಾ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ.
- ನೋಯ್ಡಾದಲ್ಲಿ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ ಲೀಟರ್‌ಗೆ 89.96 ರೂ.
- ಲಕ್ನೋದಲ್ಲಿ ಪೆಟ್ರೋಲ್ ರೂ 96.57 ಮತ್ತು ಡೀಸೆಲ್ ಲೀಟರ್‌ಗೆ 89.76 ರೂ.
- ಜೈಪುರದಲ್ಲಿ ಪೆಟ್ರೋಲ್ 108.48 ರೂ ಮತ್ತು ಡೀಸೆಲ್ ಲೀಟರ್‌ಗೆ 93.72 ರೂ.
- ತಿರುವನಂತಪುರದಲ್ಲಿ ಪೆಟ್ರೋಲ್ 107.71 ರೂ ಮತ್ತು ಡೀಸೆಲ್ ಲೀಟರ್‌ಗೆ 96.52 ರೂ.
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ರೂ 84.10 ಮತ್ತು ಡೀಸೆಲ್ ಲೀಟರ್‌ಗೆ 79.74 ರೂ.
- ಪಾಟ್ನಾದಲ್ಲಿ ಪೆಟ್ರೋಲ್ ರೂ 107.24 ಮತ್ತು ಡೀಸೆಲ್ ಲೀಟರ್‌ಗೆ 94.04 ರೂ.
- ಗುರುಗ್ರಾಮದಲ್ಲಿ 97.18 ರೂ. ಮತ್ತು ಡೀಸೆಲ್ ಲೀಟರ್‌ಗೆ 90.05 ರೂ.
- ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ ಮತ್ತು ಡೀಸೆಲ್ ಲೀಟರ್‌ಗೆ 87.89 ರೂ.
- ಭುವನೇಶ್ವರದಲ್ಲಿ ಪೆಟ್ರೋಲ್ ರೂ 103.19 ಮತ್ತು ಡೀಸೆಲ್ ಲೀಟರ್‌ಗೆ 94.76 ರೂ.
- ಚಂಡೀಗಢದಲ್ಲಿ ಪೆಟ್ರೋಲ್ 96.20 ರೂ ಮತ್ತು ಡೀಸೆಲ್ ಲೀಟರ್‌ಗೆ 84.26 ರೂ.
- ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66 ರೂ ಮತ್ತು ಡೀಸೆಲ್ ಲೀಟರ್‌ಗೆ 97.82 ರೂ.

ಇದನ್ನೂ ಓದಿ : e-Commerce ತಾಣಗಳ ಮೇಲೆ ನಕಲಿ ವಿಮರ್ಶೆ ಬರೆಯುವವರೇ ಎಚ್ಚರ! ಸರ್ಕಾರ ಕೈಗೊಳ್ಳುತ್ತಿದೆ ಈ ಕ್ರಮ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರ ಜಾರಿ

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನವೀಕರಿಸುತ್ತವೆ. ಇದಾದ ನಂತರವೇ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ಬಿಡುಗಡೆ ಮಾಡಲಾಗುತ್ತದೆ. ನೀವು SMS ಮೂಲಕ ನಿಮ್ಮ ಮೊಬೈಲ್‌ನಿಂದ ಪೆಟ್ರೋಲ್ ಮತ್ತು ಡೀಸೆಲ್‌ನ ಇತ್ತೀಚಿನ ಬೆಲೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಮತ್ತು BPCL ಗ್ರಾಹಕರು 9223112222 ಸಂಖ್ಯೆಗೆ RSP ಎಂದು ಬರೆಯುವ ಮೂಲಕ SMS ಕಳುಹಿಸಬೇಕಾಗುತ್ತದೆ. ಇದಲ್ಲದೇ, HPCL ಗ್ರಾಹಕರು 9222201122 ಸಂಖ್ಯೆಗೆ HPPrice ಅನ್ನು ಕಳುಹಿಸುವ ಮೂಲಕ ಇತ್ತೀಚಿನ ದರವನ್ನು ತಿಳಿದುಕೊಳ್ಳಬಹುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News