Aadhaarಗೆ ಸಂಬಂಧಿಸಿದ ಈ ಕೆಲಸ ಮುಗಿಸದೇ ಹೋದರೆ ಬೀಳಲಿದೆ ಭಾರೀ ದಂಡ ..!

PAN-Aadhaar Link: ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮಾರ್ಚ್  31 ಗೆ ಅವಕಾಶದೆ. ವಿ ನೀವು ಇದನ್ನು ಮಾಡದಿದ್ದರೆ, ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

Written by - Ranjitha R K | Last Updated : Mar 25, 2022, 03:57 PM IST
  • ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ
  • ಮಾರ್ಚ್ 31 ಈ ಕೆಲಸ ಮಾಡಲು ಕೊನೆಯ ದಿನವಾಗಿದೆ
  • ಅಮಾನ್ಯ PAN ಬಳಕೆಗೆ ದಂಡ ವಿಧಿಸಲಾಗುತ್ತದೆ
Aadhaarಗೆ ಸಂಬಂಧಿಸಿದ ಈ ಕೆಲಸ ಮುಗಿಸದೇ ಹೋದರೆ ಬೀಳಲಿದೆ ಭಾರೀ ದಂಡ ..! title=
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ (file photo)

ನವದೆಹಲಿ : ಆಧಾರ್‌ನೊಂದಿಗೆ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕ ಆಗಿದೆ. ಇನ್ನೂ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ತಕ್ಷಣ ಆ ಕೆಲಸ ಮಾಡಿ ಮುಗಿಸಿ. ಪ್ಯಾನ್-ಆಧಾರ್ ಲಿಂಕ್ (Aadhaar Pan Link)ಮಾಡುವುದು ಕಡ್ಡಾಯ. ಇಲ್ಲದಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

Central board of direct taxes (CBDT) ಆಧಾರ್‌ನೊಂದಿಗೆ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡುವ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದೆ. ಕೆಲವೊಂದು ಕೆಲಸಗಳನ್ನು ಪೂರ್ತಿಗೊಳಿ ಸಬೇಕಾದರೆ  ಪ್ಯಾನ್  ಸಂಖ್ಯೆ (PAN Number) ಅಗತ್ಯವಿರುತ್ತದೆ. ಒಂದು ವೇಳೆ ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದೇ ಹೋದರೆ, ಆ   ಪ್ಯಾನ್ ಸಂಖ್ಯೆಯನ್ನು ಬಳಸುವುದು ಸಾಧ್ಯವಾಗುವುದಿಲ್ಲ.   ಅಮಾನ್ಯವಾದ ಪ್ಯಾನ್ ಅನ್ನು ಎಲ್ಲಿಯಾದರೂ ಬಳಸಿದರೆ, ದಂಡ ಕೂಡಾ ವಿಧಿಸಬಹುದು. 

ಇದನ್ನೂ ಓದಿ : PM Kisan: ರೈತರಿಗೆ ನೆಮ್ಮದಿಯ ಸುದ್ದಿ ! ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಸಮಯ ವಿಸ್ತರಣೆ

PAN ಲಿಂಕ್ ಮಾಡದಿದ್ದರೆ ಏನಾಗುತ್ತದೆ ? :
1. ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಮಾತ್ರವಲ್ಲ, ನಿಮ್ಮ KYC ಸಹ ಅಮಾನ್ಯವಾಗಿರುತ್ತದೆ.
2. ಅಮಾನ್ಯ PAN ನ ಬಳಕೆಯು ಅಪರಾಧ. ಇದಕ್ಕಾಗಿ ನಿಮಗೆ 1 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ದಂಡ ವಿಧಿಸಬಹುದು.
3. ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣವನ್ನು ಹೂಡಿಕೆ ಮಾಡುವಾಗಲೂ,  ಪ್ಯಾನ್ ಕಡ್ಡಾಯವಾಗಿದೆ. PAN ಅಮಾನ್ಯವಾದರೆ, SIP ಅಥವಾ ಬೇರೆ ಯಾವುದೇ ರೀತಿಯಲ್ಲಿ MF ನಲ್ಲಿ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
4. ನೀವು ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಅಥವಾ 50,000 ರೂ.ಗಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಲು / ಹಿಂಪಡೆಯಲು  ಪ್ಯಾನ್ ಅಗತ್ಯವಿದೆ.
5.  5 ಲಕ್ಷಕ್ಕಿಂತ ಹೆಸಚಿನ ಮೌಲ್ಯದ ಆಭರಣಗಳನ್ನು ಖರೀದಿಸಿದರೆ, ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು. ಅಮಾನ್ಯವಾದ ಪ್ಯಾನ್ ಕಾರ್ಡ್‌ನೊಂದಿಗೆ ಆಭರಣಗಳನ್ನು ಖರೀದಿಸಲು ಸಾಧ್ಯವಿಲ್ಲ.
6.  5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ವಾಹನವನ್ನು ಖರೀದಿಸುವಾಗ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು. ಹಾಗಾಗಿ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ,  ಕಾರನ್ನು ಖರೀದಿಸಲು ಸಹ ಸಾಧ್ಯವಿಲ್ಲ.

PAN ಎಲ್ಲಿ ಅಗತ್ಯವಿದೆ?
ಇಂದಿನ ಕಾಲದಲ್ಲಿ ಭಾರತದಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಮಹತ್ವದ ಕೆಲಸ ಮಾಡುವುದು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯಲು, MF ಅಥವಾ ಷೇರುಗಳಲ್ಲಿ ಹೂಡಿಕೆ ಮಾಡಲು ಮತ್ತು 50,000 ರೂ.ಗಿಂತ ಹೆಚ್ಚಿನ ನಗದು ವಹಿವಾಟಿಗೆ ಪ್ಯಾನ್ ಕಾರ್ಡ್ ಅಗತ್ಯ. 

ಇದನ್ನೂ ಓದಿ: ನಾಳೆಯಿಂದ ನಾಲ್ಕು ದಿನ ಬ್ಯಾಂಕ್ ಬಂದ್..! ಇಂದೇ ಪೂರೈಸಿಕೊಳ್ಳಿ ಅಗತ್ಯ ಕೆಲಸ

 ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ? :
ಪ್ಯಾನ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ (PAN Aadhaar Link)ಮಾಡಲು ಬಯಸುವ ತೆರಿಗೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567678 ಅಥವಾ 56161 ಗೆ SMS ಕಳುಹಿಸಬೇಕಾಗುತ್ತದೆ. ಇದರ ಫಾರ್ಮ್ಯಾಟ್ UIDPAN<ಸ್ಪೇಸ್> <12 ಅಂಕಿ ಆಧಾರ್ ಕಾರ್ಡ್ ನಂಬರ್ >ಸ್ಪೇಸ್> <10 ಅಂಕಿಯ PAN> ನಂತರ ಅದನ್ನು 567678 ಅಥವಾ 56161 ಗೆ ಕಳುಹಿಸಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News