Aadhar Card: ಬರೀ ಒಂದು ಕರೆ ಮೂಲಕ ನಿಮ್ಮ 'ಆಧಾರ್' ಸಮಸ್ಯೆಗೆಗಳಿಗೆ ಪರಿಹಾರ..!

ಸದ್ಯ ಆಧಾರ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ನವೀಕರಿಸುವುದು ಇನ್ಮುಂದೆ ಮತ್ತಷ್ಟು ಸುಲಭ

Last Updated : Feb 4, 2021, 03:15 PM IST
  • ಸದ್ಯ ಆಧಾರ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ನವೀಕರಿಸುವುದು ಇನ್ಮುಂದೆ ಮತ್ತಷ್ಟು ಸುಲಭ
  • ಆಧಾರ್ ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆ ಬಗೆಹರಿಸಲು ಯುಡಿಎಐ ಸಹಾಯವಾಣಿ ಪ್ರಾರಂಭಿಸಿದೆ. ಸಹಾಯವಾಣಿ ಸಂಖ್ಯೆ 1947.
  • ಇದು 12 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮೀಸ್ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯ
Aadhar Card: ಬರೀ ಒಂದು ಕರೆ ಮೂಲಕ ನಿಮ್ಮ 'ಆಧಾರ್' ಸಮಸ್ಯೆಗೆಗಳಿಗೆ ಪರಿಹಾರ..! title=

ಸದ್ಯ ಆಧಾರ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ನವೀಕರಿಸುವುದು ಇನ್ಮುಂದೆ ಮತ್ತಷ್ಟು ಸುಲಭವಾಗಿದೆ. ಆಧಾರ್ ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆ ಬಗೆಹರಿಸಲು ಯುಡಿಎಐ ಸಹಾಯವಾಣಿ ಪ್ರಾರಂಭಿಸಿದೆ. ಸಹಾಯವಾಣಿ ಸಂಖ್ಯೆ 1947.

ಇದು 12 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮೀಸ್ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ ಎಂದು ಯುಐಡಿಎಐ ಟ್ವೀಟ್ ಮಾಡಿದೆ. ಆಧಾರ್(Aadhar card)‌ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗೆ ಇಲ್ಲಿ ಪರಿಹಾರ ಸಿಗಲಿದೆ.

SBIನ ಈ ನಿರ್ಧಾರದಿಂದ ಕೋಟ್ಯಾಂತರ ಗ್ರಾಹಕರಿಗೆ ಸಿಗಲಿದೆ ಪ್ರಯೋಜನ

ಡೆಬಿಟ್-ಕ್ರೆಡಿಟ್ ಕಾರ್ಡ್ ನಂತೆ ಕಾಣುವ ಹೊಸ ಆಧಾರ್ ಕಾರ್ಡ್ ದುಬಾರಿಯಲ್ಲ. ಜನಸಾಮಾನ್ಯರ ದೃಷ್ಟಿಯಿಂದ ಯುಐಡಿಎಐ ಇದ್ರ ಶುಲ್ಕವನ್ನು 50 ರೂಪಾಯಿಗೆ ನಿಗದಿಪಡಿಸಿದೆ. ಉಳಿದ ಆಧಾರ್ ಗಿಂತ ಪಿವಿಸಿ ಬೇಸ್ ಆಧಾರ್ ಹೆಚ್ಚು ಸುರಕ್ಷಿತವಾಗಿದೆ. ಪಿವಿಸಿ ಆಧಾರ್ ಕಾರ್ಡ್ ಬಹಳ ಕಾಲ ಉಳಿಯುತ್ತದೆ. ಇದು ಆಕರ್ಷಕವಾಗಿದೆ.

LPG Cylinders Price: ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ಶಾಕ್

ಮೊದಲು https://resident.uidai.gov.in/ ಗೆ ಹೋಗಬೇಕು. ಅಲ್ಲಿ My Aadhaar Section ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಗೆಟ್ ಆಧಾರ್ ವಿಭಾಗದಲ್ಲಿ Order Aadhar PVC Card ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿ ಹಾಕಬೇಕು. ನಂತ್ರ ಸೆಕ್ಯೂರಿಟಿ ಬಾಕ್ಸ್ ಗೆ ಹೋಗಿ ಒಟಿಪಿಗೆ ಮನವಿ ಸಲ್ಲಿಸಬೇಕು. ಮೊಬೈಲ್ ಗೆ ಒಟಿಪಿ ಬರುತ್ತದೆ. ಅಲ್ಲಿ ಒಟಿಪಿ ಹಾಕಬೇಕು. ನಂತ್ರ ಪೇಮೆಂಟ್ ಆಯ್ಕೆಗೆ ಹೋಗಿ 50 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ನಂತ್ರ ನಿಮ್ಮ ನೋಂದಾಯಿತ ನಂಬರ್ ಗೆ ಮಾಹಿತಿ ಬರಲಿದೆ. ಕೆಲ ದಿನಗಳ ನಂತ್ರ ನೀವು ನೀಡಿದ ವಿಳಾಸಕ್ಕೆ ಆಧಾರ್ ಕಾರ್ಡ್ ಬರಲಿದೆ.

PF alert! EPFO ಸದಸ್ಯರಿಗೆ ಬಿಗ್ ರಿಲೀಫ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News