Buy Gold in 1 Rs: ಈ ದೀಪಾವಳಿಯಂದು, ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಿ

Buy Gold in 1 Rs: ಈ ದೀಪಾವಳಿ ಅಥವಾ ಧಂತೇರಾಸ್ ನಲ್ಲಿ ನೀವು ಕೇವಲ 1 ರೂಪಾಯಿಗೆ ಚಿನ್ನವನ್ನು ಖರೀದಿಸಬಹುದು. ಈ ಚಿನ್ನವು ಸಂಪೂರ್ಣವಾಗಿ ಶುದ್ಧ ಮತ್ತು ಸುರಕ್ಷಿತವಾಗಿರುತ್ತದೆ. 1 ರೂಪಾಯಿಯಲ್ಲಿ ಚಿನ್ನವನ್ನು ಹೇಗೆ ಖರೀದಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಲಿದ್ದೇವೆ.

Written by - Yashaswini V | Last Updated : Oct 22, 2021, 01:55 PM IST
  • ನೀವು 1 ರೂಪಾಯಿಗೆ ಶುದ್ಧ ಚಿನ್ನವನ್ನು ಖರೀದಿಸಲು ಸಾಧ್ಯವಾಗುತ್ತದೆ
  • ಮನೆಯಲ್ಲಿ ಕುಳಿತು ಫೋನಿನಿಂದ ಶಾಪಿಂಗ್ ಮಾಡಬಹುದು
  • ಚಿನ್ನವನ್ನು ಬೇರೆಯವರಿಗೆ ಉಡುಗೊರೆಯಾಗಿ ಸಹ ನೀಡಬಹುದು
Buy Gold in 1 Rs: ಈ ದೀಪಾವಳಿಯಂದು, ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಿ title=
Buy Gold in 1 Rs: ಈ ದೀಪಾವಳಿಯಂದು, ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಿ

Digital Gold: ಧಂತೇರಾಸ್ ಅಥವಾ ದೀಪಾವಳಿಯಲ್ಲಿ ಚಿನ್ನವನ್ನು ಖರೀದಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಈ ಹಬ್ಬದ ಸಮಯದಲ್ಲಿ ಬಹಳಷ್ಟು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲಾಗುತ್ತದೆ. ಈ ಹಬ್ಬದಂದು ನೀವು ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ನೀವು ಕೇವಲ 1 ರೂಪಾಯಿಗೆ ಚಿನ್ನವನ್ನು ಖರೀದಿಸಬಹುದು. 1 ರೂಪಾಯಿಯಲ್ಲಿ ಚಿನ್ನವನ್ನು ಹೇಗೆ ಖರೀದಿಸಬಹುದು ಎಂದು ತಿಳಿಯಿರಿ.

ಈ ವೇದಿಕೆಗಳಲ್ಲಿ ನೀವು ಚಿನ್ನವನ್ನು ಖರೀದಿಸಬಹುದು:
ನೀವು 1 ರೂಪಾಯಿಗೆ ಚಿನ್ನವನ್ನು ಖರೀದಿಸಲು ಬಯಸಿದರೆ, ಡಿಜಿಟಲ್ ಚಿನ್ನವು (Digital Gold) ನಿಮಗೆ ಉತ್ತಮ ಆಯ್ಕೆಯಾಗಿದೆ. Google Pay, Paytm, PhonePe ನಂತಹ ಅನೇಕ ಮೊಬೈಲ್ ವ್ಯಾಲೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಕೇವಲ 1 ರೂ.ಗಳಿಗೆ ಚಿನ್ನವನ್ನು ಖರೀದಿಸಬಹುದು. ನೀವು GooglePay, Paytm, PhonePay ಅಥವಾ HDFC ಬ್ಯಾಂಕ್ ಸೆಕ್ಯುರಿಟೀಸ್ ಗ್ರಾಹಕರಾಗಿದ್ದರೆ, ಮೋತಿಲಾಲ್ ಓಸ್ವಾಲ್ ಆಗಿದ್ದರೆ, ನೀವು ಕೇವಲ 1 ರೂ.ಗೆ 999.9 ಪ್ಯೂರ್ ಸರ್ಟಿಫೈಡ್ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ, ಡಿಜಿಟಲ್ ಚಿನ್ನವು ಹೂಡಿಕೆಯ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ- Dhanteras 2021: ಧಂತೇರಾಸ್‌ನಲ್ಲಿ ಏನು ಖರೀದಿಸಬೇಕು, ಯಾವುದನ್ನು ಖರೀದಿಸಬಾರದು

ಡಿಜಿಟಲ್ ಚಿನ್ನವನ್ನು ಈ ರೀತಿ ಖರೀದಿಸಿ:
>> ಗೂಗಲ್ ಪೇ (Google Pay) ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಗಳನ್ನು ಮಾಡಲು, ಲಾಗಿನ್ ಆದ ನಂತರ ನೀವು ಕೆಳಗೆ ಸ್ಕ್ರಾಲ್ ಮಾಡಬೇಕು ಮತ್ತು ಗೋಲ್ಡ್ ಐಕಾನ್ ಮೇಲೆ ಕ್ಲಿಕ್ ಮಾಡಿ. 
ಇದರ ನಂತರ ನಿಮ್ಮ ಹಣವನ್ನು ನಿರ್ವಹಿಸುವಲ್ಲಿ ಚಿನ್ನವನ್ನು ಖರೀದಿಸಿ ಆಯ್ಕೆಯನ್ನು ಆರಿಸಿ. 
>> ಇಲ್ಲಿ ನೀವು ಒಂದು ರೂಪಾಯಿಯಲ್ಲೂ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು. ಆದರೆ 3 ರಷ್ಟು ಜಿಎಸ್‌ಟಿ ಕೂಡ ಇದರ ಮೇಲೆ ಪಾವತಿಸಬೇಕಾಗುತ್ತದೆ.
>> ನೀವು 5 ರೂಪಾಯಿಗಳ ಡಿಜಿಟಲ್ ಚಿನ್ನವನ್ನು ಖರೀದಿಸಿದರೆ ನಿಮಗೆ 0.9 ಮಿಗ್ರಾಂ ಸಿಗುತ್ತದೆ. 
>> ಖರೀದಿಯ ಹೊರತಾಗಿ, ಚಿನ್ನವು ಮಾರಾಟ, ವಿತರಣೆ ಮತ್ತು ಉಡುಗೊರೆಯ ಆಯ್ಕೆಯನ್ನು ಸಹ ಪಡೆಯುತ್ತದೆ. 
>> ನೀವು ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ, ನೀವು ಮಾರಾಟದ ಬಟನ್ ಅನ್ನು ಕ್ಲಿಕ್ ಮಾಡಬೇಕು, ಉಡುಗೊರೆಯಾಗಿ ನೀಡಲು ನೀವು ಉಡುಗೊರೆಯ ಆಯ್ಕೆಯನ್ನು ಆರಿಸಬೇಕಾಗುತ್ತದೆ.

ಇದನ್ನೂ ಓದಿ- Dhanteras 2021: ದೀಪಾವಳಿಯ ಹಿಂದಿನ ದಿನ ಈ ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಲಕ್ಷ್ಮೀಯ ಆಶೀರ್ವಾದ

ಚಿನ್ನದ ವಿತರಣೆಯ ಆಯ್ಕೆಯೂ ಇದೆ:
ಗ್ರಾಹಕರು ಚಿನ್ನದ ವಿತರಣೆಯ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ಅದನ್ನು ನಾಣ್ಯಗಳು ಅಥವಾ ಬಾರ್‌ಗಳ ರೂಪದಲ್ಲಿ ತಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಇದಕ್ಕಾಗಿ ನೀವು ಕನಿಷ್ಟ ಅರ್ಧ ಗ್ರಾಂ ಡಿಜಿಟಲ್ ಚಿನ್ನವನ್ನು ಹೊಂದಿರಬೇಕು. ಚಿನ್ನದ ಶುದ್ಧತೆ ಅಥವಾ ಸುರಕ್ಷತೆಯ ಬಗ್ಗೆ ಚಿಂತಿಸಬೇಕಿಲ್ಲ. ಏಕೆಂದರೆ ಇಲ್ಲಿ ಶುದ್ಧ ಚಿನ್ನ ಲಭ್ಯವಿರಲಿದೆ. ಆದರೆ ಎಚ್ಚರ, ನಕಲಿ ಅಪ್ಲಿಕೇಶನ್ ಗಳ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿಸಬೇಡಿ. ಜೊತೆಗೆ ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ಇದರ ಬಗ್ಗೆ ಹುಷಾರಾಗಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News