ಈಗ ಹಣ ಪಾವತಿಸದೇ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು, ಈ ಮಾರ್ಗವನ್ನು ಅಳವಡಿಸಿಕೊಂಡರೆ ಸಾಕು

ಯಾವುದಾದರೂ ಬೇರೆ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಯೋಜನೆ ಹಾಕಿದ್ದು, ಕೈಯಲ್ಲಿ ಹಣ ಇಲ್ಲದೇ ಹೋದರೆ, ಚಿಂತೆ ಮಾಡಬೇಕಿಲ್ಲ. ಕೈಯಲ್ಲಿ ಹಣವಿಲ್ಲದೇ ಹೋದರೂ ರೈಲಿನ ಟಿಕೆಟ್ ಬುಕ್ ಮಾಡುವುದು ಸಾಧ್ಯ.  

Written by - Ranjitha R K | Last Updated : Dec 22, 2021, 03:44 PM IST
  • ಈಗ ಉಚಿತವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು
  • ಬೈ ನೌ ಪೇ ಲೇಟರ್ ಆಯ್ಕೆ ಬಗ್ಗೆ ತಿಳಿಯಿರಿ
  • ಆಯ್ಕೆಯ ಅಡಿಯಲ್ಲಿ ಕಂಪನಿಗಳು ಖರೀದಿಗಳ ಮೇಲೆ ಸಾಲ ನೀಡುತ್ತವೆ
ಈಗ ಹಣ ಪಾವತಿಸದೇ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು, ಈ ಮಾರ್ಗವನ್ನು ಅಳವಡಿಸಿಕೊಂಡರೆ ಸಾಕು title=
ಬೈ ನೌ ಪೇ ಲೇಟರ್ ಆಯ್ಕೆ ಬಗ್ಗೆ ತಿಳಿಯಿರಿ (file photo)

ನವದೆಹಲಿ : ರೈಲ್ವೇ ಪ್ರಯಾಣಿಕರಿಗೊಂದು (Railway Passengers) ಬಹಳ ಪ್ರಮುಖವಾದ ಸುದ್ದಿಯಿದೆ. ಈಗ ನಿಮ್ಮ ಜೇಬಿನಲ್ಲಿ ಹಣವಿಲ್ಲದಿದ್ದರೂ ರೈಲಿನ ಟಿಕೆಟ್ (Train ticket book) ಪಡೆದುಕೊಳ್ಳಬಹುದು. ಯಾವುದಾದರೂ ಬೇರೆ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಯೋಜನೆ ಹಾಕಿದ್ದು, ಕೈಯಲ್ಲಿ ಹಣ ಇಲ್ಲದೇ ಹೋದರೆ, ಚಿಂತೆ ಮಾಡಬೇಕಿಲ್ಲ. ಕೈಯಲ್ಲಿ ಹಣವಿಲ್ಲದೇ ಹೋದರೂ ರೈಲಿನ ಟಿಕೆಟ್ ಬುಕ್ ಮಾಡುವುದು ಸಾಧ್ಯ. ಅಲ್ಲದೆ, ಹೋದ ಜಾಗದಲ್ಲಿ ಶಾಪಿಂಗ್ (Shopping) ಕೂಡಾ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಬೈ ನೌ ಪೇ ಲೇಟರ್ (Buy Now Pay Later)  ಆಯ್ಕೆಯು ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಶಾಪಿಂಗ್ ಮತ್ತು ಪ್ರಯಾಣವನ್ನು ಇಷ್ಟಪಡುವ ಜನರು ಅದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಭಾರತದ BNPL ಮಾರುಕಟ್ಟೆಯು 2026 ರ  45-50 ಅರಬ್ ಡಾಲರ್ ನಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ :  Sale: ಈ ಜಬರ್ದಸ್ತ್ 5G ಸ್ಮಾರ್ಟ್ ಫೋನ್ ರೂ.549ಕ್ಕೆ ಖರೀದಿಸಲು ಇಂದೇ ಕೊನೆಯ ದಿನ

'ಬೈ ನೌ ಪೇ ಲೇಟರ್' ಅಡಿಯಲ್ಲಿ, ಕಂಪನಿಗಳು ಖರೀದಿಗಳಿಗೆ ಸಾಲವನ್ನು ನೀಡುತ್ತವೆ. ಕ್ರೆಡಿಟ್ ಕಾರ್ಡ್  (Credit Card) ಹೊಂದಿಲ್ಲದ ಮತ್ತು ಇದ್ದಕ್ಕಿದ್ದಂತೆ ಏನನ್ನಾದರೂ ಖರೀದಿಸಬೇಕಾದ ಅನಿವಾರ್ಯತೆ ಬಂದಾಗ  ಆಯ್ಕೆ ಜನರಿಗೆ ಸಹಾಯವಾಗಲಿದೆ. ಈ ಆಯ್ಕೆಯನ್ನು ಬಳಸಿ ಈಗ ಟಿಕೆಟ್ ಕೂಡ ಬುಕ್ ಮಾಡಬಹುದು.  

ಬೈ ನೌ ಪೇ ಲೇಟರ್' ವೈಶಿಷ್ಟ್ಯಗಳು  :
1.ನಿಮ್ಮ ಬಳಿ ಹಣವಿಲ್ಲದಿದ್ದರೂ ನೀವು ಶಾಪಿಂಗ್ ಮಾಡಬಹುದು. 
2.ಇ-ಕಾಮರ್ಸ್ ಕಂಪನಿಗಳಲ್ಲಿನ ಖರೀದಿಗಳಿಗೆ 'ಬೈ ನೌ ಪೇ ಲೇಟರ್' ಆಯ್ಕೆಯು ಉತ್ತಮವಾಗಿದೆ.
3.ಇದು ಅಲ್ಪಾವಧಿ ಸಾಲವಾಗಿದೆ. 
4.ಕ್ರೆಡಿಟ್ ಕಾರ್ಡ್‌ಗಿಂತ ಅಗ್ಗದ ಸಾಲವನ್ನು ನೀಡುತ್ತದೆ. 
5.ಒಟ್ಟು ಖರೀದಿ ಮೊತ್ತದ ಸಣ್ಣ ಮುಂಗಡ ಪಾವತಿಯನ್ನು ಪಾವತಿಸಬೇಕಾಗುತ್ತದೆ. 
5.ಅಲ್ಪಾವಧಿಯವರೆಗೆ ಯಾವುದೇ ಶುಲ್ಕವಿರುವುದಿಲ್ಲ, ನಿಗದಿತ ದಿನಾಂಕದ ನಂತರ ಮಾತ್ರ ಬಡ್ಡಿಯನ್ನು ಪಾವತಿಸಬೇಕು.  
6.BPNL ಕಡಿಮೆ ವೆಚ್ಚ ಮತ್ತು ಹೆಚ್ಚು ಅನುಕೂಲಕರವಾಗಿದೆ.   
7. ಇದರಲ್ಲಿ ನೀವು ಒಟ್ಟು ಮೊತ್ತ ಅಥವಾ EMI ಪಾವತಿಸಬಹುದು 
8. ಖರೀದಿಸಿದ ದಿನಾಂಕದಿಂದ ಮುಂದಿನ 14 ರಿಂದ 20 ದಿನಗಳಲ್ಲಿ ಪಾವತಿಸಬಹುದು   . 
9. ನಿಗದಿತ ಸಮಯದಲ್ಲಿ ಪಾವತಿ ಮಾಡದಿದ್ದರೆ 24% ವರೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 
10.EMI ಆಯ್ಕೆಯಲ್ಲಿ, ಬಡ್ಡಿಯನ್ನು ಪಾವತಿಸಲು ಗ್ರಾಹಕರ ಮೇಲೆ ಯಾವುದೇ ಹೊರೆ ಇರುವುದಿಲ್ಲ. 
11. ಇ-ಕಾಮರ್ಸ್ ಕಂಪನಿಗಳು ಫಿನ್‌ಟೆಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. 

ಇದನ್ನೂ ಓದಿ : e-SHRAM card: ಇ-ಶ್ರಮ್ ಕಾರ್ಡ್‌ನಲ್ಲಿ ಎರಡು ಲಕ್ಷ ರೂ.ಗಳ ಉಚಿತ ವಿಮೆ ಸೌಲಭ್ಯ; ಯಾರಿಗೆ ಸಿಗಲಿದೆ ಇದರ ಪ್ರಯೋಜನ

'ಬೈ  ನೌ ಪೇ ಲೇಟರ್' ಉತ್ತಮ ಆಯ್ಕೆಯಾಗಿದೆ :
1.ಬ್ಯಾಂಕ್ ಗಳು, 20ಕ್ಕೂ ಹೆಚ್ಚು ಫಿನ್ ಟೆಕ್ ಕಂಪನಿಗಳು ಈ ಸೌಲಭ್ಯ ಒದಗಿಸುತ್ತಿವೆ. 
2.2025 ರ ವೇಳೆಗೆ, BNPL ಮಾರುಕಟ್ಟೆಯು 7.41 ಲಕ್ಷ ಕೋಟಿಗಳಷ್ಟು ಇರುತ್ತದೆ. 
3.ಇ-ಕಾಮರ್ಸ್‌ನಲ್ಲಿನ ಮಾರುಕಟ್ಟೆ ಪಾಲು 2024 ರ ವೇಳೆಗೆ 3% ರಿಂದ 9% ಕ್ಕೆ ಹೆಚ್ಚಾಗುತ್ತದೆ.  
4.ಈ ಆಯ್ಕೆಯು ಆಹಾರ, ಪ್ರಯಾಣ, ದಿನಸಿ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಸಹ ಜನಪ್ರಿಯವಾಗಿರುತ್ತದೆ. 
5. ಇದು ಕ್ರೆಡಿಟ್ ಕಾರ್ಡ್‌ಗಳಿಗೆ ಪರ್ಯಾಯವಾಗಿ ಉತ್ತಮ ಆಯ್ಕೆಯಾಗಿದೆ. 

ವಿವರಗಳು ಹೀಗಿರಲಿದೆ :

                                    credit card                      BNPL 
ಬಡ್ಡಿ ರಹಿತ ಅವಧಿ 45 ದಿನಗಳು   15-20 ದಿನಗಳು
ತಡವಾಗಿ ಪಾವತಿಗೆ ಬಡ್ಡಿ    40-48%          20-30%
ಮಿತಿ       ಯಾವುದೇ ಮಿತಿಇಲ್ಲ 2 ಸಾವಿರದಿಂದ ಒಂದು ಲಕ್ಷ
ಇಶ್ಯೂ ಪ್ರೋಸೆಸ್       ಕ್ರೆಡಿಟ್ ಸ್ಕೋರ್, ಆದಾಯ ಪುರಾವೆ        ಕ್ರೆಡಿಟ್ ಸ್ಕೋರ್, ಆದಾಯ ಪುರಾವೆ
ಎಲ್ಲಿ ಸ್ವೀಕರಿಸಲಾಗುತ್ತದೆ      ಎಲ್ಲಾ ಕಡೆಗಳಲ್ಲಿ                   ಕೆಲವು ಕಡೆಗಳಲ್ಲಿ ಮಾತ್ರ 

                                                
       
                                                   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News