ನವದೆಹಲಿ : ಗೌತಮ್ ಅದಾನಿ ಮತ್ತು ಡಾ ಸುಭಾಷ್ ಚಂದ್ರ ನಡುವಿನ ವ್ಯಾಪಾರ ಒಪ್ಪಂದದ ಸುದ್ದಿ ಸುಳ್ಳು ಎಂದು ಜೀ ಮೀಡಿಯಾ ಗ್ರೂಪ್ (Zee media group) ಸ್ಪಷ್ಟೀಕರಣ ನೀಡಿದೆ. ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದ ಈ ಸುದ್ದಿಯನ್ನು ಹರಡಿಸಲಾಗುತ್ತಿದೆ ಎಂದು ಅದು ಹೇಳಿದೆ.
ಜೀ ಮಿಡಿಯಾ (Zee Media) ಮತ್ತು ಅದಾನಿ ಸಮೂಹದ ನಡುವೆ ಯಾವುದೇ ವ್ಯವಹಾರಿಕ ಒಪ್ಪಂದದ ಮಾತುಕತೆಗಳು ಕೂಡಾ ನಡೆದಿಲ್ಲ. ಈ ಬಗ್ಗೆ ಹರಡುತ್ತಿರುವ ವದಂತಿಗಳು ಶುದ್ದ ಸುಳ್ಳು ಎಂದು ಜೀ ಮಿಡಿಯಾ ಹೇಳಿದೆ. ಜನರ ಮತ್ತು ತನ್ನ ಶೇರುದಾರರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಕಂಪನಿ ಈ ಸ್ಪಷ್ಟೀಕರಣ ನೀಡಿದೆ. ಸುಳ್ಳು ಸುದ್ದಿ ಹರಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜೀ ಮಿಡಿಯಾ ಸಮೂಹ, ಶೇರು ಪತ್ರ ವಿನಿಮಯ ಮಂಡಳಿಗೆ (SEBI) ಮನವಿ ಮಾಡಿದೆ.
ಇದನ್ನೂ ಓದಿ : Paytm offer : 4 ರೂಪಾಯಿ ಖರ್ಚು ಮಾಡಿದರೆ 100 ರೂಪಾಯಿ ಕ್ಯಾಶ್‌ಬ್ಯಾಕ್..!
ಮಾರಾಟದ ಬಗ್ಗೆ ಯಾವುದೇ ವದಂತಿಗಳು ಅಥವಾ ಮಾರಾಟದ ಬಗ್ಗೆ ಕೇಳಿಬರುತ್ತಿರುವ ಮಾತುಗಳು ಸತ್ಯಕ್ಕೆ ದೂರವಾದದ್ದು ಎಂದು ಸಂಸ್ಥೆ ಹೇಳಿದೆ. ಈ ವಿಷಯದ ಬಗ್ಗೆ ಗಮನಹರಿಸುವಂತೆ ಮತ್ತು ಸುಳ್ಳು ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ತನಿಖೆ ನಡೆಸುವಂತೆ Zee ಮೀಡಿಯಾ ಗ್ರೂಪ್ ಶೇರು ಪತ್ರ ವಿನಿಮಯ ಮಂಡಳಿಗೆ (SEBI)ವನ್ನು ವಿನಂತಿಸಿದೆ.
ಕಂಪನಿಯ ಮಾರಾಟಕ್ಕೆ ಸಂಬಂಧಿಸಿದ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎನ್ನುವುದನ್ನು ಸಂಸ್ಥೆ ಈ ಹಿಂದೆ ಕೂಡಾ ಸ್ಪಷ್ಟಪಡಿಸಿತ್ತು.
"ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ತನಿಖೆ ನಡೆಸುವಂತೆ ಶೇರು ಪತ್ರ ವಿನಿಮಯ ಮಂಡಳಿ (SEBI)ಯನ್ನು ಒತ್ತಾಯಿಸುತ್ತೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. Zee ಮೀಡಿಯಾ ಈ ಹಿಂದೆಯೂ ಇಂಥಹ ಈ ವರದಿಗಳನ್ನು ನಿರಾಕರಿಸಿತ್ತು. ಇದರ ಹೊರತಾಗಿಯೂ ಕೆಲವು ಬುಕ್ಕಿಗಳು ಇಂತಹ ವದಂತಿಗಳನ್ನು ಹರಡುತ್ತಿದ್ದಾರೆ. ಇತ್ತೀಚೆಗೆ ಪ್ರವರ್ತಕರು ಕಂಪನಿಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿದ್ದಾರೆ. ಷೇರು ವಾರಂಟ್‌ಗಳ ಮೂಲಕ ಪ್ರವರ್ತಕರು ಸಂಸ್ಥೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವುದನ್ನು ಸಂಸ್ಥೆ ಸ್ಪಷ್ಟ ಪಡಿಸಿದೆ.
ಇದನ್ನೂ ಓದಿ : EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.