Nitin Gadlkari: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

Nitin Gadlkari: ತಂತ್ರಜ್ಞಾನ ಹಾಗೂ ಹಸಿರು ಇಂಧನ ಕ್ಷೇತ್ರದಲ್ಲಿನ ಅಭಿವೃದ್ಧಿಯೊಂದಿಗೆ ಮುಂಬರುವ ದಿನಗಳಲ್ಲಿ ಇಲೆಕ್ಟ್ರಿಕ್ ಆಟೋಮೊಬೈಲ್ ಗಳ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ. ಅಷ್ಟೇ ಅಲ್ಲ ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳ ಬೆಲೆಗೆ ಸರಿಸಮನಾಗಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.  

Written by - Nitin Tabib | Last Updated : Aug 16, 2022, 01:15 PM IST
  • ಕಾರು ಹಾಗೂ ಬೈಕ್ ಪ್ರಿಯರಿಗೆ ಈ ಸುದ್ದಿ ಭಾರಿ ನೆಮ್ಮದಿಯ ಸುದ್ದಿಯೇ ಎಂದು ಹೇಳಬಹುದು.
  • ನೀವು ಸಹ ಕಾರು ಅಥವಾ ಬೈಕ್ ತೆಗೆದುಕೊಳ್ಳಲು ಯೋಜನೆ ರೂಪಿಸುತ್ತಿದ್ದರೆ,
  • ಸರ್ಕಾರದ ಈ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.
Nitin Gadlkari: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ title=
Niin Gadkari

Nitin Gadkari Statement: ಮುಂದಿನ ಒಂದು ವರ್ಷದೊಳಗೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗೆ ಸಮನಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪುನರುಚ್ಛರಿಸಿದ್ದಾರೆ . ಕಾರು ಹಾಗೂ ಬೈಕ್ ಪ್ರಿಯರಿಗೆ ಈ ಸುದ್ದಿ ಭಾರಿ ನೆಮ್ಮದಿಯ ಸುದ್ದಿಯೇ ಎಂದು ಹೇಳಬಹುದು. ನೀವು ಸಹ ಕಾರು ಅಥವಾ ಬೈಕ್ ತೆಗೆದುಕೊಳ್ಳಲು ಯೋಜನೆ ರೂಪಿಸುತ್ತಿದ್ದರೆ, ಸರ್ಕಾರದ ಈ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಕ್ರಾಂತಿ ಸಂಭವಿಸಲಿದೆ
ತಂತ್ರಜ್ಞಾನ ಮತ್ತು ಹಸಿರು ಇಂಧನದ ಅಭಿವೃದ್ಧಿಯೊಂದಿಗೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಆಟೋಮೊಬೈಲ್‌ಗಳ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಂದರೆ, ಸಾಮಾನ್ಯ ಜನರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಚಾಲಿತ ವಾಹನಗಳಿಗೆ ಸರಿಸಮವಾಗಲಿದೆ. ಮುಂದಿನ ದಿನಗಳಲ್ಲಿ ಇದು ಈ ಕ್ಷೇತ್ರದಲ್ಲಿ ಕ್ರಾಂತಿ ತರಬಹುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಮಾಲಿನ್ಯ ಇಡೀ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ
ಇದಲ್ಲದೆ, ಲೋಕಸಭೆಯಲ್ಲಿ ನಿತಿನ್ ಗಡ್ಕರಿ ಪರವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 2022-23 ರ ಅನುದಾನದ ಬೇಡಿಕೆಗಳ ಕುರಿತು ಉತ್ತರಿಸುವಾಗ, ಪರಿಣಾಮಕಾರಿ ಸ್ವದೇಶಿ ಇಂಧನ, ವಿದ್ಯುತ್ ಇಂಧನದತ್ತ ಸಾಗುವ ಅಗತ್ಯವಿದೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ ಇದು ವಾಸ್ತವಿಕ ರೂಪದಲ್ಲಿ ಬರಲಿದ್ದು. ಇದು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವಾದ್ಯಂತ ಮಾಲಿನ್ಯವು ದೊಡ್ಡ ಸವಾಲಾಗಿ ಹೊರಹೊಮ್ಮುತ್ತಿದೆ.

ಕೇಂದ್ರ ಸಚಿವರ ಮನವಿ
ಇದಲ್ಲದೆ ಸಂಸತ್ತಿನ ಎಲ್ಲಾ ಸಚಿವರುಗಳು ಹೈಡ್ರೋಜನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಗಡ್ಕರಿ ಅವರು ಒತ್ತಾಯಿಸಿದರು. ಸಂಸದರು ತಮ್ಮ ತಮ್ಮ ಪ್ರದೇಶದಲ್ಲಿ ಕೊಳಚೆ ನೀರನ್ನು ಹಸಿರು ಜಲಜನಕವನ್ನಾಗಿ ಪರಿವರ್ತಿಸಲು ಮುಂದಾಗಬೇಕು ಎಂದು ಅವರು ಹೇಳಿದ್ದಾರೆ. ಹೈಡ್ರೋಜನ್ ಶೀಘ್ರದಲ್ಲೇ ಅಗ್ಗದ ಇಂಧನ ಆಯ್ಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

'ಲಿಥಿಯಂ-ಐಯಾನ್ ಬ್ಯಾಟರಿಗಳ ಬೆಲೆ ವೇಗವಾಗಿ ಇಳಿಯುತ್ತಿದೆ ಎಂದು ಗಡ್ಕರಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರಸ್ತುತ ನಾವು ಜಿಂಕ್-ಐಯಾನ್, ಅಲ್ಯೂಮಿನಿಯಂ-ಐಯಾನ್, ಸೋಡಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಯಲ್ಲಿ ತೊಡಗಿದ್ದು. ಗರಿಷ್ಠ ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು, ಕಾರುಗಳು, ಆಟೋ ರಿಕ್ಷಾಗಳ ಬೆಲೆಯು ಪೆಟ್ರೋಲ್ ಚಾಲಿತ ಸ್ಕೂಟರ್‌ಗಳು, ಕಾರುಗಳು ಮತ್ತು ಆಟೋ ರಿಕ್ಷಾಗಳಿಗೆ ಸಮನಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Honda Activa ಬೆಲೆಯಲ್ಲಿ ಇಲ್ಲಿ ನೀವು ಕಾರು ಖರೀದಿಸಬಹುದು, ಅಗ್ಗದ ದರದಲ್ಲಿ ನಾಲ್ಕು ಚಕ್ರಗಳ ವಾಹನದ ಮಜಾ ಆನಂದಿಸಿ

ವೆಚ್ಚದಲ್ಲಿ ಎಷ್ಟು ವ್ಯತ್ಯಾಸ
ಕೇಂದ್ರ ಸಚಿವರ ಪ್ರಕಾರ, 'ನೀವು ಇಂದು ಪೆಟ್ರೋಲ್‌ಗೆ 100 ರೂಪಾಯಿ ಖರ್ಚು ಮಾಡುತ್ತಿದ್ದರೆ, ಎಲೆಕ್ಟ್ರಿಕ್ ವಾಹನ ಚಲಾಯಿಸಲು ಈ ವೆಚ್ಚವು 10 ರೂಪಾಯಿಗೆ ಇಳಿಕೆಯಾಗಲಿದೆ. ಇತ್ತೀಚೆಗಷ್ಟೇ ನಿತೀನ್ ಗಡ್ಕರಿ ಅವರು ಗ್ರೀನ್ ಹೈಡ್ರೋಜನ್ ಇಂಧನ ಕಾರನ್ನು ಬಿಡುಗಡೆ ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ. ವಾಸ್ತವದಲ್ಲಿ ನಿತೀನ್ ಗಡ್ಕರಿ ಅವರು ನಿರಂತರವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ-EPFO Alert: ಪಿಎಫ್ ಖಾತೆ ಹೊಂದಿದವರು ಈ ಸುದ್ದಿಯನ್ನು ತಪ್ಪದೆ ಓದಿ

ಹಸಿರು ಹೈಡ್ರೋಜನ್ ಚಾಲಿತ ಕಾರಿನ ವೆಚ್ಚ ಪ್ರತಿ ಕಿ.ಮೀಗೆ 1 ರೂಪಾಯಿಗಿಂತ ಕಡಿಮೆಯಿದ್ದರೆ, ಪೆಟ್ರೋಲ್ ಕಾರಿನ ಪ್ರತಿ ಕಿ.ಮೀ ವೆಚ್ಚ 5-7 ರೂ.ಇದೆ. ಇದೀಗ ಇಲ್ಲಿನ ಬಹುತೇಕ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಪ್ರಾಯೋಗಿಕ ಯೋಜನೆಯು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಎಫ್‌ಸಿಇವಿ ಟೊಯೋಟಾ ಮಿರಾಯ್ ಕಾರನ್ನು ಒಳಗೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News