New Wage Code: ವೇತನ ಮತ್ತು ರಜಾದಿನಗಳಿಗೆ ಸಂಬಂಧಿಸಿದ ಬದಲಾವಣೆಗಳು ಅಕ್ಟೋಬರ್ 1 ರಿಂದ ಅನ್ವಯ, ನಿಮ್ಮ ಮೇಲಾಗುವ ಪರಿಣಾಮ ಏನು ಗೊತ್ತಾ?

ಉದ್ಯೋಗಿಗಳ ಗಳಿಕೆಯ ರಜೆಯನ್ನು  240 ರಿಂದ 300 ಕ್ಕೆ ಹೆಚ್ಚಿಸಬಹುದು. ಕಾರ್ಮಿಕ ಸಂಹಿತೆಯ ನಿಯಮಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯ, ಕಾರ್ಮಿಕ ಸಂಘ ಮತ್ತು ಉದ್ಯಮದ ಪ್ರತಿನಿಧಿಗಳ ನಡುವೆ ಅನೇಕ ನಿಬಂಧನೆಗಳನ್ನು ಚರ್ಚಿಸಲಾಗಿದೆ.

Written by - Ranjitha R K | Last Updated : Sep 16, 2021, 02:37 PM IST
  • ಸರ್ಕಾರವು ಅಕ್ಟೋಬರ್ 1 ರಿಂದ ಹೊಸ ವೇತನ ಸಂಹಿತೆಯನ್ನು ಜಾರಿಗೆ ತರಬಹುದು.
  • ಸ್ಯಾಲರಿ ಸ್ಟ್ರಕ್ಚರ್, ರಜಾದಿನಗಳಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ಅನ್ವಯ
  • ಉದ್ಯೋಗಿಗಳ ಟೇಕ್ ಹೋಮ್ ಸಂಬಳ ಕಡಿಮೆಯಾಗಬಹುದು.
 New Wage Code: ವೇತನ ಮತ್ತು ರಜಾದಿನಗಳಿಗೆ ಸಂಬಂಧಿಸಿದ ಬದಲಾವಣೆಗಳು ಅಕ್ಟೋಬರ್ 1 ರಿಂದ ಅನ್ವಯ, ನಿಮ್ಮ ಮೇಲಾಗುವ ಪರಿಣಾಮ ಏನು  ಗೊತ್ತಾ? title=
ಅಕ್ಟೋಬರ್ 1 ರಿಂದ ಹೊಸ ವೇತನ ಸಂಹಿತೆಯನ್ನು ಜಾರಿಗೆ ತರಬಹುದು. (file photo)

ನವದೆಹಲಿ : New Wage Code India Updates: ಹೊಸ ವೇತನ ಸಂಹಿತೆಯನ್ನು ಸರ್ಕಾರ ಅಕ್ಟೋಬರ್ 1 ರಿಂದ ಜಾರಿಗೆ ತರಬಹುದು. ಮೊದಲು ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎನ್ನಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ಇದನ್ನು    ಜಾರಿಗೊಳಿಸಲಾಗಿಲ್ಲ. ಆದರೆ, ಇದೀಗ ಈ ನಿಯಮವನ್ನು (New Wage Code) ಅಕ್ಟೋಬರ್‌ನಲ್ಲಿ ಜಾರಿಗೊಳಿಸಬಹುದು ಎನ್ನಲಾಗಿದೆ. ಈ ಅವಧಿಯೊಳಗೆ, ಎಲ್ಲಾ ರಾಜ್ಯಗಳು ತಮ್ಮ ಕರಡು ನಿಯಮಗಳನ್ನು ಸಿದ್ದಪಡಿಸುತ್ತಿವೆ. ಇದರ ಅಡಿಯಲ್ಲಿ, ನೌಕರರ ವೇತನ, ರಜಾದಿನಗಳು ಇತ್ಯಾದಿಗಳಲ್ಲಿ ಬದಲಾವಣೆಗಳಿರುತ್ತವೆ.

1. ವರ್ಷದ ರಜಾದಿನಗಳು 300 ಕ್ಕೆ ಏರಲಿವೆ :
ಉದ್ಯೋಗಿಗಳ ಗಳಿಕೆಯ ರಜೆಯನ್ನು  (Earned Leave) 240 ರಿಂದ 300 ಕ್ಕೆ ಹೆಚ್ಚಿಸಬಹುದು. ಕಾರ್ಮಿಕ ಸಂಹಿತೆಯ ನಿಯಮಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯ, ಕಾರ್ಮಿಕ ಸಂಘ ಮತ್ತು ಉದ್ಯಮದ ಪ್ರತಿನಿಧಿಗಳ ನಡುವೆ ಅನೇಕ ನಿಬಂಧನೆಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ಉದ್ಯೋಗಿಗಳ ಗಳಿಕೆಯ  (Earned Leave) ರಜೆಯನ್ನು 240 ರಿಂದ 300 ಕ್ಕೆ ಹೆಚ್ಚಿಸಲು ಬೇಡಿಕೆ ಇಡಲಾಗಿದೆ. 

ಇದನ್ನೂ ಓದಿ : ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ ಯಾವುದು ತಿಳಿಯಿರಿ

2. ಬದಲಾಗಲಿದೆ ಸ್ಯಾಲರಿ ಸ್ಟ್ರಕ್ಚರ್ : 
ಹೊಸ ವೇತನ ಸಂಹಿತೆಯ ಅಡಿಯಲ್ಲಿ, ಉದ್ಯೋಗಿಗಳ ವೇತನ ರಚನೆಯಲ್ಲಿ ಬದಲಾವಣೆಯಾಗಲಿದೆ. ಅವರ ಟೇಕ್ ಹೋಮ್ ಸಂಬಳ (Take home salary) ಕೂಡಾ ಕಡಿಮೆಯಾಗಬಹುದು. ಏಕೆಂದರೆ ವೇತನ ಸಂಹಿತೆ ಕಾಯಿದೆ, 2019 ರ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ (CTC) 50% ಕ್ಕಿಂತ ಕಡಿಮೆ ಇರುವಂತಿಲ್ಲ. ಪ್ರಸ್ತುತ, ಅನೇಕ ಕಂಪನಿಗಳು ಮೂಲ ವೇತನವನ್ನು ಕಡಿಮೆ ಮಾಡುತ್ತವೆ ಮತ್ತು ಮೇಲಿನಿಂದ ಹೆಚ್ಚಿನ ಭತ್ಯೆಗಳನ್ನು ನೀಡುತ್ತದೆ. ಹೀಗೆ ಮಾಡುವುದರಿಂದ ಕಂಪನಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ.

3. ಭತ್ಯೆಗಳನ್ನು ಕಡಿತಗೊಳಿಸಬೇಕು :
ಉದ್ಯೋಗಿಯ Cost-to-companyಯಲ್ಲಿ ಮೂರರಿಂದ ನಾಲ್ಕು ಘಟಕಗಳಿವೆ. ಮೂಲ ವೇತನ, ಮನೆ ಬಾಡಿಗೆ ಭತ್ಯೆ (HRA), ಪಿಎಫ್‌ನಂತಹ (PF) ನಿವೃತ್ತಿ ಪ್ರಯೋಜನಗಳು, ಗ್ರಾಚ್ಯುಟಿ ಮತ್ತು ಪಿಂಚಣಿ ಮತ್ತು ತೆರಿಗೆ ಉಳಿತಾಯ ಭತ್ಯೆಗಳು ಎಲ್‌ಟಿಎ (LTA) ಮತ್ತು ಮನರಂಜನಾ ಭತ್ಯೆ. ಈಗ ಹೊಸ ವೇತನ ಸಂಹಿತೆಯಲ್ಲಿ, ಯಾವುದೇ ವೆಚ್ಚದಲ್ಲಿ ಭತ್ಯೆಗಳು ಒಟ್ಟು ಸಂಬಳದ 50% ಮೀರಬಾರದು ಎಂದು ನಿರ್ಧರಿಸಲಾಗಿದೆ. ಉದ್ಯೋಗಿಯ ವೇತನ ತಿಂಗಳಿಗೆ 50,000 ರೂ.ಯಾಗಿದ್ದರೆ, ಆತನ ಮೂಲ ವೇತನ 25,000 ರೂ ಆಗಿರಬೇಕು ಮತ್ತು ಆತನ ಭತ್ಯೆಗಳು ಉಳಿದ 25,000 ದಲ್ಲಿ ಬರಬೇಕು. ಇಲ್ಲಿಯವರೆಗೆ ಮೂಲ ವೇತನವನ್ನು (Basic salary)  25-30 ಪ್ರತಿಶತದಲ್ಲಿ ಇರಿಸಿಕೊಳ್ಳುತ್ತಿದ್ದ ಕಂಪನಿಗಳು, ಉಳಿದ ಭಾಗವನ್ನು ಭತ್ಯೆ ರೂಪದಲ್ಲಿ ನೀಡುತ್ತಿತ್ತು. ಆದರೆ, ಇನ್ನು ಮುಂದೆ ಮೂಲ ವೇತನವನ್ನು 50 ಪ್ರತಿಶತಕ್ಕಿಂತ ಕಡಿಮೆ ಇರಿಸಲು ಸಾಧ್ಯವಿಲ್ಲ. ಹಾಗಾಗಿ, ಹೊಸ ವೇತನ ಸಂಹಿತೆಯ ನಿಯಮ ಜಾರಿಯಾದರೆ, ಕಂಪನಿಗಳು ಅನೇಕ ಭತ್ಯೆಗಳನ್ನು ಕಡಿತಗೊಳಿಸಬೇಕಾಗುತ್ತದೆ.

ಇದನ್ನೂ ಓದಿ : PM Jan dhan Account: ಖಾತೆಯಲ್ಲಿ ಹಣ ಇಲ್ಲದೇ ಇದ್ದರೂ 10,000 ರೂ.ಗಳನ್ನು ಹಿಂಪಡೆಯಬಹುದು, ತಕ್ಷಣವೇ ಈ ಖಾತೆಯನ್ನು ತೆರೆಯಿರಿ

4. ಹೊಸ ವೇತನ ಸಂಹಿತೆಯಲ್ಲಿ ಏನಿದೆ ವಿಶೇಷ ?:
ಇದು ಕಚೇರಿಯಲ್ಲಿ ಕೆಲಸ ಮಾಡುವ ಸಂಬಳದ ವರ್ಗ, ಗಿರಣಿಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ. ಉದ್ಯೋಗಿಗಳ ಸಂಬಳದಿಂದ ಅವರ ರಜಾದಿನಗಳು ಮತ್ತು ಕೆಲಸದ ಸಮಯವೂ ಬದಲಾಗುತ್ತದೆ. ಹೊಸ ವೇತನ ಸಂಹಿತೆ ಅನುಷ್ಠಾನದ ನಂತರ ಬಹಳಷ್ಟು ಬದಲಾವಣೆಗಳಾಗುತ್ತವೆ. 

5. ಕೆಲಸದ ಸಮಯ ಹೆಚ್ಚಾಗುತ್ತದೆ ಮತ್ತು ವಾರಕ್ಕೊಮ್ಮೆ ಆಫ್ ಕೂಡ ಹೆಚ್ಚಾಗುತ್ತದೆ :
ಹೊಸ ವೇತನ ಕೋಡ್ (New wage code) ಅಡಿಯಲ್ಲಿ, ಕೆಲಸದ ಸಮಯ 12 ಕ್ಕೆ ಹೆಚ್ಚಾಗಲಿದೆ. ಉದ್ದೇಶಿತ ಕಾರ್ಮಿಕ ಸಂಹಿತೆಯಲ್ಲಿ, ಒಂದು ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕೆಲವು ಸಂಘಗಳು 12 ಗಂಟೆಗಳ ಕೆಲಸದ ನಿಯಮ ಮತ್ತು 3 ದಿನಗಳ ರಜೆಯನ್ನು ಪ್ರಶ್ನಿಸಿವೆ. ಸರ್ಕಾರವು ತನ್ನ ಸ್ಪಷ್ಟೀಕರಣದಲ್ಲಿ, ಒಂದು ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮವು ಕೂಡಾ ಉಳಿಯಲಿದೆ ಎಂದು ಹೇಳಿದೆ. ಯಾರಾದರೂ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಿದರೆ, ಆಗ ವಾರದಲ್ಲಿ 6 ದಿನ ಕೆಲಸ ಮಾಡಬೇಕಾಗುತ್ತದೆ ಅಂದರೆ ಒಂದು ದಿನ ರಜೆ ಸಿಗಲಿದೆ.  ಒಂದು ಕಂಪನಿಯು ದಿನಕ್ಕೆ 12 ಗಂಟೆಗಳ ಕಾಲ ಕೆಲಸವನ್ನು ಅಳವಡಿಸಿಕೊಂಡರೆ, ಅದು ಉಳಿದ 3 ದಿನಗಳವರೆಗೆ ಉದ್ಯೋಗಿಗೆ ರಜೆ ನೀಡಬೇಕಾಗುತ್ತದೆ. ಕೆಲಸದ ಸಮಯ ಹೆಚ್ಚಾದರೆ, ಕೆಲಸದ ದಿನಗಳು 6 ರ ಬದಲಾಗಿ 5 ಅಥವಾ 4 ಆಗಿರುತ್ತದೆ. ಆದರೆ ಇದಕ್ಕಾಗಿ ಉದ್ಯೋಗಿ ಮತ್ತು ಕಂಪನಿ ಇಬ್ಬರ ನಡುವೆ ಒಪ್ಪಂದ ಮಾಡಿಕೊಳ್ಳುವುದು ಸಹ ಅಗತ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News