ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಹೊಸ ನಿಯಮ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !

ಮುಂದಿನ ತುಟ್ಟಿಭತ್ಯೆ ಏರಿಕೆ 2024ರಲ್ಲಿ ಆಗಲಿದೆ. ಆದರೆ ಮುಂದಿನ ಬಾರಿ ಡಿಎ ಎಷ್ಟು ಹೆಚ್ಚಾಗುತ್ತದೆ ಎಂಬುದು ಎಐಸಿಪಿಐ ಸೂಚ್ಯಂಕದ ಅರೆ-ವಾರ್ಷಿಕ ಡೇಟಾವನ್ನು ಅವಲಂಬಿಸಿರುತ್ತದೆ.  

Written by - Ranjitha R K | Last Updated : Oct 25, 2023, 11:52 AM IST
  • ತುಟ್ಟಿಭತ್ಯೆ ಹೆಚ್ಚಳವನ್ನು ಎಐಸಿಪಿಐ ಸೂಚ್ಯಂಕ ನಿರ್ಧರಿಸುತ್ತದೆ
  • 4 ತಿಂಗಳ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ಇನ್ನೂ ಬಿಡುಗಡೆಯಾಗಬೇಕಿದೆ
  • ತುಟ್ಟಿಭತ್ಯೆ 50% ತಲುಪಿದ ನಂತರ ಮತ್ತೆ ಶೂನ್ಯವಾಗುತ್ತದೆ
ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಹೊಸ ನಿಯಮ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !  title=

ಬೆಂಗಳೂರು : ಕೇಂದ್ರ ಸರ್ಕಾರವು ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಜನವರಿ 2023 ರಲ್ಲಿ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿತ್ತು. ಮತ್ತೆ ಜುಲೈ 2023 ರಲ್ಲಿಯೂ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಇದರ ನಂತರ ಉದ್ಯೋಗಿಗಳ ಒಟ್ಟು ಡಿಎ  
42% ರಿಂದ 46% ಕ್ಕೆ ಏರಿದೆ.  ಉದ್ಯೋಗಿಗಳಿಗೆ ನವೆಂಬರ್‌ನಲ್ಲಿ ತುಟ್ಟಿ ಭತ್ಯೆ ಮತ್ತು ಜುಲೈನಿಂದ ಬಾಕಿಯಿರುವ 3 ತಿಂಗಳ ಬಾಕಿ ಡಿಎಯನ್ನು ನೀಡಲಾಗುವುದು. ಮುಂದಿನ ತುಟ್ಟಿಭತ್ಯೆ ಏರಿಕೆ 2024ರಲ್ಲಿ ಆಗಲಿದೆ. ಆದರೆ, ಮುಂದಿನ ಬಾರಿ ಡಿಎ ಎಷ್ಟು ಹೆಚ್ಚಾಗುತ್ತದೆ ಎಂಬುದು ಎಐಸಿಪಿಐ ಸೂಚ್ಯಂಕದ ಅರೆ-ವಾರ್ಷಿಕ ಡೇಟಾವನ್ನು ಅವಲಂಬಿಸಿರುತ್ತದೆ.

ತುಟ್ಟಿಭತ್ಯೆ ಹೆಚ್ಚಳವನ್ನು ಎಐಸಿಪಿಐ ಸೂಚ್ಯಂಕ ನಿರ್ಧರಿಸುತ್ತದೆ :
AICPI ಇಂಡೆಕ್ಸ್‌ನ ಅರ್ಧ-ವಾರ್ಷಿಕ ಲೆಕ್ಕಾಚಾರದ ಆಧಾರದಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ.  ನೌಕರರ ವೇತನ ಶ್ರೇಣಿಯನ್ನು ಕೇಂದ್ರ ಸರ್ಕಾರವು ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸುತ್ತದೆ. ಜನವರಿಯ ಹಣದುಬ್ಬರ ದರವನ್ನು ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸೂಚ್ಯಂಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಜುಲೈ ತಿಂಗಳತುಟ್ಟಿಭತ್ಯೆ ಜನವರಿಯಿಂದ ಜುಲೈವರೆಗೆ AICPI ಸೂಚ್ಯಂಕವನ್ನು ಆಧರಿಸಿರುತ್ತದೆ. ಈಗ ಜುಲೈ 2023 ರ ಹೊಸ ಡಿಎ ದರಗಳನ್ನು ಘೋಷಿಸಲಾಗಿದೆ.

ಇದನ್ನೂ ಓದಿ : ಪಿಂಚಣಿದಾರರೇ ನೆನಪಿಡಿ ! ನಿಮ್ಮ ಬಳಿ ಈ ನಂಬರ್ ಇಲ್ಲಾ ಎಂದಾದರೆ ನಿಂತು ಹೋಗುವುದು ಪೆನ್ಶನ್

4 ತಿಂಗಳ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ಇನ್ನೂ ಬಿಡುಗಡೆಯಾಗಬೇಕಿದೆ : 
ಇಲ್ಲಿಯವರೆಗೆ, ಜುಲೈ ಮತ್ತು ಆಗಸ್ಟ್‌ನ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕವು 139.2 ಅಂಕಗಳನ್ನು ತಲುಪಿದ್ದು,  ಡಿಎ ಸ್ಕೋರ್ 47.98 ಪ್ರತಿಶತವಾಗಿದೆ. ಈಗ ಸೆಪ್ಟೆಂಬರ್ ತಿಂಗಳ ಅಂಕಿಅಂಶಗಳನ್ನು ಅಕ್ಟೋಬರ್ 28 - 30 ರಂದು ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ಏರಿಕೆ ಕಂಡುಬಂದರೆ ಅದು ಶುಭ ಸೂಚನೆಯಾಗಿರಲಿದೆ. ಇದರ ನಂತರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದಾದ ನಂತರ ಜನವರಿ 2024 ರಲ್ಲಿ ತುಟ್ಟಿಭತ್ಯೆ ದರ ಎಷ್ಟು ಹೆಚ್ಚಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ಆದರೆ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ.

ತುಟ್ಟಿಭತ್ಯೆ 50%  ತಲುಪಿದ ನಂತರ ಮತ್ತೆ ಶೂನ್ಯವಾಗುತ್ತದೆ : 
ಮುಂದಿನ ವರ್ಷದ ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ, ತುಟ್ಟಿಭತ್ಯೆ 50% ತಲುಪುತ್ತದೆ. ಅಂತಹ ಸಂದರ್ಭಗಳಲ್ಲಿ ನೌಕರರ ವೇತನವನ್ನು ಪರಿಷ್ಕರಿಸಲಾಗುವುದು. ಏಕೆಂದರೆ ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿತ್ತು. ಡಿಎ 50% ತಲುಪಿದಾಗ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು ಡಿಎ ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು. 

ಇದನ್ನೂ ಓದಿ : Indian Railways: ಪ್ರಯಾಣಿಕರು ರೈಲಿನಲ್ಲಿ ಬಿಟ್ಟು ಹೋದ ಬೆಲೆಬಾಳುವ ಲಗೇಜ್ ಅನ್ನು ರೈಲ್ವೆ ಏನು ಮಾಡುತ್ತೆ!

2024 ರಲ್ಲಿ ಹೊಸ ವೇತನ ಆಯೋಗವನ್ನು ಜಾರಿಗೆ ತರಲಾಗುತ್ತದೆಯೇ? : 
ಡಿಎ ಶೇಕಡಾ 50 ತಲುಪಿ ಶೂನ್ಯವಾಗಿದ್ದರೆ, ಕೇಂದ್ರ ಸರ್ಕಾರವು ಮುಂದಿನ ಹೊಸ ವೇತನ ಆಯೋಗವನ್ನು ಅಂದರೆ 8ನೇ ವೇತನ ಆಯೋಗವನ್ನು ಸ್ಥಾಪಿಸಬೇಕು ಅಥವಾ ವೇತನ ರಚನೆಯಲ್ಲಿ ಬದಲಾವಣೆಗಳನ್ನು ಮಾಡಬೇಕು ಅಥವಾ ವೇತನವನ್ನು ಹೆಚ್ಚಿಸಲು ಹೊಸ ನಿಯಮವನ್ನು  ರೂಪಿಸಬೇಕು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರಿ ನೌಕರರ ವೇತನದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದು ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಇದು ಸಂಭವಿಸುವ ಸಾಧ್ಯತೆಯಿದೆ. ಮುಂದಿನ ವೇತನ ಆಯೋಗವನ್ನು ಸ್ಥಾಪಿಸುವ ಬಗ್ಗೆ ಇನ್ನೂ ಯೋಚಿಸುತ್ತಿಲ್ಲ ಎಂದು ಸರ್ಕಾರ 2022 ರಲ್ಲಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದರೂ, ಈ ನಿಲುವು ಬದಲಾಗುತ್ತಿರುವಂತೆ ತೋರುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News