New Bajaj Pulsar 250: ಈ ದಿನ ಬಿಡುಗಡೆಯಾಗಲಿದೆ ಹೊಸ ಬಜಾಜ್ ಪಲ್ಸರ್ 250

New Bajaj Pulsar 250 - ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ (Bajaj Auto) ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಸಿದ್ಧ ಪಲ್ಸರ್ ಸರಣಿಗೆ ಹೊಸ ಮಾದರಿಯನ್ನು ಸೇರಿಸಲು ಹೊರಟಿದೆ.

Written by - Nitin Tabib | Last Updated : Oct 10, 2021, 06:42 PM IST
  • ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹೊಸ ಬಜಾಜ್ ಪಲ್ಸರ್ 250
  • ಅಕ್ಟೋಬರ್ 28ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಸಾಧ್ಯತೆ.
  • ಇಲ್ಲಿದೆ ಬೈಕ್ ನ ವೈಶಿಷ್ಟ್ಯಗಳು ಹಾಗೂ ಬೆಲೆ ವಿವರ
New Bajaj Pulsar 250: ಈ ದಿನ ಬಿಡುಗಡೆಯಾಗಲಿದೆ ಹೊಸ ಬಜಾಜ್ ಪಲ್ಸರ್ 250 title=
New Bajaj Pulsar 250 (File Photo)

New Bajaj Pulsar 250 - ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ (Bajaj Auto) ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಸಿದ್ಧ ಪಲ್ಸರ್ ಸರಣಿಗೆ ಹೊಸ ಮಾದರಿಯನ್ನು ಸೇರಿಸಲು ಹೊರಟಿದೆ. ಈ ಹೊಸ ಪಲ್ಸರ್ 250 (Pulsar 250) ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಚರ್ಚೆ ದೀರ್ಘ ಕಾಲದಿಂದ ನಡೆಯುತ್ತಿದ್ದರೂ, ಇದೀಗ ಈ ಬೈಕ್ ಬಿಡುಗಡೆ ದಿನಾಂಕವನ್ನು ಮಾಧ್ಯಮ ವರದಿಗಳಲ್ಲಿ ಬಹಿರಂಗಪಡಿಸಲಾಗುತ್ತಿದೆ.

ಮಾಹಿತಿಯ ಪ್ರಕಾರ, ಕಂಪನಿಯು ಈ ಬೈಕ್ (Bikes) ಅನ್ನು ಅಕ್ಟೋಬರ್ 28 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಕಂಪನಿಯು ತನ್ನ NS250 ಮತ್ತು 250F ಎರಡನ್ನೂ ಒಟ್ಟಿಗೆ ಪ್ರಸ್ತುತಪಡಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಈ ಬೈಕ್ ಅನ್ನು ಕೂಡ ಪರೀಕ್ಷೆಯ ಸಮಯದಲ್ಲಿ ಗುರುತಿಸಲಾಗಿದೆ. ಕ್ವಾರ್ಟರ್-ಲೀಟರ್ ಮೋಟಾರ್ ಸೈಕಲ್ ಅನ್ನು ಎರಡು ಟ್ರಿಮ್‌ಗಳಲ್ಲಿ ಅಂದರೆ ನೆಕ್ಡ್ ಹಾಗೂ ಸೆಮಿ ಫೆಯರ್ಡ್ ಆವೃತ್ತಿಗಳಲ್ಲಿ ಪರಿಚಯಿಸಲಾಗಿದೆ.

Bajaj Pulsar 250 ವಿನ್ಯಾಸದ ಕುರಿತು ಹೇಳುವುದಾದರೆ, ಅದರ ಸ್ತೈಲಿಂಗ್ ಬಹುತೇಕ ಸ್ಟ್ರೀಟ್ ಫೈಟರ್ NS200 (Street Fighter NS250)ನಿಂದ ಪ್ರೇರಿತವಾಗಿದೆ. ಇದರ ಮುಂಭಾಗಕ್ಕೆ ಅಗ್ರೆಸಿವ್ ಲುಕ್ ಜೊತೆಗೆ ಸಿಂಗಲ್ ಪಾಡ್ ಹೆಡ್ ಲ್ಯಾಂಪ್ ಕ್ಲಸ್ಟರ್, ಇಂಟಿಗ್ರೇಟೆಡ್ LED ಡೇ ಟೈಮ್ ರನಿಂಗ್ ಲೈಟ್ಸ್, ಬಡೇ ಹೆಡ್ ಲ್ಯಾಂಪ್ ಕೌಲ್ ಹಾಗೂ ಒಂದು ಪ್ಲೈ ಸ್ಕ್ರೀನ್ ನೀಡಲಾಗಿದೆ.

ಇದನ್ನೂ ಓದಿ-New Bike Launch News: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? Pulsar-Hondaಗೆ ಟಕ್ಕರ್ ನೀಡಲು ರೋಡಿಗಿಳಿಯಲಿದೆ ಈ ಕಡಕ್ ಬೈಕ್

ಪ್ರಸ್ತುತ ಇರುವ ಬಜಾಜ್ ಪಲ್ಸರ್ ಶ್ರೇಣಿಯ ಹೆಚ್ಚಿನ ಭಾಗವು ಸ್ಟೀಲ್ ಪರಿಧಿಯ ಚೌಕಟ್ಟನ್ನು ಆಧರಿಸಿದೆ. ಆದರೆ ಹೊಸ ಪ್ಲಾಟ್‌ಫಾರ್ಮ್ ಬೈಕಿನ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ಪೈ ಶಾಟ್‌ಗಳ ಆಧಾರದ ಮೇಲೆ, ಕಂಪನಿಯು ಎರಡೂ ಬೈಕ್‌ಗಳ ಇಂಧನ ಟ್ಯಾಂಕ್‌ಗೆ ಸ್ನಾಯುವಿನ ನೋಟ ಮತ್ತು ವಿನ್ಯಾಸವನ್ನು ನೀಡುತ್ತಿದೆ ಎಂದು ಹೇಳಬಹುದು. ಇದಲ್ಲದೇ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ನೀಡಲಾಗುತ್ತಿದೆ. 

ಇದನ್ನೂ ಓದಿ- Top 5 Best Mileage Bikes In India: ಮೈಲೇಜ್ ವಿಷಯದಲ್ಲಿ ಇಲ್ಲ ರಾಜಿ, ಇಲ್ಲಿವೆ ಟಾಪ್ 5 ಪವರ್ ಫುಲ್ ಬೈಕ್ಸ್

ಇಂಜಿನ್ ಹೇಗಿರಲಿದೆ?
ಕಂಪನಿಯು ಈ ಬೈಕಿನಲ್ಲಿ 249 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಆಯಿಲ್/ಏರ್-ಕೂಲ್ಡ್ ಎಂಜಿನ್ ಅನ್ನು ಒದಗಿಸುವ ಸಾಧ್ಯತೆ ಇದೆ. ಇದು ಸುಮಾರು 24 ಬಿಹೆಚ್ ಪಿ ಪವರ್ ಮತ್ತು 20 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಹಿಂದಿನ ಮಾಧ್ಯಮ ವರದಿಯಲ್ಲಿ ಕಂಪನಿಯು ಇದರಲ್ಲಿ ವೇರಿಯಬಲ್ ವಾಲ್ವ್ ಆಕ್ಸನ್ (VVT Technology) ತಂತ್ರಜ್ಞಾನವನ್ನು ಬಳಸಬಹುದು ಎಂದು ಹೇಳಲಾಗಿತ್ತು. ಈ ಬೈಕ್‌ನ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಡ್ಯುಯಲ್ ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು. ಇತರ ವೈಶಿಷ್ಟ್ಯಗಳಂತೆ ಈ ಬೈಕಿನಲ್ಲಿ ಬ್ಲೂಟೂತ್ ಸಂಪರ್ಕ ಮತ್ತು ಮಲ್ಟಿಪಲ್ ಡ್ರೈವಿಂಗ್ ಮೋಡ್ಸ್  ನೀಡಬಹುದು.

ಇದನ್ನೂ ಓದಿ-Highest Sold Bike: ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆ Hero ಕಂಪನಿಯ ಈ ಬೈಕ್, ಒಂದೇ ತಿಂಗಳಿನಲ್ಲಿ ಲಕ್ಷಾಂತರ ಜನರಿಂದ ಖರೀದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News