National Monetisation Pipeline: ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನಿದು NMP?

National Monetisation Pipeline Launch:ಈ ಮೂಲಕ, ಮುಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮಾರಾಟ ಮಾಡಬೇಕಿರುವ ತನ್ನ ಸ್ವಂತ ಆಸ್ತಿ ಅಥವಾ ಹಣಗಳಿಸುಸರ್ಕಾರಿ ಆಸ್ತಿಗಳ ಪಟ್ಟಿ ಸಿದ್ಧಪಡಿಸಲಿದೆ.

Written by - Nitin Tabib | Last Updated : Aug 23, 2021, 06:32 PM IST
  • ರಾಷ್ಟ್ರೀಯ ಹಣಗಳಿಕೆಯ ಪೈಪ್ ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
  • ಈ ಮೂಲಕ, ಮುಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮಾರಾಟ ಮಾಡಬೇಕಿರುವ ತನ್ನ ಸ್ವಂತ ಆಸ್ತಿ ಅಥವಾ ಹಣಗಳಿಸುಸರ್ಕಾರಿ ಆಸ್ತಿಗಳ ಪಟ್ಟಿ ಸಿದ್ಧಪಡಿಸಲಿದೆ.
  • ಈ ಸರ್ಕಾರಿ ಸ್ವತ್ತುಗಳು ಬ್ರೌನ್ ಫೀಲ್ಡ್ ಪ್ರಾಪರ್ಟಿಗಳಾಗಿವೆ ಎಂದ ಸಿತಾರಾಮನ್
National Monetisation Pipeline: ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನಿದು NMP? title=
National Monetisation Pipeline Launch (Photo Courtesy - ANI)

National Monetisation Pipeline Launch: ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) NMP ಅಂದರೆ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (National Monetisation Pipeline)ಅನ್ನು ಬಿಡುಗಡೆಗೊಳಿಸಿದ್ದಾರೆ.  ಈ ಮೂಲಕ, ಮುಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮಾರಾಟ ಮಾಡಲಾಗುವ ಅಥವಾ ಹಣಗಳಿಸುವ ಸರ್ಕಾರಿ ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ  ನೀತಿ ಆಯೋಗದ (Niti Aayog) ಸಿಇಒ ಅಮಿತಾಭ್ ಕಾಂತ್ (CEO Amitabh Kant), "ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಅನ್ನು ಯಶಸ್ವಿಯಾಗಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಉತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿ ವಲಯಕ್ಕೆ ಪ್ರವೇಶಿಸುವುದು ಬಹಳ ಮುಖ್ಯ ಎಂದು ನಾವು ಭಾವಿಸುತ್ತೇವೆ. ಮತ್ತು ಅದಕ್ಕಾಗಿ ನಾವು ಕಷ್ಟಪಟ್ಟು ಕೆಲಸ ಮಾಡಲು ಬದ್ಧರಾಗಿದ್ದೇವೆ. " ಎಂದಿದ್ದಾರೆ. 

'ರೈಲು, ರಸ್ತೆ, ವಿದ್ಯುತ್ ವಲಯಗಳಿಗೆ ಸಂಬಂಧಿಸಿದ ರೂ. 6 ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಮೂಲಸೌಕರ್ಯ ಸ್ವತ್ತುಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಮಾರಾಟಮಾಡಿ ಹಣಗಳಿಸಲಾಗುವುದು' ಎಂದು ಅಮಿತಾಬ್ ಕಾಂತ್ ಹೇಳಿದ್ದಾರೆ.

ಈ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಈಗಾಗಲೇ ಹೂಡಿಕೆಗಳನ್ನು ಮಾಡುತ್ತಿರುವ ಬ್ರೌನ್ ಫೀಲ್ಡ್ ಆಸ್ತಿಗಳ (Brown Field Properties) ಬಗ್ಗೆಇದೆ ಎಂದಿದ್ದಾರೆ. ಇವುಗಳು ನಿಷ್ಫಲವಾಗಿರುವ ಅಥವಾ ಸಂಪೂರ್ಣ ಹಣಗಳಿಕೆ ಮಾಡದ ಅಥವಾ ಕಡಿಮೆ ಬಳಕೆಯಾಗುವಂತಹ ಸ್ವತ್ತುಗಳಾಗಿವೆ  ಎಂದು ಅವರು ಹೇಳಿದ್ದಾರೆ. 

ಈ ಸ್ವತ್ತುಗಳಲ್ಲಿ ನಾವು ಖಾಸಗಿ ಷೇರುಗಳನ್ನು ತರುವ ಮೂಲಕ ಅವುಗಳಿಂದ ಉತ್ತಮವಾಗಿ ಹಣಗಳಿಸಲು ಹೊರಟಿದ್ದೇವೆ. ಹಣಗಳಿಕೆಯ ನಂತರ ಯಾವುದೇ ಸಂಪನ್ಮೂಲಗಳಿಂದ ಪಡೆಯಲಾಗುವುದು, ನಾವು ಮುಂದೆ ಮೂಲಸೌಕರ್ಯಗಳನ್ನು ನಿರ್ಮಿಸಲು ಹೆಚ್ಚು ಹೂಡಿಕೆ ಮಾಡುತ್ತೇವೆ ಎಂದು ನಿರ್ಮಲಾ ಸಿತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ-Pan-Aadhaar Link: ಇದು ಕೊನೆಯ ಅವಕಾಶ , ಆಧಾರ್ ಗೆ ಸಂಬಂಧಿಸಿದ ಈ ಕೆಲಸ ಮಾಡದೆ ಹೋದರೆ ಕಟ್ಟಬೇಕು 10 ಸಾವಿರ ರೂ ದಂಡ

ಈ ಯೋಜನೆಯ ಕುರಿತು ಏಳುತ್ತಿರುವ ಪ್ರಶ್ನೆಗಳ ಕುರಿತು ಮಾತನಾಡಿರುವ ಸೀತಾರಾಮನ್, ನಾವು ಭೂಮಿಯನ್ನು ಮಾರಾಟ ಮಾಡುತ್ತಿದ್ದೇವೆಯೇ? ಎಂಬ ಪ್ರಶ್ನೆ ಇರುವವರಿಗೆ ನಾವು 'ಇಲ್ಲ' ಎಂದು ಉತ್ತರಿಸಲು ಬಯಸುತ್ತೇವೆ. ರಾಷ್ಟ್ರೀಯ ಮಾನೆಟೈಸೇಶನ್ ಪೈಪ್ಲೈನ್ ಬ್ರೌನ್ ಸಂಪತ್ತಿಗಳ ಕುರಿತಾಗಿದೆ. ಅವುಗಳಿಂದ ಉತ್ತಮ ಆದಾಯ ಪಡೆಯುವ ಅವಶ್ಯಕತೆ ಇದೆ. ನಮ್ಮ ಸಂಪತ್ತುಗಳಿಂದ ಗರಿಷ್ಠ ಲಾಭ ಗಳಿಕೆ ಮಾಡುವ ಕಾಲ ಬಂದಿದೆ ಎಂಬುದನ್ನು ಭಾರತ ತಿಳಿಯಬೇಕಿದೆ' ಎಂದು ಸಿತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ-AC ಮೇಲೆ ಸಿಗುತ್ತಿದೆ ಭಾರೀ Discount, 25% ದಷ್ಟು ವಿದ್ಯುತ್ ಕೂಡಾ ಉಳಿತಾಯವಾಗಲಿದೆ

ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೇಗಳು, ವಿದ್ಯುತ್, ಪೈಪ್‌ಲೈನ್‌ಗಳು ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಹಡಗು ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ರಾಷ್ಟ್ರೀಯ ಹಣಗಳಿಸುವಿಕೆ ಪೈಪ್ ಲೈನ್ ಸಚಿವಾಲಯಗಳನ್ನು ಒಳಗೊಂಡಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೊಂಡಿದೆ.

ಇದನ್ನೂ ಓದಿ-ಅಕ್ಟೋಬರ್ ನಲ್ಲಿ ಮೂರನೇ ಕೊರೊನಾ ಅಲೆ, ದಿನಕ್ಕೆ 4-5 ಲಕ್ಷ ಪ್ರಕರಣ ದಾಖಲು ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News